13 ವರ್ಷದ ನೇತ್ರಾಗೆ ವಿಶ್ವಸಂಸ್ಥೆಯಿಂದ ಗೌರವ

ಮದುರೈ: ಕರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ನಿರ್ಗತಿಕರ ನೆರವಿಗೆ ನಿಂತ ತಮಿಳುನಾಡಿನ ಮಧುರೈ ಮೂಲದ ೧೩ ವರ್ಷದ ಬಾಲಕಿಯನ್ನು ವಿಶ್ವಸಂಸ್ಥೆ ಮೆಚ್ಚಿ, ಗೌರವಿಸಿದೆ. ಬಾಲಕಿ ನೇತ್ರಾಳನ್ನು ಅಭಿವೃದ್ಧಿ ಮತ್ತು ಶಾಂತಿಗಾಗಿ ಇರುವ ವಿಶ್ವಸಂಸ್ಥೆ ಅಸೋಸಿಯೇಷನ್ ((UNADP) ನ ಬಡವರ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿದೆ. ನೇತ್ರಾಳ ತಂದೆ ಸಲೂನ್ ಶಾಪ್ ಮಾಲೀಕನಾಗಿದ್ದು, ತಮ್ಮ ಮಗಳ ಶಿಕ್ಷಣಕ್ಕಾಗಿ ೫ ಲಕ್ಷ ರೂ. ಹಣವನ್ನು ಕೂಡಿಟ್ಟಿದ್ದರು. ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ ಈ ಹಣವನ್ನ ನೀಡುವಂತೆ ತಂದೆಯ ಮನವೊಲಿಸಿದ ನೇತ್ರಾ, ಹಣವನ್ನ ಬಡವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಈಕೆಯ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆ ಮನಸೋತು ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.

Please follow and like us:

Leave a Reply

Your email address will not be published. Required fields are marked *

Next Post

 ನಕಲಿ ಬ್ರಾಂಡ್ ಬಟ್ಟೆ ಮಾರುತ್ತಿದ್ದವನ ಬಂಧನ   

Sat Jun 6 , 2020
ವೈಟ್‍ಫೀಲ್ಡ್‍ನ ಶ್ರೀರಾಮ ದೇವಸ್ಥಾನದ ರಸ್ತೆಯಲ್ಲಿರುವ ರೆಡ್‍ಕೋಟ್ ಶಾಪ್ ನ ಮಾಲಿಕ ಅವಿನಾಶ್ ಎಂಬಾತ ಪ್ರತಿಷ್ಠಿತ ಕಂಪೆನಿಗಳಾದ ಝರಾ, ಬರ್ಬೇರಿ, ನೈಕ್, ಯುಎಸ್ ಪೋಲೊ, ಅಡಿದಾಸ್ ಹಾಗೂ ಜಿಯುಸಿಸಿಐ ಮತ್ತಿತರ ಸಂಸ್ಥೆಗಳ ನಕಲಿ ಬಟ್ಟೆಗಳನ್ನು ದಾಸ್ತಾನು ಮಾಡಿಕೊಂಡು ಕಾಪಿರೈಟ್ಸ್ ಉಲ್ಲಂಘಿಸಿ ಅಸಲಿ ಬಟ್ಟೆಗಳೆಂದು ಮಾರಾಟ ಮಾಡುತ್ತಿದ್ದಾನೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 25 ಲಕ್ಷ […]

Advertisement

Wordpress Social Share Plugin powered by Ultimatelysocial