ಹಸಿವಿನಿಂದ ಜನ ರೈಲ್ವೇ ನಿಲ್ದಾಣ ಮುಂದೆ ಇದ್ದಾರೆ:ಯು.ಟಿ ಖಾದರ್

ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಣೆಗೆ ಕಾಂಗ್ರೆಸ್ ಈ ಹಿಂದೆಯೇ ಸರ್ಕಾರಕ್ಕೆ ಆಗ್ರಹಿಸಿತ್ತು ಎಂದು  ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಶ್ರಮಿಕ‌ವರ್ಗಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ವಿಚಾರ ಹಿನ್ನೆಲೆಯಾಗಿ ಮಂಗಳೂರಿನಲ್ಲಿ ಮಾತನಾಡಿದ ಅವರು, ಬೀಡಿ ಕಾರ್ಮಿಕರು,ಟೈಲರ್, ಹೊಟೇಲ್ ಕಾರ್ಮಿಕರು, ಬಸ್ ಚಾಲಕ ನಿರ್ವಾಹಕರನ್ನು ಈ ಪ್ಯಾಕೇಜ್ ನಿಂದ ಕೈ ಬಿಟ್ಟಿದ್ದಾರೆ.  ಫೋಟೋಗ್ರಾಫರ್ ಗಳನ್ನೂ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಗೆ ಮನವಿ ಸಲ್ಲಿಸುತ್ತೇವೆ ಎಂದರು. ಇನ್ನೂ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರ ಪರದಾಟ ಹಿನ್ನಲೆ ಪ್ರತಿಕ್ರಿಯಸಿದ ಅವರು, ಬೇರೆ ಎಲ್ಲಾ ರಾಜ್ಯದಿಂದ ಉತ್ತರ ಭಾರತದ ಕಡೆಗೆ ರೈಲು ಹೋಗುತ್ತದೆ. ಆದರೆ ನಮ್ಮ ರಾಜ್ಯದಿಂದ ಇನ್ನೂ ರೈಲುಗಳ ಸಂಚಾರ ಆರಂಭವಾಗಿಲ್ಲ. ಇದೇ ರೀತಿ ಆದ್ರೆ ಕಾರ್ಮಿಕರು ಮತ್ತೆ ರಾಜ್ಯಕ್ಕೆ ಬರಲ್ಲ. ರಾಜ್ಯದ ಸಹವಾಸ ಸಾಕು ಅಂತಾ ಹೋಗುತ್ತಾರೆ. ಹಸಿವಿನಿಂದ ಜನ ರೈಲ್ವೇ ನಿಲ್ದಾಣ ಮುಂದೆ ಇದ್ದಾರೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ಸಮಸ್ಯೆ ಕೇಳಿತ್ತಿಲ್ಲ. ಕಾರ್ಮಿಕರನ್ನು ಕಳುಹಿಸದೆ ಸತಾಯಿಸಲಾಗುತ್ತಿದೆ. ಇದು ಮಾನವ ಹಕ್ಕು ಉಲ್ಲಂಘನೆ ಎಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಮದ್ಯ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ

Fri May 8 , 2020
ಮದ್ಯಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ ರಾಜಧಾನಿಯಲ್ಲಿ ನಾಳೆಯಿಂದಲೆ ಕ್ಲಬ್, ಪಬ್, ಬಾರ್ ಓಪನ್ ಮಾಡಲು ಅನುಮತಿ ನೀಡಲಾಗಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ತಿಳಿಸಿದ್ದಾರೆ. ಲಾಕ್‌ಡೌನ್‌ನಿಂದ ಇಷ್ಟು ದಿನ ಕ್ಲೋಸ್ ಆಗಿದ್ದ ಬಾರ್ ರೆಸ್ಟೊರೆಂಟ್‌ಗಳನ್ನು ಓಪನ್ ಮಾಡಲು ಸರ್ಕಾರ ಅವಕಾಶ ಕೊಟ್ಟಿದೆ. ಬರೀ ಮದ್ಯದ ಅಂಗಡಿಗಳಿಗೆ ಓಪನ್ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ನಾಳೆಯಿಂದ ಎಲ್ಲ ರೆಸ್ಟೋರೆಂಟ್‌ಗಳಿಗೂ ಅನುಮತಿ ನೀಡಿದೆ. Please follow and like us:

Advertisement

Wordpress Social Share Plugin powered by Ultimatelysocial