ಕೋವಿಡ್ ೧೯ ಲಾಕ್ಡೌನ್ ಮಧ್ಯೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಇಂದಿನಿಂದ ಪುನರಾರಂಭಗೊಂಡಿದೆ. ಸ್ಥಗಿತಗೊಂಡ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಭಾರತವು ಇಂದಿನಿಂದ ಕೊರೋನಾವೈರಸ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸುತ್ತಿರುವ ಭಾಗವಾಗಿ ಈ ಉಪಕ್ರಮ ಜಾರಿಯಾಗಿದೆ. ಮಾರ್ಚ್ ೨೪ ರಂದು ೨೧ ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿತ್ತು. ಮುಂಬೈನ ವಾಶಿ, ನಾಗ್ಪುರದ ಬೋರ್ಖೆಡಿ, ಗುರುಗ್ರಾಮ್, ಚೆನ್ನೈನ ಪುರೂರ್ ವಾರಣಾಸಿಯ ದಾಫಿಯಲ್ಲಿ ಟೋಲ್ ಪ್ಲಾಜಾಗಳು ಚಾಲನೆಗೊಂಡಿದ್ದು ಅಲ್ಲಿನ ನೌಕರರು ಕೈಗ್ಲೌಸ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುತ್ತಿರುವುದು ಕಂಡುಬಂದಿದೆ.