ಪ್ರೀತಿ ವಿಚಾರವಾಗಿ ಕಳೆದ ವರ್ಷ ಅತಿಹೆಚ್ಚು ಸುದ್ದಿಗೀಡಾಗಿದ್ದ ಸೆಲೆಬ್ರಿಟಿ ಜೋಡಿ ಎಂದರೆ ಅದು ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ.

ಪ್ರೀತಿ ವಿಚಾರವಾಗಿ ಕಳೆದ ವರ್ಷ ಅತಿಹೆಚ್ಚು ಸುದ್ದಿಗೀಡಾಗಿದ್ದ ಸೆಲೆಬ್ರಿಟಿ ಜೋಡಿ ಎಂದರೆ ಅದು ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ. ಮೊದಲಿಗೆ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಗುಸುಗುಸು ಮೂಲಕ ಆರಂಭವಾದ ಈ ಸುದ್ದಿ ನಂತರ ಅಧಿಕೃತವೂ ಆಯಿತು.

ಸಾಮಾಜಿಕ ‌ಜಾಲತಾಣದಲ್ಲಿ ಇಬ್ಬರೂ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮಿಬ್ಬರ ನಡುವಿನ ಪ್ರೀತಿ ವಿಷಯವನ್ನು ಬಹಿರಂಗಪಡಿಸಿದರು.

ಬಳಿಕ ಈ ಜೋಡಿ ಕೆಲ ದಿನಗಳಲ್ಲೇ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡಿತು. ಇನ್ನು ಇತ್ತೀಚಿಗಷ್ಟೇ ಮದುವೆ ದಿನಾಂಕವನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದ ಈ ಜೋಡಿ ಇದೀಗ ಚಂದನವನದ ತಾರೆಯರ ಮನೆ ಮನೆಗೆ ಭೇಟಿ ನೀಡಿ ಆಹ್ವಾನಿಸುತ್ತಿದೆ.

ಸದ್ಯ ನಟ ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಶೃತಿ, ಮಾಲಾಶ್ರೀ ಹಾಗೂ ಸಂಗೀತ ನಿರ್ದೇಶಕ ಗುರು ಕಿರಣ್ ಮನೆಗಳಿಗೆ ಭೇಟಿ ನೀಡಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವಿವಾಹ ಆಮಂತ್ರಣ ಪತ್ತಿಕೆ ನೀಡಿ ಕಲಾವಿದರನ್ನು ಆಹ್ವಾನಿಸುತ್ತಿರುವ ಫೋಟೊಗಳು ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡಿವೆ.

ಇನ್ನು ಜನವರಿ 26ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಜನವರಿ 28ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಳ್ಳಲಿದೆ. ಇನ್ನು ಮೊನ್ನೆಯಷ್ಟೇ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಡಾಲಿ ಧನಂಜಯ್ ಮನೆಗೆ ಭೇಟಿ ನೀಡಿ ವಿವಾಹ ಆಮಂತ್ರಣ ನೀಡಿತ್ತು. ಈ ವೇಳೆಯ ಫೋಟೊವನ್ನು ಹಂಚಿಕೊಂಡಿದ್ದ ಡಾಲಿ ಧನಂಜಯ್ ಇಷ್ಟು ದಿನಗಳು ಮನೆಗೆ ಒಬ್ಬನೇ ಬರ್ತಿದ್ದ, ಈಗ ಜೋಡಿಯಾಗಿ ಬಂದಿದ್ದಾನೆ, ಮುದ್ದಾದ ಜೋಡಿ ಎಂದು ಬರೆದುಕೊಂಡು ಇಬ್ಬರಿಗೂ ಶುಭಕೋರಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ಶ್ರೀಮುರುಳಿಗೆ ಆರು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ಸೂಚನೆ.

Tue Jan 17 , 2023
‘ಬಘೀರ’ ಚಿತ್ರದ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡಿದ್ದ ನಟ ಶ್ರೀಮುರಳಿ ಶಸ್ತ್ರ ಚಿಕಿತ್ಸೆಗೆ ನಡೆಸಿದ್ದು, ಆರು ವಾರ ಫುಲ್ ರೆಸ್ಟ್ ತೆಗೆದುಕೊಳ್ಳಬೇಕು ಎಂದು ವೈದ್ಯರು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ. ಶ್ರೀಮುರುಳಿ ಎಡಭಾಗದ ಮೊಣಕಾಲಿಗೆ ತೀವ್ರ ಗಾಯವಾಗಿದ್ದ ಕಾರಣ ಬೆಂಗಳೂರಿನ ಮಣಿಪಾಲ್ ವಿಕ್ರಮ್ ಆಸ್ಪತ್ರೆಯಲ್ಲಿ ಡಾಕ್ಟರ್ ಶಂಕರ್ ಅವರ ಸಾರಥ್ಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಆಪರೇಷನ್ ಯಶಸ್ವಿಯಾಗಿದೆ. ಸದ್ಯ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಶ್ರೀಮುರಳಿ ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕು ಎಂದು […]

Advertisement

Wordpress Social Share Plugin powered by Ultimatelysocial