ಹೊಸ ಬಣ್ಣದಲ್ಲಿ ಕಾಣಿಸಲಿದೆ ವೆಬ್ ಸೈಟ್

ಭಾರತ ಸರ್ಕಾರ, ಪ್ರಧಾನಮಂತ್ರಿಯ ಅಧಿಕೃತ ವೆಬ್ ಸೈಟ್ pmindia.gov.in ನಲ್ಲಿ ಬದಲಾವಣೆ ಮಾಡಲಿದೆ. ಪ್ರಧಾನ ಮಂತ್ರಿ ವೆಬ್ ಸೈಟ್ ಹೊಸ ಬಣ್ಣದಲ್ಲಿ ಕಾಣಿಸಲಿದೆ. ಸರ್ಕಾರ ಹೊರಡಿಸಿದ ಪ್ರಸ್ತಾವನೆಯ ಪ್ರಕಾರ, ಈಗ ವೆಬ್ ಸೈಟ್ ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಮತ್ತು 22 ಭಾರತೀಯ ಭಾಷೆಗಳಲ್ಲಿ ವಿಕ್ಷಿಸಬಹುದು. ಪ್ರಸ್ತುತ, ಭಾರತದ ಪ್ರಧಾನ ಮಂತ್ರಿಯ ವೆಬ್ ಸೈಟ್ 12 ಭಾಷೆಗಳಲ್ಲಿ ಲಭ್ಯವಿದ್ದು, ರಾಷ್ಟ್ರೀಯ   ಇ-ಆಡಳಿತ ವಿಭಾಗ ನೀಡಿದ ಆರ್‌ಎಫ್‌ಪಿ ಪ್ರಕಾರ, ವೆಬ್‌ಸೈಟ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಅರ್ಹ ಮತ್ತು ಅನುಭವಿ ಏಜೆನ್ಸಿಯನ್ನು ನೇಮಿಸಿಕೊಳ್ಳಲು ಸರ್ಕಾರ ಬಯಸಿದೆ. ವೆಬ್‌ಸೈಟ್ ಅಭಿವೃದ್ಧಿ ಮತ್ತು ನಿರ್ವಹಣೆ ಜೊತೆಗೆ 22 ಅಧಿಕೃತ ಭಾರತೀಯ ಭಾಷೆಗಳು ಸೇರಿದಂತೆ ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಪಿಎಂ ಇಂಡಿಯಾ ಪೋರ್ಟಲ್ ಅನ್ನು ರಚಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸೋಮವಾರ ಕಾಂಗ್ರೆಸ್ ನಾಯಕರ ಸಭೆ

Fri Jul 24 , 2020
ವೈದ್ಯಕೀಯ ಉಪಕರಣಗಳ ಖರೀದಿ ಹಗರಣ ಕುರಿತಂತೆ ಮುಂದೆ ಯಾವ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಬೇಕು ಎಂಬುದಾಗಿ ಚರ್ಚಿಸುವ ಸಂಬಂಧ ಕಾಂಗ್ರೆಸ್ ಪಕ್ಷದ ಸಭೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆದಿದ್ದಾರೆ. ರಾಜ್ಯದಲ್ಲಿ ಕೊರೊನಾ ಕಿಟ್ ಖರೀದಿ ಭ್ರಷ್ಟಾಚಾರ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಸೋಮವಾರದ ಸಭೆ ತೀವ್ರ ಕುತೂಹಲ ಮೂಡಿಸಿದೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಂದಿನ ಹೆಜ್ಜೆ ಏನ್ ಇಡಲಿದೆ ಎಂಬ ಬಗ್ಗೆ ಕುತೂಹಲ […]

Advertisement

Wordpress Social Share Plugin powered by Ultimatelysocial