ಹೊರ ಜಿಲ್ಲೆಗಳಿಗೆ ತೆರಳಲು ಒನ್ ವೇ ಪಾಸ್ :ಈಶ್ವರಪ್ಪ

ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳೋದಕ್ಕೆ, ಹೊರ ಜಿಲ್ಲೆಗಳಲ್ಲಿ ಸಿಲುಕಿರುವಂತವರನ್ನು ಕರೆದುಕೊಂಡು ಬರೋದಕ್ಕೆ ಒನಾ ವೈ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು  ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಒನಾ ವೈ ಪಾಸ್ ವಿತರಣೆ ಮಾಡಲಾಗುತ್ತದೆ . ಆದ್ರೇ ಚಂಕಿಗ್ ಕಣ್ ತಪ್ಪಿಸಿ, ಪಾಸ್ ಇಲ್ಲದೇ ಜಿಲ್ಲೆ ಪ್ರವೇಶಿಸಿದ್ರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳಲು ಒನ್ ವೇ ಪಾಸ್ ವಿತರಿಸಲಾಗುತ್ತದೆ. ಒಮ್ಮೆ ಜಿಲ್ಲೆಯಿಂದ ಹೊರಗೆ ಹೋಗಬಹುದೇ ವಿನಹ, ಮತ್ತೆ ವಾಪಾಸ್ ಬರಲು ಅವಕಾಶ ಇಲ್ಲ. ಜಿಲ್ಲೆಯಿಂದ ಬೆಂಗಳೂರಿಗೆ ಹೋಗಲು ಬಯಸುವವರಿಗೆ ಒನ್ ವೇ ಪಾಸ್ ವಿತರಣೆ ಮಾಡಲಾಗುತ್ತದೆ. ಪಾಸ್ ಪಡೆದವರು ಬೆಂಗಳೂರಿಗೆ ಹೋಗಬಹುದೇ ವಿನಹ, ಅಲ್ಲಿಂದ ಮತ್ತೆ ಜಿಲ್ಲೆ ಪ್ರವೇಶಿಸಲು ಅವಕಾಶ ಇಲ್ಲ. ಬೇರೆ ಕಡೆ ಸಿಲುಕಿರುವವರನ್ನು ಹೋಗಿ ಕರೆದುಕೊಂಡು ಬರಲು ಸಹ ಪಾಸ್ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಲ್ಲದೇ, ತಾಲೂಕುಗಳಲ್ಲಿ ತಹಶೀಲ್ದಾರ್ ವಿತರಿಸಲಿದ್ದಾರೆ. ಜನರು ಗೊಂದಲಕ್ಕೆ ಒಳಗಾಗದೇ ಪಾಸ್ ಪಡೆದು ತೆರಳಬಹುದ. ಬೇರೆ ಜಿಲ್ಲೆಗಳಿಂದ ಪಾಸ್ ಇಲ್ಲದೇ ಅನಧಿಕೃತವಾಗಿ ಅಡ್ಡದಾರಿಯ ಮೂಲಕ ಜಿಲ್ಲೆಗೆ ಪ್ರವೇಶಿಸುವವ ವಿರುದ್ಧ ಪೊಲೀಸರು ಹದ್ದಿನ ಕಣ್ಣು ನಡೆಲಿದ್ದಾರೆ. ಒಂದು ವೇಳೆ ಸಿಕ್ಕಿ ಬಿದ್ದರೇ ಅಂತವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ದಿನನಿತ್ಯ ನೂರಾರು ಬೆದರಿಕೆ,ಅಶ್ಲೀಲ ಕರೆಗಳು ಬರುತ್ತಿವೆ:ಕರಂದ್ಲಾಜೆ

Tue May 5 , 2020
ದುಬೈ, ಮಸ್ಕತ್ ನಿಂದ ನಿರಂತರ ಬೆದರಿಕೆ ಕರೆಬರುತ್ತಿದೆ  ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, “ಕೇರಳದ ಹಿಂದೂ ಕಾರ್ಯಕರ್ತನಿಗೆ ಮಸ್ಕತ್ ನಲ್ಲಿ ಹಲ್ಲೆ ಮಾಡಿದ್ದರು. ಆ ಘಟನೆಯ ವಿರುದ್ಧ ನಾನು ಸಿಡಿದೆದ್ದಿದ್ದೆ. ಹೀಗಾಗಿ ಈ ಬೆದರಿಕೆ ಕರೆ ಬರುತ್ತಿದೆ”. ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೆ. ನನಗೆ ದಿನನಿತ್ಯ ನೂರಾರು ಬೆದರಿಕೆ, ಅಶ್ಲೀಲ ಕರೆಗಳು ಬರುತ್ತಿವೆ. ದುರುದ್ದೇಶದಿಂದ ಫೋನಿನ ಮೇಲೆ […]

Advertisement

Wordpress Social Share Plugin powered by Ultimatelysocial