1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ

ವದೆಹಲಿ: ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿ ಆದೇಶಿಸಿತ್ತು. ಆ ಬಳಿತ ತೀವ್ರ ವಿರೋಧದ ನಂತ್ರ, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸೋದಾಗಿ ಆದೇಶದಲ್ಲಿ ತಿಳಿಸಿತ್ತು. ಇದೀಗ ಕೇಂದ್ರದ ಶಿಕ್ಷಣ ಸಚಿವಾಲಯದಿಂದಲೇ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಲೆಗಳಲ್ಲಿ 1ನೇ ತರಗತಿ ದಾಖಲು ಮಾಡಲು 6 ವರ್ಷ ನಿಗದಿ ಮಾಡುವಂತೆ ನಿರ್ದೇಶನ ನೀಡಿದೆ.

ಪ್ರಸ್ತುತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 1ನೇ ತರಗತಿಗೆ ಮಕ್ಕಳ ದಾಖಲು ಆಗೋದಕ್ಕೆ ಕನಿಷ್ಠ ವಯೋಮಿತಿ ಬೇರೆ ಬೇರೆಯೇ ಆಗಿದೆ. ಆದ್ರೇ ಈಗ ದೇಶಾದ್ಯಂತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿ ಹಿನ್ನಲೆಯಲ್ಲಿ, ಎಲ್ಲಾ ರಾಜ್ಯಗಳಲ್ಲೂ ಸಮಾನ ವಯೋಮಿತಿ ನಿಗದಿಪಡೆಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ.

ಅಂದಹಾಗೇ ಎನ್‌ಇಪಿಯಂತೆ ಎಲ್ಲಾ ಮಕ್ಕಳಿಗೆ ( 3-8 ವರ್ಷ ವಯೋಮಾನ) ಪ್ರಾಥಮಿಕ ಶಿಕ್ಷಣ ಹಂತದಲ್ಲಿ 5 ವರ್ಷಗಳ ಕಲಿಕಾ ಅವಕಾಶ ಒದಗಿಸಲಾಗುತ್ತದೆ. ಈ ವಯೋಮಾನದಲ್ಲಿ ಮೊದಲ ಮೂರು ವರ್ಷ ಪೂರ್ವ ಪ್ರಾಥಮಿಕ ಹಾಗೂ ನಂತ್ರದ ಎರಡು ವರ್ಷಗಳು 1, 2ನೇ ತರಗತಿ ವ್ಯಾಸಂಗ ಇರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದಂಪತಿಗೆ 30 ದಿನ ಸಂಬಳ ಸಹಿತ ರಜೆ! ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

Thu Feb 23 , 2023
ಬೀಜಿಂಗ್​: ಕ್ಷೀಣಿಸುತ್ತಿರುವ ಜನಸಂಖ್ಯೆಯು ಚೀನಾಗೆ ಕಳವಳಕಾರಿ ಸಂಗತಿಯಾಗಿದೆ. ಅದರಲ್ಲೂ ಯುವಪಡೆ ಬಲ ಕಡಿಮೆಯಾಗಿದ್ದು, ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಮತ್ತೆ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ತನ್ನೊಳಗೆ ಅನೇಕ ಪ್ರಯೋಗಗಳನ್ನು ಮಾಡುತ್ತಿದೆ. ಕಳೆದ ವರ್ಷ ಚೀನಾ ಅತಿ ಕಡಿಮೆ ಜನನ ಪ್ರಮಾಣ ದರವನ್ನು ಹೊಂದಿದೆ. ಕಳೆದ ಆರು ದಶಕಗಳಲ್ಲೇ ಇದೆ ಮೊದಲು ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. 2022ರ ವರದಿಯ ಪ್ರಕಾರ ಪ್ರತಿ ಸಾವಿರ ಜನರಿಗೆ 6.77 […]

Advertisement

Wordpress Social Share Plugin powered by Ultimatelysocial