ಹೈದರಾಬಾದ್ ಏರ್‌ಪೋರ್ಟ್ಗೆ ಕಾಂಟ್ಯಾಕ್ಟ್ ಲೆಸ್ ಕಾರ್ ಪಾರ್ಕಿಂಗ್

ಕೋವಿಡ್ ೧೯ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶಿಷ್ಟ ಹೆಜ್ಜೆಯನ್ನಿಟ್ಟಿರುವ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ನಿಲ್ದಾಣದ ಸಮೀಪವಿರುವ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣ ಸ್ಪರ್ಶ ರಹಿತ ತಂತ್ರ ಜ್ಞಾನಕ್ಕೆ ಉನ್ನತೀಕರಿಸಿದೆ. ದೇಶದಲ್ಲಿ ಇಂಥ ಪ್ರಯತ್ನವಾಗಿರುವುದು ಇದೇ ಮೊದಲು. ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಹಾಗೂ ನ್ಯಾಷ ನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿರುವ ಜಿಎಚ್‌ಐಎಎಲ್ ಈ ವ್ಯವಸ್ಥೆಯನ್ನು ಜಾರಿಗೆಗೊಳಿಸಿದೆ. ಎನ್‌ಇಟಿಸಿ ಅಡಿಯಲ್ಲಿ ಫಾಸ್ಟ್ಟ್ಯಾಗ್‌ಗಳನ್ನು ನೀಡುವ ದೇಶದ ೧೦ ಬ್ಯಾಂಕುಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ವಿಮಾನ ನಿಲ್ದಾಣಕ್ಕೆ ಬರುವ ಗ್ರಾಹಕರು ತಮ್ಮ ಕಾರುಗಳಿಗೆ ಪ್ರೀ-ಪೇಯ್ಡ ಫಾಸ್ಟ್ಟ್ಯಾಗ್ ಅಳವಡಿಕೆ ಕಡ್ಡಾಯವಾಗಿರುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ವಂದೇ ಭಾರತ್ ಮಿಶನ್ ಜುಲೈ ೧೨-೨೬ರ ವರೆಗೆ

Sat Jul 11 , 2020
ವಂದೇ ಭಾರತ್ ಮಿಶನ್ ಯೋಜನೆಯಡಿ ಅನಿವಾಸಿ ಭಾರತೀಯರಿಗೆ ಜು.೧೨ ರಿಂದ ಜು.೨೬ರ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಮರಳಿ ಉದ್ಯೋಗ, ಉದ್ಯಮ ಕ್ಷೇತ್ರದ ದೇಶಕ್ಕೆ ಹೋಗಲು ಅನುವು ಮಾಡಿಕೊಡುವಂತೆ ಅನಿವಾಸಿ ಭಾರತೀಯರು ಮನವಿ ಮಾಡಿದ್ದರು. ಈ ಸಂಬAಧ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ವಿದೇಶಕ್ಕೆ ಹೋಗುವವರಿಗೆ ಪ್ರಯಾಣಕ್ಕೆ ಅನುಮತಿ ನೀಡುವಂತೆ ವಿನಂತಿಸಿದ್ದರು. ಭಾರತೀಯ ವಿಮಾನ ಯಾನ ಸಂಸ್ಥೆಯು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಪ್ರಯಾಣಿಕರು […]

Advertisement

Wordpress Social Share Plugin powered by Ultimatelysocial