27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ – ಶಿವಣ್ಣ, ದರ್ಶನ್!

ನಿನ್ನೆ ( ಫೆಬ್ರವರಿ 3 ) ಕ್ರಾಂತಿ ಚಿತ್ರತಂಡ ತಮ್ಮ ಚಿತ್ರ ಗೆದ್ದಿದೆ ಎಂದು ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿತು. ಹೌದು, ಕಳೆದ ವಾರದ ಗುರುವಾರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಸಹ ನೂರು ಕೋಟಿ ಕ್ಲಬ್ ಸೇರಿದೆ.

ಚಿತ್ರಮಂದಿರದ ಗಳಿಕೆ, ಡಿಜಿಟಲ್ ಹಕ್ಕು ಮಾರಾಟವಾದ ಮೊತ್ತ ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟವಾದ ಮೊತ್ತ ಎಲ್ಲವನ್ನೂ ಸೇರಿಸಿ ಕ್ರಾಂತಿ ಚಿತ್ರ ನೂರು ಕೋಟಿಯನ್ನು ಗಳಿಸಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಎಲ್ಲೆಡೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ದರ್ಶನ್ ಅವರನ್ನೂ ಸಹ ಭೇಟಿಯಾದ ಅಭಿಮಾನಿಗಳು ನೆಚ್ಚಿನ ನಟನಿಗೆ ಹಾರ ಹಾಕಿ ಸನ್ಮಾನಿಸಿ, ದರ್ಶನ್ ಕೈನಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.

ಅಭಿಮಾನಿಗಳು ಮಾತ್ರವಲ್ಲದೇ ಕ್ರಾಂತಿ ಚಿತ್ರತಂಡ ಸಹ ಸಕ್ಸಸ್ ಮೀಟ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ಚಿತ್ರದ ಯಶಸ್ಸನ್ನು ಆಚರಿಸಿತು ಹಾಗೂ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿತು. ಹೀಗೆ ನಿನ್ನೆ ಕ್ರಾಂತಿ ಚಿತ್ರತಂಡ ಒಂದೆಡೆ ಕೇಕ್ ಕತ್ತರಿಸಿ ಚಿತ್ರ ಗೆದ್ದದ್ದರ ಸಂಭ್ರಮಾಚರಣೆ ಮಾಡಿದರೆ, ಮತ್ತೊಂದೆಡೆ ಶಿವ ರಾಜ್‌ಕುಮಾರ್ ತಮ್ಮ ಆಪ್ತ ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ ಮೈಲಿಗಲ್ಲನ್ನು ಇದೇ ರೀತಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದು, ಈ ಸಂಭ್ರಮಾಚರಣೆಗಳು ನಿನ್ನೆಯ ವೈರಲ್ ವಿಡಿಯೊಗಳಾಗಿವೆ.

ಕಿಚ್ಚನ 27 ವರ್ಷಗಳ ಸಿನಿ ಜರ್ನಿಗೆ ಕೇಕ್ ಸಂಭ್ರಮಾಚರಣೆ

ಈ ಸಮಾರಂಭದಲ್ಲಿ ಕೇಕ್ ಕತ್ತರಿಸಿ, ಶಿವ ರಾಜ್‌ಕುಮಾರ್ ಹಾಗೂ ಗೀತಾ ಶಿವ ರಾಜ್‌ಕುಮಾರ್ ಅವರಿಗೆ ತಿನ್ನಿಸಿದ ಕಿಚ್ಚ ಸುದೀಪ್ ಗೀತಾ ಶಿವ ರಾಜ್‌ಕುಮಾರ್ ಅವರ ಕಾಲು ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದಾರೆ ಹಾಗೂ ಶಿವ ರಾಜ್‌ಕುಮಾರ್ ಅವರನ್ನು ಅಪ್ಪಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶಿವ ರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಬಾಂಧವ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ಎರಡನೇ ವಾರಕ್ಕೆ ಕಾಲಿಟ್ಟ ಕ್ರಾಂತಿ

ಇತ್ತ ಕ್ರಾಂತಿ ಚಿತ್ರ ಮೊದಲ ವಾರದ ಓಟವನ್ನು ಪೂರೈಸಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರತಂಡ ಚಿತ್ರ ಗೆದ್ದಿದೆ ಎಂದು ಸಕ್ಸಸ್ ಮೀಟ್ ಅನ್ನೂ ಸಹ ಆಯೋಜಿಸಿದ್ದು, ಎಲ್ಲಾ ಹಕ್ಕುಗಳ ಮಾರಾಟ ಹಾಗೂ ಕಲೆಕ್ಷನ್‌ನಿಂದಾಗಿ ಚಿತ್ರ ನೂರು ಕೋಟಿ ಕ್ಲಬ್ ಸಹ ಸೇರಿದೆ. ಈ ಮೂಲಕ ಯಜಮಾನ ಬಳಿಕ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಮತ್ತೊಂದು ಚಿತ್ರ ಹಿಟ್‌ಲಿಸ್ಟ್ ಸೇರಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಫೋಟೊದಲ್ಲಿರೋ ಇಬ್ಬರು ಸೂಪರ್ ಸ್ಟಾರ್ಸ್‌ನ ಕಂಡು ಹಿಡಿತ್ತೀರಾ?

Fri Feb 3 , 2023
ಬಣ್ಣದ ಲೋಕದಲ್ಲಿ ಯಶಸ್ಸು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಯಶಸ್ಸು ಸಿಗುತ್ತೆ. ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟ ಜೊತೆಯಾದರೆ ಚಮತ್ಕಾರಗಳು ನಡೆಯುತ್ತದೆ. ಒಂದೇ ಒಂದು ಹಿಟ್ ಸಿನಿಮಾದಿಂದ ಸ್ಟಾರ್, ಸೂಪರ್ ಸ್ಟಾರ್ ಆಗುವವರು ಒಂದು ಸೋಲಿನಿಂದ ಪಾತಾಳಕ್ಕೆ ಬಿದ್ದುಬಿಡುತ್ತಾರೆ. ಸೂಪರ್ ಸ್ಟಾರ್‌ಗಳಿಗೂ ಪ್ರತಿ ಸಿನಿಮಾವೂ ಹೊಸ ಸಿನಿಮಾನೇ ಆಗಿರುತ್ತದೆ. ಯಾಕಂದರೆ ಇಲ್ಲಿ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ಎಲ್ಲರೂ ಸಕ್ಸಸ್‌ಗಾಗಿ ಪ್ರಯತ್ನ ಪಡುತ್ತಾರೆ. ಆದರೆ […]

Advertisement

Wordpress Social Share Plugin powered by Ultimatelysocial