512ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಇಂದು ಹೊಸದಾಗಿ 9 ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊರೋನಾ ಸೋಂಕಿನ ಪ್ರಕರಣ ಸಂಬಂಧ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ,ಹೊಸದಾಗಿ ದಾಖಲಾದ ಸೋಂಕಿತರ ಪೈಕಿ ಬೆಂಗಳೂರು ನಗರದಲ್ಲಿ ಒಬ್ಬರಿಗೆ, ಮಂಡ್ಯದಲ್ಲಿ ಇಬ್ಬರಿಗೆ, ದಕ್ಷಿಣಕನ್ನಡದಲ್ಲಿ ಇಬ್ಬರಿಗೆ ಬಾಗಲಕೋಟೆಯಲ್ಲಿ ಇಬ್ಬರಿಗೆ ಮತ್ತು ವಿಜಯಪುರದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಇದುವರೆಗೆ 19 ಜನರು ಸಾವನ್ನಪ್ಪಿದ್ದಾರೆ. ಇನ್ನೂ  ಸೋಂಕಿತರಾಗಿದ್ದಂತ 193 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ನೀವು ಮಾಸ್ಕ್ ಧರಿಸಲ್ವಾ –ಕಸಗುಡಿಸುವ ಶಿಕ್ಷೆ ಅನುಭವಿಸಬೇಕಾಗುತ್ತೆ ಎಚ್ಚರ..!

Tue Apr 28 , 2020
ಮಡಗಾಸ್ಕರ್​ (ಪೂರ್ವ ಆಫ್ರಿಕಾ): ಕೊರೊನಾ ಹಿನ್ನಲೆ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ. ಆಕಸ್ಮತ್ ಮಾಸ್ಕ್ ಧರಿಸದೇ ಹೊರ ಬಂದ್ರೆ ಕಸಗುಡಿಸೋ ಶಿಕ್ಷೆ ನೀಡಲಾಗುವುದು ಎಂದು ಪೂರ್ವ ಆಫ್ರಿಕ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಆದೇಶಿಸಿದ್ದಾರೆ. ರಾಜಧಾನಿ ಅಂಟಾನನರಿವೊದಲ್ಲಿ ಹಾಗೂ ಫಿಯಾನರಾಂಟ್ಸೊವಾ ಮತ್ತು ಟೊಮಾಸಿನಾ ನಗರಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿದ್ದಾರೆ. ಪೂರ್ವ ಆಫ್ರಿಕಾದಲ್ಲಿರು ಮಡಗಾಸ್ಕರ್‌ನಲ್ಲಿ ಲಾಕ್​ಡೌನ್​ ಉಲ್ಲಂಘಿಸಿಯೋ ಅಥವಾ ಮಾಸ್ಕ್​ ಧರಿಸದೇ ಹೊರಗೆ ಬಂದವರಿಗೆ  ಕಸದ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಗುಡಿಸುವ ಕೆಲಸಕ್ಕೆ […]

Advertisement

Wordpress Social Share Plugin powered by Ultimatelysocial