6 ವಿಕೆಟ್ ಗಳ ಅಂತರದಿಂದ ಭಾರತಕ್ಕೆ ಭರ್ಜರಿ ಗೆಲುವು

ಪ್ರವಾಸಿ ವೆಸ್ಟ್ ಇಂಡೀಸ್(West Indies) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ (ODI) ಕ್ಲೀನ್ ಸ್ವೀಪ್ (Clean Sweep) ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಮುಖಭಂಗ ಮಾಡಿದ್ದ ಭಾರತ ಟಿ20(T-20) ಸರಣಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಹೌದು ಕೋಲ್ಕತ್ತಾದ ಈಡನ್ ಗಾರ್ಡನ್(Eden Garden Kolkata) ಕ್ರೀಡಾಂಗಣದಲ್ಲಿ(Stadium) ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ ಗೆ ಭಾರಿ ಮುಜುಗರ ಉಂಟುಮಾಡಿದೆ.
ಈ ಮೂಲಕ ಭಾರತ ಮೂರು ಟಿ20 ಪಂದ್ಯಗಳಲ್ಲಿ 1-0 ಅಂತರದಿಂದ ಸರಣಿ ಮುನ್ನಡೆ ಕಾಯ್ದುಕೊಂಡಿದೆ.

6 ವಿಕೆಟ್ ಅಂತರದಿಂದ ಭರ್ಜರಿ ಜಯ

ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡು ವೆಸ್ಟ್ ಇಂಡೀಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿತು. ಕೊನೆಗೆ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ವೆಸ್ಟ್ ಇಂಡೀಸ್ ಒಂದು 157 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಸ್ಟ್ ಇಂಡೀಸ್ ಮಾಡಿದ ಒಂದು 158 ರನ್ ಗಳ ಗುರಿ ಬೆನ್ನತ್ತಿದ್ದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕುವ ಮೂಲಕ ಇನ್ನೂ 7 ಬಾಲ್ ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

ಇನ್ನು ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ (61) ಕೈಲ್ ಮೇಯರ್ಸ್ (31) ಕಿರಾನ್ ಪೊಲಾರ್ಡ್ ಅಜೇಯ 24 ರನ್ ಗಳಿಸುವ ಮೂಲಕ ತಂಡ 150 ರ ಗಡಿ ದಾಟಲು ನೆರವಾದರು. ನಿಕೋಲಸ್ ಪೂರನ್, ಕೈಲ್ ಮೇಯರ್ಸ್ ಕಿರಾನ್ ಪೊಲಾರ್ಡ್ ಹೊರತುಪಡಿಸಿದರೆ ವೆಸ್ಟ್ ಇಂಡೀಸ್ ಇತರ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಇನ್ನು ಭಾರತದ ಪರ ಭಾರತದ ಪರ ನಾಯಕ ರೋಹಿತ್ ಶರ್ಮಾ 40, ಇಶಾನ್ ಕಿಶಾನ್ 35, ವಿರಾಟ್ ಕೊಹ್ಲಿ 17, ರಿಷಭ್ ಪಂತ್ 8 ಹಾಗೂ ಸೂರ್ಯ ಕುಮಾರ್ ಯಾದವ್ ಅಜೇಯ 34, ವೆಂಕಟೇಶ್ ಅಯ್ಯರ್ ಅಜೇಯ 24 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಅಸರೆಯಾದರು..

ದುಬಾರಿಯಾದ ಭಾರತದ ಬೌಲರ್ ಗಳು

ಇನ್ನು ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್​​ 17ಕ್ಕೆ 2 ವಿಕೆಟ್​ ಪಡೆದು ಮಿಂಚಿದರು. ಹರ್ಷಲ್ ಪಟೇಲ್ 37ಕ್ಕೆ 2, ಭುವನೇಶ್ವರ್​ 31ಕ್ಕೆ1, ದೀಪಕ್​ ಚಾಹರ್​ 28ಕ್ಕೆ1, ಚಹಲ್ 34ಕ್ಕೆ 1 ವಿಕೆಟ್ ಪಡೆದುಕೊಂಡ್ರೆ ವೆಸ್ಟ್​ ಇಂಡೀಸ್ ಪರ ರಾಸ್ಟನ್ ಚೇಸ್​ 4 ಓವರ್​ಗಳಲ್ಲಿ 14 ರನ್​ ನೀಡಿ 2 ವಿಕೆಟ್​ ಪಡೆದರು, ಅಲೆನ್​ ಮತ್ತು ಕಾಟ್ರೆಲ್ ತಲಾ ಒಂದು ವಿಕೆಟ್​ ಪಡೆದರು.

ಟೀಮ್ ಇಂಡಿಯಾಕ್ಕೆ ರವಿ ಬಿಷ್ಣೋಯ್ ಪಾದಾರ್ಪಣೆ

ಇನ್ನು ಪಂಜಾಬ್ ಕಿಂಗ್ಸ್ ಇಲೆವೆನ್ ಪರಾ ಕಳೆದ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯ ತನ್ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಟೀಂ ಇಂಡಿಯಾ ಯಜುವೇಂದ್ರ ಚಹಾಲ್ ಕ್ಯಾಪ್ ನೀಡುವ ಮೂಲಕ ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಬರಮಾಡಿಕೊಂಡರು.ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದುಕೊಳ್ಳುವ ಮೂಲಕ ರವಿ ಬಿಷ್ಣೋಯ್ ಪಾದರ್ಪಣೆ ಮಾಡಿದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದೂ ಸಮಾಜವಾದ ಭಾರತದಲ್ಲಿ ಹಿಜಾಬ್ ಧರಿಸುವ ಅವಶ್ಯಕತೆಯಿಲ್ಲ ಎಂದು ಬಿಜೆಪಿ ಸಂಸದೆ ಸಾದ್ವಿ ಪ್ರಗ್ಯ ಹೇಳಿದ್ದಾರೆ.

Thu Feb 17 , 2022
ಭೋಪಾಲ್ ನಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಜಾಬ್ ನ್ನು ಎಲ್ಲಿಯೂ ಧರಿಸುವ ಅವಶ್ಯಕತೆಯಿಲ್ಲ, ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿಲ್ಲದ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಬೇಕಾಗುತ್ತದೆ. ಹೊರಗಡೆ ಓಡಾಡುವಾಗ ಹಿಂದೂ ದೇಶದಲ್ಲಿ ಹಿಜಾಬ್ ಧರಿಸುವ ಅವಶ್ಯಕತೆಯೇ ಬರುವುದಿಲ್ಲ. ನಮ್ಮ ದೇಶ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿದೆ ಎಂದರು. ಇನ್ನು ಶಿಕ್ಷಣ ಸಂಸ್ಥೆಗಳಲ್ಲಂತೂ ಹಿಜಾಬ್ ಧರಿಸುವ ಪ್ರಶ್ನೆಯೇ ಬರುವುದಿಲ್ಲ, ವಿದ್ಯಾ ದೇಗುಲವೆಂದರೆ ಅಲ್ಲಿ ಎಲ್ಲರೂ ಸಮಾನರು, ಎಲ್ಲರೂ ಏಕರೀತಿಯ ಸಮವಸ್ತ್ರ ಧರಿಸುವುದು ಉತ್ತಮವಾಗಿರುತ್ತದೆ ಎಂದು […]

Advertisement

Wordpress Social Share Plugin powered by Ultimatelysocial