೫೫ ವರ್ಷಕ್ಕೆ ಮೇಲ್ಪಟ್ಟ ಮುಂಬೈ ಪೊಲೀಸರಿಗೆ ರಜೆ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಸೋಮವಾರ ಮೂವರು ಪೊಲೀಸರಲ್ಲಿ ಸೋಂಕು ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ, ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಒದಗಿಸಲು ೫೫ ವರ್ಷಕ್ಕೆ ಮೇಲ್ಪಟ್ಟ ಪೊಲೀಸರಿಗೆ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ. ಇಂದು ಪತ್ತೆಯಾದ ಮೂವರು ಕೊರೊನಾ ಸೋಂಕಿತ ಪೊಲೀಸರು ೫೦ ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಮುಂಬೈ ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.

ಇಂದು ಮೂವರು ಮುಂಬೈ ಪೊಲೀಸರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಅವರೆಲ್ಲರಿಗೂ ೫೦ ವರ್ಷ ದಾಟಿದೆ. ಆ ಹಿನ್ನೆಲೆಯಲ್ಲಿ ೫೫ ವರ್ಷ ದಾಟಿದ ಪೊಲೀಸರು ಮತ್ತು ಅಧಿಕಾರಿಗಳನ್ನು ರಕ್ಷಿಸುವುದಕ್ಕೊಸ್ಕರ ಅವರಿಗೆ ರಜೆಯ ಮೇಲೆ ತೆರಳುವಂತೆ ಸೂಚಿಸಲಾಗಿದೆ ಎಂದು ಮುಂಬೈ ಪೊಲೀಸ್ ಇಲಾಖೆ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಚೀನಾದ ವಿರುದ್ಧ ಅಮೇರಿಕಾ ಆಕ್ರೋಶ

Tue Apr 28 , 2020
ವಾಷಿಂಗ್ಟನ್: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಅಪಾರ ಪ್ರಮಾಣದ ಸಾವು-ನೋವು, ನಷ್ಟಗಳಿಂದ ಮೊದಲ ಬಾರಿಗೆ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶಕ್ಕೀಡಾಗಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ. ಕೊರೋನಾ ವೈರಸ್ ಹಬ್ಬಿಸಿದ ಚೀನಾದಿಂದ ೧೪೦ ಶತಕೋಟಿ ಡಾಲರ್ ಪರಿಹಾರವನ್ನು ಜರ್ಮನಿ ಕೇಳಿದರೆ, ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರವನ್ನು ಅಮೆರಿಕಾ ಕೇಳಿದೆ. Please follow and like us:

Advertisement

Wordpress Social Share Plugin powered by Ultimatelysocial