ಎರಡನೇ ಮಹಾಯುದ್ಧ ಹಾಗೂ 1945 ರಲ್ಲಿ ಬರ್ಲಿನ್ ನಲ್ಲಿ ನಡೆದ ಕದನದಲ್ಲಿ ಬಾಂಬ್ ಸ್ಫೋಟದ ನಡುವೆಯೂ ಬದುಕುಳಿದ 84 ವರ್ಷದ ಮೊಸಳೆಯೊಂದು ಮಾಸ್ಕೋದ ಮೃಗಾಲಯದಲ್ಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ. ಸಾಮಾನ್ಯವಾಗಿ ಮೊಸಳೆಗಳು ಕಾಡಿನಲ್ಲಿ 30ರಿಂದ 50 ವರ್ಷಗಳ ಅವಧಿಯಲ್ಲಿ ಜೀವಿಸುತ್ತವೆ. ಮೃಗಾಲಯದಲ್ಲಿರುವ ಮೊಸಳೆಗಳ ಜೀವಿತಾವಧಿ 70 -80 ವರ್ಷಗಳವರೆಗೆ ಇರುತ್ತದೆ. ಯುದ್ಧ ಮುಗಿದ ಬಳಿಕ ಶರ್ಟನ್ ಹೆಸರಿನ ಮೊಸಳೆಯನ್ನು ಬ್ರಿಟಿಷ್ ಸೈನಿಕರು ಸೋವಿಯತ್ ಒಕ್ಕೂಟಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದಲೂ ಮಾಸ್ಕೋ ಮೃಗಾಲಯದಲ್ಲಿ ರಕ್ಷಣೆ ಪಡೆದಿತ್ತು. ಮೊಸಳೆಯ ನಿಧನದ ಸುದ್ದಿಯನ್ನು ಮೃಗಾಲಯ ಖಚಿತಪಡಿಸಿದ್ದು, ಈವರೆಗೂ ಅದು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಸಂದರ್ಶಕರು ಮತ್ತು ಮೃಗಾಲಯ ಸಂರಕ್ಷಕರು ಬಹಳ ಪ್ರೀತಿಯಿಂದ ಅದನ್ನು ನೋಡುತ್ತಿದ್ದರು ಎಂದು ಪ್ರಕಟಿಸಿದೆ. ಈ ಮೊಸಳೆ ಅಡಾಲ್ಫ್ ಹಿಟ್ಲರ್ ಗೆ ಸೇರಿದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ 1936ರಲ್ಲಿ ಇದನ್ನು ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು ಎಂಬ ಮಾಹಿತಿ ಇದೆ. 1943ರಲ್ಲಿ ಮೃಗಾಲಯದ ಮೇಲೆ ನಡೆದ ಬಾಂಬ್ ಸ್ಫೋಟದಲ್ಲಿ ಈ ಮೊಸಳೆ ಬದುಕುಳಿದಿತ್ತು.
84 ವರ್ಷದ ಶರ್ಟನ್ ವಿಧಿವಶ

Please follow and like us: