ಎಎನ್-94 ಬಳಕೆ: 1 ನಿಮಿಷದಲ್ಲಿ 1800 ಬುಲೆಟ್‌ ಚಿಮ್ಮುವ ದೊಡ್ಡಮ್ಮ!

 

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರನ್ನು ಹತ್ಯೆಗೈಯ್ಯಲು ದುಷ್ಕರ್ಮಿಗಳು ಬಳಸಿದ ಗನ್‌ ರಷ್ಯಾ ಸೈನಿಕರು ಬಳಸುವ ಮಾರಣಾಂತಿಕ ಎಎನ್-94 ಆಗಿದ್ದು, ಇದು ಒಂದು ನಿಮಿಷಕ್ಕೆ 1800 ಬುಲೆಟ್‌ ಉಗುಳುವ ಸಾಮೃರ್ಥ್ಯ ಹೊಂದಿದೆ.

ಭಾನುವಾರ ಮಾನ್ಸಾ ಬಳಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲು ದುಷ್ಕರ್ಮಿಗಳು ಎಎನ್‌-೯೪ ಗನ್‌ ಬಳಸಿದ್ದು, ಗಾಯನದ ದೇಹದಲ್ಲಿ 30 ಗುಂಡು ಹೊಕ್ಕಿದ್ದವು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೂಸೆವಾಲಾ ಹತ್ಯೆಗೆ 3 ಎಎನ್-94 ರಷ್ಯಾದ ಸೈನ್ಯದಲ್ಲಿ ಬಳಸುವ ಮಾರಣಾಂತಿಕ ರೈಫಲ್ ಅನ್ನು ಬಳಸಲಾಗಿದೆ. ಕೇವಲ 2 ಸುತ್ತಿನಲ್ಲಿ 30 ಗುಂಡುಗಳನ್ನು ಹಾರಿಸಲಾಗಿದೆ. ಒಂದೇ ನಿಮಿಷದಲ್ಲಿ 600 ಬುಲೆಟ್‌ ಅಥವಾ 2 ಸುತ್ತುಗಳಂತೆ 1800 ಬುಲೆಟ್‌ ಅನ್ನು ಒಂದೇ ನಿಮಿಷದಲ್ಲಿ ಹಾರಿಸಬಹುದಾಗಿದೆ.

ಪಂಜಾಬ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಇದೇ ಮೊದಲ ಬಾರಿಗೆ ಎಎನ್-94 ಭಯಾನಕ ರೈಫಲ್ ಬಳಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ರಷ್ಯಾದಿಂದ ಇದು ಭಾರತಕ್ಕೆ ಹೇಗೆ ಬಂತು? ಎಂಬುದು ಪೊಲೀಸರ ನಿದ್ದೆಗೆಡಿಸಿದೆ.

AN-94 ರಷ್ಯಾದ ಆಕ್ರಮಣಕಾರಿ ರೈಫಲ್ ಆಗಿದ್ದು, ಇದು ಎಕೆ-೪೭ಗಿಂತ ಅಪಾಯಕಾರಿಯಾಗಿದ್ದು, ಇದು ರೈಫಲ್‌ ಗಳ ವಿಭಾಗದಲ್ಲೇ ದೊಡ್ಡಮ್ಮ ಎಂದು ಹೇಳಲಾಗಿದೆ. ಎಎನ್ ಎಂಬ ಸಂಕ್ಷಿಪ್ತ ರೂಪವು `ಅವ್ಟೊಮತ್ ನಿಕೊನೊವಾ’ ಮಾಡೆಲ್ 1994 ಅನ್ನು ಸೂಚಿಸುತ್ತದೆ. ಎಎನ್-94 ಅನ್ನು ಅದರ ಮುಖ್ಯ ವಿನ್ಯಾಸಕ ಗೆನ್ನಡಿ ನಿಕೊನೊವ್ ಹೆಸರಿಡಲಾಗಿದೆ. ಅವರು ಈ ಹಿಂದೆ ನಿಕೊನೊವ್ ಮೆಷಿನ್ ಗನ್ ಅನ್ನು ವಿನ್ಯಾಸಗೊಳಿಸಿದ್ದರು.

1980 ರಲ್ಲಿ ಎಎನ್-94 ತಯಾರಿಸುವ ಕಾರ್ಯ ಪ್ರಾರಂಭವಾಗಿ 1994 ರಲ್ಲಿ ಪೂರ್ಣಗೊಂಡಿತು. ನಂತರ 1997ರಲ್ಲಿ ರಷ್ಯಾ ಸೈನ್ಯಕ್ಕೆ ಎಎನ್-47 ರೈಫಲ್ ಅನ್ನು ಸೇರಿಸಲಾಯಿತು. ಈಗಲೂ ರಷ್ಯಾ ಸೈನ್ಯ ಇದನ್ನು ಬಳಸುತ್ತಿದೆ. ಕೆಲವು ಶಸ್ತ್ರಾಸ್ತ್ರಗಳ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಬಳಸಲಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋನಿಯಾ ಗಾಂಧಿ ಜತೆ ದೇವೇಗೌಡ ಮಾತುಕತೆ:

Tue May 31 , 2022
ಬೆಂಗಳೂರು: ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಇದರಿಂದ ರಾಜ್ಯಸಭಾ ಚುನಾವಣೆ ಈಗ ಮತ್ತೆ ಕುತೂಹಲ ಸೃಷ್ಟಿಸಿದೆ. ಜೆಡಿಎಸ್ ಗೆ ಕೇವಲ ಹದಿಮೂರು ಸ್ಥಾನಗಳ ಅವಶ್ಯಕತೆ ಇರುವುದರಿಂದ ನಿಮ್ಮ ಹೆಚ್ಚುವರಿ ಮತವನ್ನು ತಮಗೆ ನೀಡುವಂತೆ ಜೆಡಿಎಸ್ ಮನವಿ ಮಾಡಿದೆ. ದೇವೇಗೌಡರ ಜತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜತೆ […]

Advertisement

Wordpress Social Share Plugin powered by Ultimatelysocial