ಹೊಳೆನರಸೀಪುರದ ಪ್ರಮುಖ ವ್ಯಾಪಾರ ವಹಿವಾಟು ಬಂದ್

ಹೊಳೆನರಸೀಪುರದ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪೇಟೆ ಮುಖ್ಯ ರಸ್ತೆಯನ್ನು 14 ದಿನಗಳ ವರೆಗೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಭಾಷ್ ಚೌಕದಿಂದ, ಚೆನ್ನಾಂಬಿಕ ಸರ್ಕಲ್ ವರೆಗೆ ಸೀಲ್ ಡೌನ್ ಮಾಡಿ, ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು, 14 ದಿನಗಳ ಕಾಲ ಯಾರು ಒಳಗೆ ಬರುವಂತಿಲ್ಲ ಮತ್ತು ಹೊರಗೆ ಹೋಗುವಂತಿಲ್ಲ, ಮೆಡಿಕಲ್ ಶಾಪ್ ಗಳು ಮಾತ್ರ ತೆರೆಯಲು ಅವಕಾಶವನ್ನು ನೀಡಲಾಗುತ್ತದೆ. ಎಂದು ತಿಳಿಸಲಾಯಿತು ಪ್ರತಿಯೊಂದು ಮನೆ ಮನೆಗೂ ಪುರಸಭೆ ವತಿಯಿಂದ ಮೇಲ್ವಿಚಾರಕರನ್ನು ,ಸಹಾಯಕರನ್ನು ನೇಮಿಸಲಾಗುತ್ತಿದ್ದು, ಜೀವನಾವಶ್ಯಕ ವಸ್ತುಗಳನ್ನು ಮನೆ ಮನೆಗೆ ಪೂರೈಸಲಾಗುತ್ತದೆ. ಎಂದು ಹೊಳೆನರಸೀಪುರದ ಸಬ್ ಇನ್ಸ್ಪೆಕ್ಟರ್ ಪ್ರಮೋದ್ ಮನವಿ ಮಾಡಿದ್ದಾರೆ, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ಯಾನಿಟೈಸರ್ ಬಳಸಿ ಸರ್ಕಾರದ ನೀತಿ ನಿಯಮಗಳನ್ನು ಜಾರಿಗೆ ತರಲು ಸಹಕರಿಸಬೇಕೆಂದು ಪುರಸಭೆ ವತಿಯಿಂದ ವಿನಂತಿಸಲಾಯಿತು.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಕಾರ್ಮೋಡದಲ್ಲಿ ಕರಗಿದ ಜಾತ್ರ ಮಹೋತ್ಸವ

Sun Jul 26 , 2020
ಜನರಲ್ಲಿ ಕರೋನಾ ವೈರಸ್ ಹರಡುವ ಭಿತಿಯಿಂದ ಜಿಲ್ಲೆಯ ಪ್ರಸಿದ್ಧ ಸೀಮಿ ನಾಗನಾಥ ದೇವಸ್ಥಾನ ಜಾತ್ರೆಯನ್ನ ಜಿಲ್ಲಾಡಳಿತ. ರದ್ದುಗೊಳಿಸಿದೆ ಬೀದರನ ಹುಮನಾಬಾದ,ಭಾಲ್ಕಿ ಮೂರು ತಾಲೂಕುಗಳ ಗಡಿ ಪ್ರದೇಶದಲ್ಲಿ ಬರುವ ಹಳಿಖೇಡ ಸೀಮಿ ನಾಗನಾಥ ದೇವಸ್ಥನಾ ಜಾತ್ರ ಮಹೊತ್ಸವವನ್ನು ನಾಗರ ಪಂಚಮೀ ಹಬ್ಬದಂದು ಪ್ರತಿ ವರ್ಷ ಅತಿವಿಜ್ರಂಭಣೆಯಿAದ ಜರಗುತ್ತಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ ,ಆಂಧ್ರಪ್ರದೇಶದ ಸಾವಿರಾರು ಭಕ್ತರು ಬರುತ್ತಾರೆ ಈ ವರ್ಷ ನಡೆಯಬೇಕಾದ ಜಾತ್ರಾ ಮಹೋತ್ಸವವನ್ನು […]

Advertisement

Wordpress Social Share Plugin powered by Ultimatelysocial