ಜೆಡಿಯು ಪಕ್ಷದಲ್ಲಿ ಮೂಡಿದ ಒಡಕು.

ಪಾಟ್ನಾ,ಜ.27- ಎನ್‍ಡಿಎ ಮೈತ್ರಿಕೂಟದಿಂದ ಹೊರಬಿದ್ದು ಯುಪಿಎ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರ ರಚಿಸಿರುವ ಜೆಡಿಯುಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾ ಅವರು ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿತೀಶ್ ನೀಡಿರುವ ಸೂಚನೆಯನ್ನು ಕಡೆಗಣಿಸಿರುವ ಕುಶ್ವಾ ತನ್ನ ಪಾಲಿನ ಆಸ್ತಿ ನೀಡದ ವಿನಾಃ ಪಕ್ಷ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕುಶ್ವಾ ಅವರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹ ಕೇಳಿ ಬಂದಿರುವ ಬೆನ್ನಲ್ಲೆ ಜೆಡಿಯು ಪಕ್ಷದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ಕೂತೂಹಲಕ್ಕೆ ಕಾರಣವಾಗಿದೆ.

ರಾಜೀನಾಮೆ ನೀಡುವಂತೆ ಕೇಳಿರುವ ನಿತೀಶ್ ಅವರಿಗೆ ಚೆನ್ನಾಗಿ ಹೇಳಿದಿರಿ ಭಾಯ್ ಸಾಹೇಬï..! ಅಣ್ಣಂದಿರ ಸಲಹೆಯಂತೆ ಕಿರಿಯ ಸಹೋದರರು ಹೀಗೆಯೇ ಮನೆ ಬಿಟ್ಟು ಹೋಗುತ್ತಿದ್ದರೆ, ಅಣ್ಣಂದಿರೆಲ್ಲ ಕಿರಿಯರನ್ನು ಬಿಸಾಡಿ ಪೂರ್ವಜರ ಆಸ್ತಿಯನ್ನೆಲ್ಲ ಕಿತ್ತುಕೊಳ್ಳುತ್ತಾರೆ. ಸಹೋದರರೇ, ಸಂಪೂರ್ಣ ಆಸ್ತಿಯಲ್ಲಿ ನನ್ನ ಪಾಲನ್ನು ಬಿಟ್ಟು ನಾನು (ಪಕ್ಷದಿಂದ) ಹೇಗೆ ಹೊರಗೆ ಹೋಗಬಹುದು.? ಉಪೇಂದ್ರ ಕುಶ್ವಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಕುಶ್ವಾ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಯು ನಾಯಕ ಉಮೇಶ್ ಕುಶ್ವಾ ಅವರು ಪಕ್ಷ ಒಡೆಯಲು ಯತ್ನಿಸುತ್ತಿರುವ ಉಪೇಂದ್ರ ಅವರು ಈ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ.

ದಯವಿಟ್ಟು ನನ್ನೊಂದಿಗೆ ಮಾತನಾಡಲು ಉಪೇಂದ್ರ ಕುಶ್ವಾಹ ಅವರನ್ನು ಕೇಳಿ, ಅವರು ಕೂಡ ಮೊದಲೇ ಪಕ್ಷವನ್ನು ತೊರೆದರು, ಅವರಿಗೆ ಏನು ಬೇಕು ಎಂದು ನನಗೆ ತಿಳಿದಿಲ್ಲ. ನಾನು ಪಾಟ್ನಾದಲ್ಲಿ ಇರಲಿಲ್ಲ ಹಾಗಾಗಿ ನನಗೆ ಅದರ ಬಗ್ಗೆ ತಿಳಿದಿಲ್ಲ. ಅವರು ಪ್ರಸ್ತುತ ಅಸ್ವಸ್ಥರಾಗಿದ್ದಾರೆ, ನಾನು ಅವರನ್ನು ಭೇಟಿ ಮಾಡುತ್ತೇನೆ. ಮತ್ತು ಇದನ್ನು ಚರ್ಚಿಸಿ ಎಂದು ಗಯಾದಲ್ಲಿ ತಮ್ಮ ಸಮಾಧಾನ್ ಯಾತ್ರೆಯಲ್ಲಿ ನಿತೀಶ್ ಕುಮಾರ್ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆ ಬಿಡುಗಡೆ.

Fri Jan 27 , 2023
ನವದೆಹಲಿ: ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆ ‘ಇನ್‌ಕೋವ್ಯಾಕ್‌’ ಅನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಅವರು ಗುರುವಾರ ಇಲ್ಲಿ ಬಿಡುಗಡೆಗೊಳಿಸಿದರು. ಮಾರುಕಟ್ಟೆಯಲ್ಲಿ ಇನ್‌ಕೋವ್ಯಾಕ್‌ಗೆ ₹800 ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಪೂರೈಕೆಯಾಗುವ ಲಸಿಕೆಗೆ ₹325 ನಿಗದಿಪಡಿಸಲಾಗಿದೆ ಎಂದು ಈ ಹಿಂದೆ ಭಾರತ್‌ ಬಯೋಟೆಕ್‌ ಹೇಳಿಕೆಯಲ್ಲಿ ತಿಳಿಸಿತ್ತು.   ಇತ್ತೀಚಿನ […]

Advertisement

Wordpress Social Share Plugin powered by Ultimatelysocial