ಟಾಟಾ ಗ್ರೂಪ್, ಬಿಸ್ಲೇರಿ ನಡುವಿನ 8.2 ಸಾವಿರ ಕೋಟಿ ರೂ ಡೀಲ್ ಸ್ಥಗಿತ, ಕಾರಣವೇನು?

ಭಾರತದ ಅತೀ ದೊಡ್ಡ ಬಾಟಲ್‌ ನೀರು ತಯಾರಕರು, ಸರಬರಾಜುದಾರರು ಆದ ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಬಹುತೇಕ ಷೇರುಗಳನ್ನು ಖರೀದಿ ಮಾಡಲು ಟಾಟಾ ಗ್ರೂಪ್‌ ನಡುವೆ ಮಾತುಕತೆ ನಡೆದಿದೆ. ಆದರೆ ಈ ಮಾತುಕತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

ಪ್ರಮುಖವಾಗಿ ಮೌಲ್ಯದ ಲೆಕ್ಕಾಚಾರದ ಆಧಾರದಲ್ಲಿ ಈ ಮಾತುಕತೆಯನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಟಾಟಾ ಗ್ರೂಪ್ ಬಿಸ್ಲೇರಿಯನ್ನು ಖರೀದಿ ಮಾಡುವ ಮಾತುಕತೆಯನ್ನು ನಡೆಸಿದೆ. ವಹಿವಾಟಿನ ಬಗ್ಗೆ ಎಲ್ಲ ಅಂತಿಮ ಮಾತುಕತೆಯನ್ನು ನಡೆಸಲಾಗಿತ್ತು. ಬಿಸ್ಲೇರಿ ಮಾಲೀಕರು ಈ ಡೀಲ್ ಮೂಲಕ ಸುಮಾರು 8,258 ಕೋಟಿ ರೂಪಾಯಿ (1 ಬಿಲಿಯನ್ ಡಾಲರ್) ಪಡೆಯುವ ಅಂದಾಜು ಮಾಡಿದ್ದರು. ಆದರೆ ಉಭಯ ಸಂಸ್ಥೆಗಳ ನಡುವಿನ ಈ ಮಾತುಕತೆಯು ಸ್ಥಗಿತವಾಗಿದೆ.

ಡೀಲ್ ಮುರಿದುಬಿದ್ದದ್ದು ಯಾಕೆ?

ಪ್ರಮುಖವಾಗಿ ಮೌಲ್ಯದ ವಿಚಾರದಲ್ಲಿ ಉಭಯ ಸಂಸ್ಥೆಗಳು ಒಂದು ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣದಿಂದಾಗಿ ಈ ಮಾತುಕತೆ ಅಥವಾ ಡೀಲ್ ಮುರಿದು ಬಿದ್ದಿದೆ. ಆದರೆ ಟಾಟಾ ಗ್ರೂಪ್ ಹಾಗೂ ಬಿಸ್ಲೇರಿ ನಡುವಿನ ಮಾತುಕತೆ ಮತ್ತೆ ಮುಂದುವರಿಯುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಟಾಟಾ ಗ್ರೂಪ್ ಮತ್ತು ಬಿಸ್ಲೇರಿಯ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ 1949ರಲ್ಲಿ ಬಿಸ್ಲೇರಿಯ ಮೂಲ ಆರಂಭವಾಗಿದೆ. ಸಾಫ್ಟ್‌ ಡ್ರಿಕ್ ತಯಾರಕ ಸಂಸ್ಥೆಯಾದ ಪಾರ್ಲೆ ಗ್ರೂಪ್ ಅನ್ನು ಜಯಂತಿಲಾಲ್ ಚೌಹಾಣ್ ಆರಂಭಿಸಿದ್ದಾರೆ. ಈ ಸಂಸ್ಥೆ 1969ರಲ್ಲಿ ಇಟಾಲಿಯನ್ ಉದ್ಯಮಿಗಳಿಂದ ಬಿಸ್ಲೇರಿಯನ್ನು ಡೀಲ್ ಮಾಡಿಕೊಂಡಿದೆ. ಈ ಸಂಸ್ಥೆಯಲ್ಲಿನ ಶೇಕಡ 60ರಷ್ಟು ಷೇರು ಭಾರತದಲ್ಲಿದೆ. ಈ ಸಂಸ್ಥೆಯು ಹ್ಯಾಂಡ್ ಸ್ಯಾನಿಟೈಜರ್ ಅನ್ನು ಕೂಡಾ ಉತ್ಪಾದನೆ ಮಾಡುತ್ತದೆ.

ಟಾಟಾ ಗ್ರೂಪ್‌ಗೆ ಸ್ಟೇಕ್ ಮಾರಾಟ ಮಾಡುವ ಮಾತುಕತೆಯನ್ನು ಬಿಸ್ಲೇರಿ ಮೊದಲು ನಡೆಸಿದೆ ಎಂದು ನವೆಂಬರ್‌ 2022ರಲ್ಲಿ ಒಂದು ಸಂದರ್ಶನದಲ್ಲಿ ಬಿಸ್ಲೇರಿ ಚೇರ್‌ಮನ್ ರಮೇಶ್ ಚೌಹಾಣ್ ಮಾಹಿತಿ ನೀಡಿದ್ದರು. ಈ ಡೀಲ್‌ನಿಂದಾಗಿ ಟಾಟಾ ಗ್ರೂಪ್ ಭಾರತದಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಲು ಇನ್ನಷ್ಟು ಸಹಾಯವಾಗುತ್ತಿತ್ತು. ಈಗಾಗಲೇ ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್ ಮತ್ತು ಟಾಟಾ ವಾಟರ್ ಪ್ಲಸ್ ಬ್ರ್ಯಾಂಡ್ ಅನ್ನು ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ ಲಿಮಿಟೆಡ್ ಹೊಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದಿತಿ-ಸಿದ್ದಾರ್ಥ್​ ನಡುವಿನ ಪ್ರೇಮಕ್ಕೆ ಸಿಕ್ತು ಹೊಸ ಸಾಕ್ಷಿ;

Wed Mar 1 , 2023
 ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.ನಟಿ ಅದಿತಿ ರಾವ್​ ಹೈದರಿ  ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಮಾತ್ರವಲ್ಲದೇ ಅವರು ದಕ್ಷಿಣ ಭಾರತದಲ್ಲೂ ಫೇಮಸ್​ ಆಗಿದ್ದಾರೆ. ಸಿನಿಮಾಗಳ ಜೊತೆಗೆ ವೆಬ್​ ಸಿರೀಸ್​ನಲ್ಲಿ ನಟಿಸುವ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ. ಸದ್ಯಕ್ಕಂತೂ ಅವರ ವೃತ್ತಿಜೀವನ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈ […]

Advertisement

Wordpress Social Share Plugin powered by Ultimatelysocial