14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದ ಸ್ರಿಪಾಲಿ ವೀರಕ್ಕೋಡಿ

ಶ್ರೀಲಂಕಾ ಮಹಿಳಾ ಕ್ರಿಕೆಟ್​ ತಂಡದ ವೇಗಿ ಸ್ರಿಪಾಲಿ ವೀರಕ್ಕೋಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಶ್ರೀಲಂಕಾ ಪರ 89 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೇ 2018ರಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. 2006ರಂದು ಜೈಪುರದಲ್ಲಿ ಪಾಕಿಸ್ತಾನ ವಿರುದ್ದ ಪಾದಾರ್ಪಣೆ ಮಾಡಿದ್ದ ಅವರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ತೆರೆ ಎಳೆದಿದ್ದಾರೆ. ನಾನು ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಅದಕ್ಕೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ನಿವೃತ್ತಿ ಹೊಂದುವುದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದು ಸ್ರಿಪಾಲಿ ವೀರಕ್ಕೋಡಿ ತಿಳಿಸಿ ವಿದಾಯ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸೋಂಕು ನಿರ್ವಹಣೆಗೆ ಪ್ಯಾಕೇಜ್

Wed Jul 22 , 2020
ಅಮೆರಿಕದಲ್ಲಿ ಸೋಂಕಿನ ಪರಿಸ್ಥಿತಿ ನಿರ್ವಹಣೆಗಾಗಿ ೩ ಟ್ರಿಲಿಯನ್ ಡಾಲರ್‌ಗಳ ಪ್ಯಾಕೇಜ್ ಅಂಗೀಕರಿಸಲಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಯಲ್ಲಿ ಈ ಅಂಶ ರಿಪಬ್ಲಿಕನ್, ಡೆಮಾಕ್ರಾಟಿಕ್ ಪಕ್ಷಗಳಿಗೆ ಪ್ರಮುಖವಾಗಿದೆ. ಆದರೆ ಪ್ಯಾಕೇಜ್ ಅಂಗೀಕರಿಸುವ ಮೊದಲು ಅಧ್ಯಕ್ಷ ಟ್ರಂಪ್ ಭಾರಿ ಸವಾಲನ್ನೇ ಎದುರಿಸಬೇಕಾಯಿತು. ಸೆನೆಟ್‌ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಮಿಶ್ ಮೆಕ್‌ಕಾನೆಲ್ ಅವರು ಕೊರೊನಾಗಾಗಿ ೧ ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್‌ನ್ನು ಬಿಡುಗಡೆ ಮಾಡುವ ಪ್ರಸ್ತಾವನೆ ಮಂಡಿಸಿದರು. ಆದರೆ, ಪ್ಯಾಕೇಜ್ ಘೋಷಣೆ ವಿಷಯದಲ್ಲಿ ಟ್ರಂಪ್ […]

Advertisement

Wordpress Social Share Plugin powered by Ultimatelysocial