ಮಾರ್ಚ್ 1 ರಂದು ಖಗೋಳದಲ್ಲಿ ಸಂಭವಿಸಲಿದೆ ಅಪರೂಪದ ವಿದ್ಯಮಾನ..!

ಮಾರ್ಚ್ 1ರಂದು ಖಗೋಳದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದ್ದು, ಅಂದು ಶುಕ್ರ ಹಾಗೂ ಗುರು ಗ್ರಹದ ಜೊತೆಗೆ ಭೂಮಿಯ ಏಕೈಕ ಉಪಗ್ರಹ ಚಂದ್ರ ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ.ಸೌರಮಂಡಲದ ಪ್ರಕಾಶಮಾನ ಗ್ರಹಗಳು ಎನಿಸಿಕೊಂಡಿರುವ ಶುಕ್ರ ಹಾಗೂ ಗುರು ಗ್ರಹಗಳು ಈಗಾಗಲೇ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿದ್ದು, ಗುರುವಾರದ ವೇಳೆಗೆ ಇವುಗಳ ಅಂತರ 9 ಡಿಗ್ರಿಯಷ್ಟು ತಲುಪಿದೆ.ಇವುಗಳು ಸಾಮಾನ್ಯವಾಗಿ 29 ಡಿಗ್ರಿಗಳ ಅಂತರವನ್ನು ಹೊಂದಿದ್ದು, ಆದರೆ ಈಗ ನಿಧಾನವಾಗಿ ಹತ್ತಿರಕ್ಕೆ ಸರಿಯುತ್ತಿವೆ. ಫೆಬ್ರವರಿ 27ರ ವೇಳೆಗೆ ಇವುಗಳ ನಡುವಿನ ಅಂತರ 2.3 ಡಿಗ್ರಿಗೆ ತಲುಪಬಹುದು ಎಂದು ಖಗೋಳ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಮಾರ್ಚ್ 1ರ ವೇಳೆಗೆ ಮತ್ತಷ್ಟು ಸಮೀಪಿಸುವ ಮೂಲಕ ವಿಶೇಷ ವಿದ್ಯಮಾನ ಸಂಭವಿಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೋಜ್ ಪಿ ನಡುಲುಮನೆ ‘ಮೇರಿ’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ - ಫೆಬ್ರವರಿ 24 ಅಲ್ಲ ಮಾರ್ಚ್ 10ಕ್ಕೆ ‘ಮೇರಿ’ ರಿಲೀಸ್

Fri Feb 24 , 2023
  ಆನ’ ಸಿನಿಮಾ ಮೂಲಕ ಪರಿಚಿತರಾಗಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಮೇರಿ’. ಥ್ರಿಲ್ಲರ್ ಹಾಗೂ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಕುತೂಹಲ ಭರಿತ ಟ್ರೇಲರ್ ಬಿಡುಗಡೆಯಾಗಿ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಟ್ರೇಲರ್ ಗೆ ಸಿನಿ ಪ್ರೇಕ್ಷಕರು ನೀಡಿರುವ ಅದ್ಭುತ ಪ್ರತಿಕ್ರಿಯೆ ಕಂಡು ಥ್ರಿಲ್ ಆಗಿರುವ ಚಿತ್ರತಂಡ ಫೆಬ್ರವರಿ 24ರ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಫೆಬ್ರವರಿ 24ರಂದು ‘ಮೇರಿ’ ಸಿನಿಮಾ ಬಿಡುಗಡೆ […]

Advertisement

Wordpress Social Share Plugin powered by Ultimatelysocial