ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲಗೈ ವೇಗದ ಬೌಲರ್ ಆದ ಹರ್ಷಲ್ ಪಟೇಲ್ ವಿಷೇಶ ದಾಖಲೆ ಬರೆದಿದ್ದಾರೆ. ಐಪಿಎಲ್‌ 14 ನೆ ಆವೃತ್ತಿಯ ಈ ಪಂದ್ಯಾವಳಿಯಲ್ಲಿ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದು, ತಂಡಕ್ಕಾಗಿ ವಿಕೇಟ್‌ ಗಳ ಮಳೆಯನ್ನೆ ಸುರಿಸಿದ್ದಾರೆ. ಬುಧವಾರ ಅಬುಧಾಬಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುಧ್ಧ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಸೇರಿದಂತೆ ಭರ್ಜರಿ ಮೂರು ವಿಕೆಟ್‌ ಪಡೆಯುವ ಮೂಲಕ ಹೊಸ ದಾಖಲೆಯನ್ನೆ ಬರೆದಿದ್ದಾರೆ.

ಐಪಿಎಲ್‌ ನ ಸೀಸನ್‌ ವೊಂದರಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತಿಯ ಬೌಲರ್ ಎಂಬ ಕೀರ್ತಿಗೆ ಈಗ ಹರ್ಷಲ್ ಪಟೇಲ್ ಪಾತ್ರರಾಗಿದ್ದಾರೆ. ಇವರು ಆಡಿರುವ ಕೇವಲ ಹದಿಮೂರೆ ಪಂದ್ಯಗಳಲ್ಲಿ ಒಟ್ಟು 29 ವಿಕೆಟ್‌ಗಳನ್ನ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಮೂಲಕ 2020 ರಲ್ಲಿ ಜಸ್‌ಪ್ರೀತ್ ಬೂಮ್ರಾ ಬರೆದ 27 ವಿಕೆಟ್‌ಗಳ ದಾಖಲೆಯನ್ನ ಅಳಿಸಿ ಹಾಕಿದ್ದಾರೆ. ಕೇವಲ ಭಾರತಿಯ ಬೌಲರ್‌ಗಳಲ್ಲದೆ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಒಟ್ಟು ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಮೂರನೆ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 32 ವಿಕೆಟ್ಗಳ ದಾಖಲೆಯೊಂದಿಗೆ ಡ್ವೇನ್ ಬ್ರಾವೊ ಇದ್ದು, 2013 ರ ಈ ದಾಖಲೆ ಸಹ ಹರ್ಷಲ್ ಪಟೇಲ್ ಮೀರಿಸುವ ಸಾಧ್ಯತೆಗಳಿವೆ.

Please follow and like us:

Leave a Reply

Your email address will not be published. Required fields are marked *

Next Post

ʼಸಲಗʼ ಗೆ   ಸಿದ್ದು , ಪುನೀತ್‌ ರಾಜ್‌ಕುಮಾರ್ ಸಾಥ್

Thu Oct 7 , 2021
ದುನಿಯಾ ವಿಜಯ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ‘ಸಲಗ’ ಚಿತ್ರ ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ. ಸಿನಿಮಾ ತಂಡದಿಂದ  ಈಗಾಗಲೇ ಪ್ರಚಾರ ಜೋರಾಗಿದ್ದು ಸಿನಿಮಾವನ್ನು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನದಲ್ಲಿದೆ. ‘ಸಲಗ’ ಚಿತ್ರತಂಡ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ‘ಸಲಗ’ದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸಹ ಬರಲಿದ್ದಾರೆ. ಪುನೀತ್ ರಾಜ್‌ಕುಮಾರ್, ಸಿದ್ದರಾಮಯ್ಯ ಹಾಗೂ ಇನ್ನಿತರು ಅತಿಥಿಗಣ್ಯರು ‘ಸಲಗ’ […]

Advertisement

Wordpress Social Share Plugin powered by Ultimatelysocial