ಹೀರೋ ಸ್ಪ್ಲೆಂಡರ್ ಬೈಕಿಗೆ ಪೈಪೋಟಿಯಾಗಿ ಬರುತ್ತಿದೆ ಕೈಗೆಟುಕುವ ಬೆಲೆಯ ಹೊಸ ಹೋಂಡಾ 100cc ಬೈಕ್

 

ನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಹೊಸ 100cc ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹೋಂಡಾ 100cc ಬೈಕ್ 2023ರ ಮಾರ್ಚ್ 15 ರಂದು ಬಿಡುಗಡೆಯಾಗಲಿದೆ. ಈ ಹೊಸ ಹೋಂಡಾ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ.

ಈ ಹೊಸ ಹೋಂಡಾ 100cc ಬೈಕ್ ಹೆಸರನ್ನು ಕೂಡ ಬಹಿರಂಗಪಡಿಸಿಲ್ಲ. ಆದರೆ ಹೊಸ ಹೋಂಡಾ 100cc ಬೈಕ್ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ ಎಂದು ಖಚಿತಪಡಿಸಿದೆ. ಈ ಹೊಸ ಹೋಂಡಾ 100cc ಬೈಕ್ ಸಣ್ಣ ಸಾಮರ್ಥ್ಯದ ಎಂಜಿನ್‌ನೊಂದಿಗೆ ಬರುವ ಸಾದ್ಯತೆಗಳಿದೆ. ಪ್ರಸ್ತುತ, ಹೋಂಡಾ ಎರಡು 110cc ಮೋಟಾರ್ ಸೈಕಲ್‌ಗಳನ್ನು ಹೊಂದಿದ್ದು, ಅದು CD 110 DLX ಮತ್ತು Livo ಆಗಿದೆ.

ಈ ಬೈಕ್ ಗಳು 109.51cc ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 7,500 rpm ನಲ್ಲಿ ಗರಿಷ್ಠ 8.7 bhp ಪವರ್ ಮತ್ತು 5,500 rpm ನಲ್ಲಿ 9.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹೊಸ 100cc ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 97.2cc ಎಂಜಿನ್‌ನೊಂದಿಗೆ ಬರುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ ಬೈಕ್ 65 ಕಿ.ಮೀ ಗಿಂತ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. ಹೊಸ ಹೋಂಡಾ 100cc ಬೈಕಿಗೆ ಸುಮಾರು ರೂ.60,000 ರಿಂದ ರೂ.70,000 ವರೆಗೆ ಬೆಲೆ ಹೊಂದಿರುತ್ತದೆ. ಇನ್ನು ಹೋಂಡಾ ಕಂಪನಿಯು 100cc ವಿನ್ಯಾಸವು ಶೈನ್ ಬೈಕಿನ ರೀತಿಯಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ಬೈಕಿನಲ್ಲಿ ಅಲಾಯ್ ವ್ಹೀಲ್ ಗಳು, ಸಿಂಗಲ್-ಪೀಸ್ ಸೀಟ್ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೊಂದಿರುತ್ತದೆ.

ಈ ಹೊಸ 100cc ಹೋಂಡಾ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಸೈಡೆಡ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿರುತ್ತದೆ. ಇನ್ನು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಸ್ಟಾರ್ಟ್ ಫಂಕ್ಷನ್, ಗಟ್ಟಿಮುಟ್ಟಾದ ಗ್ರ್ಯಾಬ್ ರೈಲ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಬಹುದು. ಇನ್ನು ನೇರವಾದ ಹ್ಯಾಂಡಲ್‌ಬಾರ್, ಸೆಮಿ -ಡಿಜಿಟಲ್ ಕ್ಲಸ್ಟರ್ ಇತ್ಯಾದಿಗಳು ಲಭ್ಯವಿರುತ್ತವೆ.

ಹೋಂಡಾ ಕಂಪನಿಯು ತನ್ನ CB350 ಕೆಫೆ ರೇಸರ್ ಬೈಕ್ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ನೂತನ ಬೈಕ್ ವಿನ್ಯಾಸದ ದೃಷ್ಟಿಯಿಂದ ಆಕರ್ಷಕ ಲುಕ್ ಹೊಂದಿರಲಿದ್ದು, ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಪ್ರಮುಖವಾಗಿ ಈ ಬೈಕ್ ಗ್ಲೊಸಿ ಬ್ಲೂ/ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಹೆಡ್ ಲ್ಯಾಂಪ್ ನೋಡಲು ಅತ್ಯಾಕರ್ಷವಾಗಿದೆ. ಜೊತೆಗೆ ಸಿಂಗಲ್ ಪಿಸ್ ಲೆದರ್ ಸೀಟ್ ಹೊಂದಿದೆ.

ಈ ಬೈಕಿನಲ್ಲಿ ಹ್ಯಾಂಡಲ್‌ಬಾರ್ ಸವಾರರಿಗೆ ಅನುಕೂಲಕರ ರೀತಿಯಲ್ಲಿಯೇ ಇದ್ದು, ಅಲಾಯ್ ವೀಲ್ಸ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜರ್‌ ಸೇರಿ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಹೊಸ ಹೋಂಡಾ CB350 ಕೆಫೆ ರೇಸರ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 348.36 ಸಿಸಿ 4-ಸ್ಟೋಕ್ SI BS-VI ಎಂಜಿನ್ ಹೊಂದಿದೆ. ಪ್ರತಿಯೊಂದು ಬೈಕಿಗೆ ಸಸ್ಪೆನ್ಷನ್ ಬ್ರೇಕಿಂಗ್ ಸಿಸ್ಟಮ್ ಮುಖ್ಯವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾ ಪೇಜ್ ಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಯಮಾಲ ಒಬ್ಬ ಕನ್ನಡ ಚಿತ್ರನಟಿ.

Tue Feb 28 , 2023
  ನಮ್ಮ ಇಂದಿನ ಯುಗದ ಕನ್ನಡದ ಹೆಣ್ಣುಮಕ್ಕಳ ಸಾಧನೆಯ, ಧೈರ್ಯ, ಸಾಹಸಗಳ ವಿಷಯವನ್ನು ನೆನೆಯುವಾಗ ಆ ಪಟ್ಟಿಯಲ್ಲಿ ಜಯಮಾಲ ಅವರು ಕೂಡಾ ಸೇರ್ಪಡೆಯಾಗುತ್ತಾರೆ. ಫೆಬ್ರುವರಿ 28 ಅವರ ಹುಟ್ಟುಹಬ್ಬ. ದಕ್ಷಿಣ ಕನ್ನಡದಿಂದ ಚಿತ್ರರಂಗಕ್ಕೆ ಆಗಮಿಸಿದ ಜಯಮಾಲ ಅವರು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರೊಡನೆ ಪ್ರಮುಖ ಚಿತ್ರಗಳಾದ ಪ್ರೇಮದ ಕಾಣಿಕೆ, ಗಿರಿಕನ್ಯೆ, ಶಂಕರ್ ಗುರು, ಬಡವರ ಬಂಧು, ದಾರಿ ತಪ್ಪಿದ ಮಗ, ಬಭ್ರುವಾಹನ ಮುಂತಾದವುಗಳಲ್ಲಿ ನಟಿಸಿ ಪ್ರಸಿದ್ಧರಾದರು. ನಂತರದಲ್ಲಿ […]

Advertisement

Wordpress Social Share Plugin powered by Ultimatelysocial