2 ಪಂದ್ಯಗಳಿಂದ ನಿಷೇಧ ಹಿನ್ನೆಲೆ

ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ನಿಗದಿಯಾಗಿರುವಂತೆ ಸೌದಿ ಅರೇಬಿಯಾದ ಅಲ್ ನಸ್ರ್ ಫುಟ್ಬಾಲ್ ಕ್ಲಬ್‌ ಪರ ಪಾದಾರ್ಪಣೆ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿಲ್ಲ. ಅನುಚಿತ ಹಾಗೂ ಹಿಂಸಾತ್ಮಕ ವರ್ತನೆಗೆ ಇಂಗ್ಲಿಷ್ ಫುಟ್ಬಾಲ್ ಅಸೋಸಿಯೇಶನ್ ನವೆಂಬರ್ ನಲ್ಲಿ 2 ಪಂದ್ಯಗಳಿಂದ ನಿಷೇಧ ವಿಧಿಸಿರುವುದು ಇದಕ್ಕೆ ಕಾರಣವಾಗಿದೆ.ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಅರೇಬಿಯಾದಲ್ಲಿ ತಮ್ಮ ಹೊಸ ತಂಡವಾದ ಅಲ್ ನಸ್ರ್‌ಗೆ ಪಾದಾರ್ಪಣೆ ಮಾಡಲು ಜನವರಿ 21 ರವರೆಗೆ ಕಾಯಬೇಕಾಗುತ್ತದೆ.ಕಳೆದ ಎಪ್ರಿಲ್‌ನಲ್ಲಿ ಎವರ್ಟನ್ ವಿರುದ್ಧ ಮ್ಯಾಂಚೆಸ್ಟರ್ ಯುನೈಟೆಡ್ 0-1 ಗೋಲು ಅಂತರದಿಂದ ಸೋತ ನಂತರ ಇಂಗ್ಲಿಷ್ ಫುಟ್ಬಾಲ್ ಅಸೋಸಿಯೇಶನ್ ರೊನಾಲ್ಡೊ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕಾರಣ ಪೋರ್ಚುಗೀಸ್ ತಾರೆಯನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗಿತ್ತು.37 ವರ್ಷ ವಯಸ್ಸಿನ ಫುಟ್ಬಾಲ್ ಆಟಗಾರ ರೊನಾಲ್ಡೊಗೆ ನಿಷೇಧದ ಬಗ್ಗೆ ತಿಳಿಸಿದಾಗ, ಸೌದಿ ಪ್ರೊ ಲೀಗ್‌ನ ಶ್ರೀಸೂಲ್ ಪಾರ್ಕ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಸಿದ್ಧತೆ ನಡೆಸುತ್ತಿದ್ದರು.ನವೆಂಬರ್‌ನಲ್ಲಿ, ರೊನಾಲ್ಡೊ ಇಂಗ್ಲಿಷ್ ಎಫ್ ಎ ನಿಂದ ಅನುಚಿತ ಹಾಗೂ ಹಿಂಸಾತ್ಮಕ ನಡವಳಿಕೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದರು. ಪಂದ್ಯದ ನಂತರ ಕೋಪದ ಭರದಲ್ಲಿ ಹದಿಹರೆಯದ ಅಭಿಮಾನಿಗಳ ಫೋನ್ ಅನ್ನು ಒಡೆದಿದ್ದಕ್ಕಾಗಿ ರೊನಾಲ್ಡೊ ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಯಿತು.ರೊನಾಲ್ಡೊ ಪಂದ್ಯದ ನಂತರ ನಡೆದುಕೊಂಡು ಹೋಗುತ್ತಿದ್ದಾಗ ಕೋಪದಭರದಲ್ಲಿ ಹುಡುಗನ ಕೈಯಿಂದ ಫೋನ್ ಅನ್ನು ಕಸಿದುಕೊಂಡು ಅದನ್ನು ನೆಲಕ್ಕೆ ಎಸೆದು ಒಡೆದು ಹಾಕುತ್ತಿರುವುದು ವೀಡಿಯೊ ದೃಶ್ಯದಲ್ಲಿ ಕಂಡುಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KGF 'ದೊಡ್ಡಮ್ಮ'ನಿಗೆ ಭಾರೀ ಡಿಮ್ಯಾಂಡ್.....

Thu Jan 5 , 2023
ಕೆಜಿಎಫ್​ ಚಾಪ್ಟರ್ 2 ಚಿತ್ರದಲ್ಲಿ ದೊಡ್ಡಮ್ಮ ದೃಶ್ಯಗಳು ಪಕ್ಕಾ ನೆನಪಿನಲ್ಲಿ ಇರುತ್ತೆ. ಪೊಲೀಸ್ ಸ್ಟೇಷನ್​ ಮುಂದೆ ನಿಂತು ಜೀಪ್​ಗಳನ್ನ ಬ್ಲಾಸ್ಟ್​ ಮಾಡೋ ರಾಕಿ ಸೀನ್ ಈ ಸಮಯದಲ್ಲೂ ಎಲ್ಲ ವಿಕ್ಷಕರಿಗೆ ನೆನಪಿರುತ್ತೆ. ಈ ಚಿತ್ರದಲ್ಲಿ ಬರೋ ದೊಡ್ಡಮ್ಮ ಗನ್ ಈಗ ಸೌತ್ ಸಿನಿಮಾಗಳ ಫೆವರೇಟ್ ಆಗಿದ್ದು, ಅಜಿತ್ ಚಿತ್ರದಲ್ಲೂ ಕಾಣಿಸಿಕೊಂಡಿದೆ.ಕೆಜಿಎಫ್ ಚಾಪ್ಟರ್ 2 ಚಿತ್ರದ ಹೈ-ವೋಲ್ಟೆಜ್ ದೃಶ್ಯಗಳಲ್ಲಿ ಒಂದು ಈ ದೊಡ್ಡಮ್ಮ ಸೀನ್. ಟ್ರೈಪೋಡ್​ ಮೇಲೆ ಮಿಷನ್ ಗನ್ ಫಿಕ್ಸ್ […]

Advertisement

Wordpress Social Share Plugin powered by Ultimatelysocial