ಹೆಚ್ಚುತ್ತಿರುವ ಕೊರೊನಾ ಭೀತಿ- ಬೀದರ್‌ನಲ್ಲಿ ಸಾಮಾಜಿಕ ಅಂತರ ಮರೆತ ಜನ

ಬೀದರ್ ಮಾರುಕಟ್ಟೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಾರಿಗೆ ತಂದ ಪರಿಷ್ಕೃತ ನಿಷೇಧಾಜ್ಞೆ ಸಾಮೂಹಿಕವಾಗಿ ಉಲ್ಲಂಘನೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ರಸ್ತೆಯಲ್ಲಿ ಗುಂಪು ಸೇರುತ್ತಿದ್ದಾರೆ. ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಣುತ್ತಿಲ್ಲ.

ಬಹುತೇಕ ಗ್ರಾಹಕರು ಮುಖಕ್ಕೆ ಮಾಸ್ಕ್ ಹಾಕಿಲ್ಲ. ಅಷ್ಟೇ ಅಲ್ಲದೆ ಅಂಗಡಿ ಮಾಲೀಕರು ಕೂಡ ಮುಖಕ್ಕೆ ಮಾಸ್ಕ್ ಹಾಕದೆ ನಿರ್ಲಕ್ಷ್ಯ ತೋರುತ್ತಿರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ. ಕ್ವಾರಂಟೈನ್ ಮಾಡಬೇಕಾದವರು ಬೇಕಾಬಿಟ್ಟಿಯಾಗಿ ರಸ್ತೆಗೆ ಬರ್ತಿದ್ದಾರೆ. ಇದರಿಂದ ಕೊವಿಡ್-೧೯ ವೈರಾಣು ಸೋಂಕು ಹರಡುವ ಸಾಧ್ಯತೆಗಳಿದ್ದು, ಸ್ಥಳೀಯ ತಾಲೂಕು ಆಡಳಿತ ಇದನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪ.ಜಾತಿ/ ಪ.ಪಂಗಡದ ಕುಂದುಕೊರತೆ ಸಭೆ

Tue Jul 14 , 2020
ದಲಿತರ ಮೇಲೆ ದೌರ್ಜನ್ಯ ಅಥವಾ ಅಸ್ಪೃಶ್ಯತೆ ಆಚರಣೆಯಂತಹ ದೂರುಗಳು ಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪಿಎಸ್‌ಐ ಕಾಂತರಾಜು ತಿಳಿಸಿದರು. ಮಧುಗಿರಿಯಲ್ಲಿ ಪೋಲಿಸ್ ಠಾಣಾ ಆವರಣದಲ್ಲಿ ಕರೆಯಲಾಗಿದ್ದ ಪ.ಜಾತಿ/ ಪ.ಪಂಗಡದ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲೂ ದಲಿತರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ದಲಿತ ಮುಖಂಡರು ಸಹ ನಮ್ಮೊಡನೆ ಸಹಕರಿಸಬೇಕು ಸಮಸ್ಯೆಗಳ […]

Advertisement

Wordpress Social Share Plugin powered by Ultimatelysocial