ಹಿಂದೂ ಯುವಕನ ಜೊತೆ 17 ವರ್ಷದ ಮುಸ್ಲಿಂ ಯುವತಿ ಮದುವೆ: ಕಾನೂನು ಬದ್ಧ ಎಂದ ಕೋರ್ಟ್​

ಮುಸಲ್ಮಾನ ಯುವತಿ ವಯಸ್ಕ ವಯಸ್ಸಿಗೆ ಪ್ರವೇಶ ಮಾಡಿದನಂತರ `ಮುಸ್ಲಿಂ ಪರ್ಸನಲ್ ಲಾ’ದಿಂದಾಗಿ ಆಕೆ ಸ್ವಂತ ಇಚ್ಛೆಯಿಂದ ಯಾರ ಜೊತೆ ಬೇಕಾದರೂ ಮದುವೆ ಮಾಡಿಕೊಳ್ಳಬಹುದು, ಇದರಲ್ಲಿ ಆಕೆಯ ತಂದೆ-ತಾಯಿ ಅಥವಾ ಸಂಬಂಧಿಕರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಎಂದು ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ಈ ಸಮಯದಲ್ಲಿ ನ್ಯಾಯಾಲಯವು ಕುಟುಂಬ ಮತ್ತು ಸಂಬಂಧಿಕರು ಇವರನ್ನು ವಿರೋಧಿಸಿ ಹಿಂದೂ ಯುವಕನ ಜೊತೆಗೆ ವಿವಾಹ ಮಾಡಿಕೊಳ್ಳುವ 17 ವರ್ಷದ ಮುಸಲ್ಮಾನ ಯುವತಿ ಮತ್ತು ಆಕೆಯ ಪತಿಗೆ ರಕ್ಷಣೆ ನೀಡುವ ಆದೇಶ ನೀಡಲಾಗಿದೆ. ನ್ಯಾಯಮೂರ್ತಿ ಹರನರೇಶ ಸಿಂಹ ಗಿಲ್ ಇವರು, ಮುಸ್ಲಿಂ ಯುವತಿಯ ವಿವಾಹ `ಮುಸ್ಲಿಂ ಪರ್ಸನಲ್ ಲಾ’ ಮೂಲಕ ಮಾಡಲಾಗುತ್ತದೆ. ಈ ಕಾನೂನು ಸ್ಪಷ್ಟವಾಗಿದೆ.

ಸರ ದಿನಶಾಹ ಫರದುನಜಿ ಮುಲ್ಲಾ ಇವರ `ಪ್ರಿನ್ಸಿಪಲ್ ಆಫ್ ಮೊಹಮ್ಮದ್ ಲಾ’ ಹೆಸರಿನ ಪುಸ್ತಕದಲ್ಲಿನ ಕಲಮ್ 195 ರ ಪ್ರಕಾರ ಅರ್ಜಿದಾರ ಯುವತಿ 17 ವರ್ಷದವಲಾಗಿದ್ದರಿಂದ ಆಕೆ ತನ್ನ ಇಚ್ಛೆಯ ವ್ಯಕ್ತಿಯ ಜೊತೆಗೆ ವಿವಾಹ ಮಾಡಿಕೊಳ್ಳಲು ಸಕ್ಷಮವಾಗಿದ್ದಾಳೆ. ಅದೇ ರೀತಿ ಅರ್ಜಿ ಸಲ್ಲಿಸಿರುವ ಮದುಮಗನ ವಯಸ್ಸು ಕೂಡ 33 ವರುಷ ಆಗಿದೆ. ಆದ್ದರಿಂದ ಅರ್ಜಿದಾರ ಯುವತಿ ಮುಸ್ಲಿಂ ಪರ್ಸನಲ್ ಲಾ ಪ್ರಕಾರ ವಿವಾಹಯೋಗ್ಯ ವಯಸ್ಸಿನವಳಾಗಿದ್ದಾಳೆ. ಕೇವಲ ಅರ್ಜಿದಾರ ಅವರ ಕುಟುಂಬದ ಸದಸ್ಯರು ಇಚ್ಛೆಯ ವಿರುದ್ಧ ವಿವಾಹ ನಡೆದಿದೆ; ಎಂದು ಅವರನ್ನು ಸಂವಿಧಾನದ ಮೂಲಭೂತ ಅಧಿಕಾರಗಳಿಂದ ವಂಚಿತ ಇರಿಸಲು ಸಾಧ್ಯವಿಲ್ಲ. ಎಂಬ ಭಯ ಅರ್ಜಿದಾರರ ಮನಸ್ಸಿನಿಂದ ತೆಗೆದುಹಾಕುವ ಅವಶ್ಯಕತೆಯಿದೆ ಎಂದು ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಗೆ ಎಂಟ್ರಿ ಕೊಟ್ಟ ಫಿಪೋಲಾ ಮಾಂಸ ಮಾರಾಟ ಸಂಸ್ಥೆ

Mon Dec 27 , 2021
ಬೆಂಗಳೂರು : ಮಾಂಸವನ್ನು ಖರೀದಿಸುವ ಮೊದಲು, ಜನ ಸಾಮಾನ್ಯವಾಗಿ ನಿರೀಕ್ಷೆ ಮಾಡುವುದು ಆರೋಗ್ಯ, ನೈರ್ಮಲ್ಯ ಮತ್ತು ತಾಜಾತನ. ಈ ವಿಚಾರದಲ್ಲಿ ಫಿಪೋಲಾ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಫಿಪೋಲಾದಲ್ಲಿ ಗ್ರಹಿಕ ಮತ್ತು ಅನುಭವವು ಜತೆಯಾಗಿ ಸಾಗುತ್ತವೆ. ಹೀಗಾಗಿ, ದಕ್ಷಿಣ ಭಾರತದ ಅತಿದೊಡ್ಡ ಬ್ರಾಂಡ್​​ನಲ್ಲಿ ಇದೂ ಒಂದೆನಿಸಿದೆ. ಸುವಾಸನೆಯ, ತಾಜಾ ಮತ್ತು ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮಾಂಸಕ್ಕೆ ಹೆಸರುವಾಸಿಯಾದ ಬ್ರಾಂಡ್​ ಇದಾಗಿದ್ದು, ಮುಂದಿನ 3 ವರ್ಷಗಳ ಅವಧಿಯಲ್ಲಿ ತನ್ನ ವ್ಯಾಪ್ತಿಯಲ್ಲಿ ದೇಶದೆಲ್ಲೆಡೆ ಹರಡಲು ಸಿದ್ಧವಾಗಿದೆ ಎಂದು […]

Advertisement

Wordpress Social Share Plugin powered by Ultimatelysocial