2020-21 ಐಟಿಆರ್‌ ಇ-ವೇರಿಫಿಕೇಷನ್‌: ಫೆಬ್ರುವರಿ 28ರವರೆಗೆ ಅವಕಾಶ

ನವದೆಹಲಿ: 2020-21ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಆನ್‌ಲೈನ್‌ ದೃಢೀಕರಣ (ಇ-ವೇರಿಫಿಕೇಷನ್‌) ಮಾಡದೇ ಇರುವ ತೆರಿಗೆದಾರರಿಗೆ 2022ರ ಫೆಬ್ರುವರಿ 28ರ ಒಳಗಾಗಿ ಆ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ನೀಡಲಾಗಿದೆ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಡಿಜಿಟಲ್‌ ಹಸ್ತಾಕ್ಷರ ಇಲ್ಲದೇ ವಿದ್ಯುನ್ಮಾನ ಮಾರ್ಗದ ಮುಲಕ ಐಟಿಆರ್‌ ಸಲ್ಲಿಸಿದರೆ 120 ದಿನಗಳ ಒಳಗಾಗಿ ಆಧಾರ್ ಒಟಿಪಿ ಅಥವಾ ನೆಟ್‌ ಬ್ಯಾಂಕಿಂಗ್ ಅಥವಾ ಡಿಮ್ಯಾಟ್‌ ಖಾತೆಗೆ ಬರುವ ಕೋಡ್‌ ಬಳಸಿ ಅಥವಾ ಎಟಿಎಂ ಮೂಲಕ ಇ-ವೇರಿಫಿಕೇಷನ್‌ ಮಾಡಬೇಕು. ಇದಲ್ಲದೆ, ಐಟಿಆರ್ ಸಲ್ಲಿಸಿದ ಪ್ರತಿಯನ್ನು ಬೆಂಗಳೂರಿನಲ್ಲಿ ಇರುವ ಕೇಂದ್ರೀಯ ಪರಿಶೀಲನಾ ಕೇಂದ್ರಕ್ಕೆ (ಸಿಪಿಸಿ) ಕಳುಹಿಸುವ ಮೂಲಕವೂ ದೃಢೀಕರಿಸಬಹುದಾಗಿದೆ.

ಇ-ವೇರಿಫಿಕೇಷನ್‌ ಪ್ರಕ್ರಿಯೆ ಪೂರ್ಣಗೊಳ್ಳದೇ ಇದ್ದಲ್ಲಿ ರಿಟರ್ನ್ಸ್‌ ಸಲ್ಲಿಕೆ ಆಗಿದೆ ಎಂದು ಇಲಾಖೆಯು ಪರಿಗಣಿಸುವುದಿಲ್ಲ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಮಂಗಳವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 2020-21ನೇ ಅಂದಾಜು ವರ್ಷಕ್ಕೆ (2019-20ನೇ ಹಣಕಾಸು ವರ್ಷ) ವಿದ್ಯುನ್ಮಾನ ರೂಪದಲ್ಲಿ ಸಲ್ಲಿಕೆ ಆಗಿರುವ ಬಹಳಷ್ಟು ಐಟಿಆರ್‌ಗಳ ಇ-ವೇರಿಫಿಕೇಷನ್‌ ಆಗಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಿಲ್ಲಿಯಲ್ಲಿ ಕುಳಿತು HDK, ಬಿಜೆಪಿ ಸೇರಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ: ಡಿಕೆಶಿ

Wed Dec 29 , 2021
ಬೆಂಗಳೂರು : ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ದಿಲ್ಲಿಯಲ್ಲೇ ಈ ಷಡ್ಯಂತ್ರದ ರೂಪುರೇಷೆ ಹೆಣೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ತಮ್ಮ ವಿರುದ್ಧ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕುಮಾರಸ್ವಾಮಿ ದಿಲ್ಲಿಗೆ ಹೋಗಿ ನನ್ನ ವಿರುದ್ಧ ಏನೇನು ಮಾಡಿದ್ದಾರೆಂಬುದು ಗೊತ್ತಿದೆ. ಎರಡು ಪಕ್ಷದವರು ಸೇರಿ ದಿಲ್ಲಿಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಈ […]

Advertisement

Wordpress Social Share Plugin powered by Ultimatelysocial