84 ವರ್ಷದ ಶರ್ಟನ್ ವಿಧಿವಶ

ಎರಡನೇ ಮಹಾಯುದ್ಧ ಹಾಗೂ  1945 ರಲ್ಲಿ ಬರ್ಲಿನ್  ನಲ್ಲಿ  ನಡೆದ ಕದನದಲ್ಲಿ ಬಾಂಬ್ ಸ್ಫೋಟದ ನಡುವೆಯೂ ಬದುಕುಳಿದ 84 ವರ್ಷದ ಮೊಸಳೆಯೊಂದು ಮಾಸ್ಕೋದ ಮೃಗಾಲಯದಲ್ಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ. ಸಾಮಾನ್ಯವಾಗಿ ಮೊಸಳೆಗಳು ಕಾಡಿನಲ್ಲಿ 30ರಿಂದ 50 ವರ್ಷಗಳ ಅವಧಿಯಲ್ಲಿ  ಜೀವಿಸುತ್ತವೆ.‌ ಮೃಗಾಲಯದಲ್ಲಿರುವ ಮೊಸಳೆಗಳ ಜೀವಿತಾವಧಿ 70 -80 ವರ್ಷಗಳವರೆಗೆ ಇರುತ್ತದೆ. ಯುದ್ಧ ಮುಗಿದ ಬಳಿಕ ಶರ್ಟನ್ ಹೆಸರಿನ ಮೊಸಳೆಯನ್ನು ಬ್ರಿಟಿಷ್ ಸೈನಿಕರು ಸೋವಿಯತ್ ಒಕ್ಕೂಟಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದಲೂ ಮಾಸ್ಕೋ ಮೃಗಾಲಯದಲ್ಲಿ ರಕ್ಷಣೆ ಪಡೆದಿತ್ತು. ಮೊಸಳೆಯ ನಿಧನದ ಸುದ್ದಿಯನ್ನು ಮೃಗಾಲಯ ಖಚಿತಪಡಿಸಿದ್ದು, ಈವರೆಗೂ ಅದು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಸಂದರ್ಶಕರು ಮತ್ತು ಮೃಗಾಲಯ ಸಂರಕ್ಷಕರು ಬಹಳ ಪ್ರೀತಿಯಿಂದ ಅದನ್ನು ನೋಡುತ್ತಿದ್ದರು ಎಂದು ಪ್ರಕಟಿಸಿದೆ. ಈ ಮೊಸಳೆ ಅಡಾಲ್ಫ್ ಹಿಟ್ಲರ್ ಗೆ ಸೇರಿದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ.  ಆದರೆ 1936ರಲ್ಲಿ ಇದನ್ನು ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು ಎಂಬ ಮಾಹಿತಿ ಇದೆ.‌ 1943ರಲ್ಲಿ ಮೃಗಾಲಯದ ಮೇಲೆ ನಡೆದ ಬಾಂಬ್ ಸ್ಫೋಟದಲ್ಲಿ ಈ ಮೊಸಳೆ ಬದುಕುಳಿದಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಇಯರ್ ಪೋನ್ ಬಳಸುವವರೇ ಎಚ್ಚರ..

Mon May 25 , 2020
ಬೀಜಿಂಗ್: ಇಯರ್ ಫೋನ್ ಅತಿಯಾಗಿ ಬಳಸುತ್ತಿರುವವರಿಗೆ ಆತಂಕಕಾರಿ ಸುದ್ದಿ ಇಲ್ಲಿದೆ.‌ ಬೀಜಿಂಗ್ ನಗರದಲ್ಲಿ  10 ವರ್ಷದ ಬಾಲಕನ ಕಿವಿಯಲ್ಲಿ ಬ್ಲ್ಯಾಕ್ ಫಾರೆಸ್ಟ್ ಫಂಗಸ್ ಬೆಳೆದಿದ್ದು ತಜ್ಞರು ಅದನ್ನು ಹೊರತೆಗೆದಿದ್ದಾರೆ. ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕ ಇಯರ್ ಫೋನ್ ಅತಿಯಾಗಿ ಬಳಸುತ್ತಿದ್ದ. ಕಳೆದ ತಿಂಗಳು ಆತನ ಕಿವಿಯಲ್ಲಿ ತೊಂದರೆ ಶುರುವಾಯಿತು. ಇಯರ್ ಫೋನ್ ಬಳಕೆಯಿಂದ‌ ಕಿವಿಯಲ್ಲಿ ಉಂಟಾಗುವ ಬಿಸಿ ಗಾಳಿ,‌ ಆರ್ದತೆಯನ್ನು ಸೃಷ್ಟಿಸುತ್ತದೆ. ಇದರಿಂದ ಫಂಗಸ್ ಬೆಳೆಯಲು […]

Advertisement

Wordpress Social Share Plugin powered by Ultimatelysocial