ಅಭಯ್ ಈಗ ಮಂಡ್ಯ ಹೈದ.

“ಮನಸಾಗಿದೆ”   ಚಿತ್ರದಿಂದ ಪಾದಾರ್ಪಣೆ ಮಾಡಿದ್ದ ಯುವ ನಟ ಅಭಯ್  ಈಗ  “ಮಂಡ್ಯ ಹೈದ” ನಾಗಿದ್ದಾರೆ. ಅಭಯ್ ತಂದೆ  ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು  ವಿ. ಶ್ರೀಕಾಂತ್  ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಮುಂದಿನವಾರ ಚಿತ್ರದ ಮುಹೂರ್ತ ನಡೆಯಲಿದ್ದು ಶೀರ್ಷಿಕೆ ಬಿಡುಗಡೆಯಾಗಿದೆ.ನಿರ್ಮಾಪಕ ಚಂದ್ರಶೇಖರ್ ಮಾತನಾಡಿ, ಮುಹೂರ್ತ ನಡೆಸಿ ಅಂದಿನಿಂದಲೇ ಚಿತ್ರೀಕರಣ  ಪ್ರಾರಂಭಿಸಲಿದ್ದೇವೆ,  ಕಿರುತೆರೆ ನಟಿ ಭೂಮಿಕಾ ಅವರನ್ನು ನಾಯಕಿಯಾಗಿ  ಪರಿಚಯಿಸುತ್ತೇವೆ ಎನ್ನುವ ವಿವರ ನೀಡಿದರು‌.ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಮಂಡ್ಯ ಹೈದನ ಲವ್ ಯಾವ ಥರ ಇರಲಿದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಿದ್ದೇವೆ.ಚಿತ್ರದ ಶೇ.80 ರಷ್ಟು  ಚಿತ್ರೀಕರಣ ಮಂಡ್ಯ ,ಸುತ್ತಮುತ್ತಲ ಪ್ರದೇಶ, ಶೇ.20ರಷ್ಟು  ಭಾಗ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಪ್ರೀತಿಗೋಸ್ಕರ ಪ್ರಾಣ ತೆಗೀತಾರೆ,  ಕೆಲವರು ಪ್ರಾಣ ಕೊಡುತ್ತಾರೆ,  ನಾಯಕ  ಪ್ರೀತಿಗಾಗಿ  ಪ್ರಾಣ ಕೊಡ್ತಾನಾ,ಪ್ರಾಣ  ತೆಗೀತಾನಾ ಎನ್ನುವುದು ಚಿತ್ರದ ಒಂದು ಸಾಲಿನ ಥೆ ಎಂದರು.ನಾಯಕ ಅಭಯ್,ಚಿತ್ರದ ಕಥೆ ಇಷ್ಟವಾಗಿದೆ. ಪಕ್ಕಾ ಮಂಡ್ಯ ಭಾಷೆ   ಚಿತ್ರದಲ್ಲಿರಲಿದೆ.‌ಸಹೋದರ ತೇಜಸ್ ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ  ಭಾಗಿಯಾಗಲಿದ್ದಾನೆ  ಎಂದು ಹೇಳಿದರು.ನಾಯಕಿ ಭೂಮಿಕಾ , ಗೀತಾ  ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳು ಹಾಗು ರಾಬರ್ಟ್, ಬ್ರಹ್ಮಚಾರಿ ಚಿತ್ರಗಳಲ್ಲಿ  ಚಿಕ್ಕ  ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ.  ಮೊದಲ‌ ಬಾರಿಗೆ ನಾಯಕಿ ಎನ್ನುವ ವಿವರ ನೀಡಿದರು. ಸುರೇಂದ್ರನಾಥ್ ಸಂಗೀತ , ಮಾಡುತ್ತಿದ್ದಾರೆ.  ಮನುಗೌಡ ಛಾಯಾಗ್ರಹಣವಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದಲ್ಲಿ 'ದಿನಕ್ಕೆ 1 ಕೋಟಿ ಮೊಟ್ಟೆಗಳ ಕೊರತೆ 'ಎದುರಿಸುತ್ತಿದೆ.

Wed Jan 18 , 2023
ಔರಂಗಾಬಾದ್ : ಮಹಾರಾಷ್ಟ್ರವು ದಿನಕ್ಕೆ ಒಂದು ಕೋಟಿ ಮೊಟ್ಟೆಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ರಾಜ್ಯದ ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ರಾಜ್ಯದಲ್ಲಿ ಮೊಟ್ಟೆ ಉತ್ಪಾದನೆ’ಯನ್ನು ಹೆಚ್ಚಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಅಧಿಕಾರಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು. ರಾಜ್ಯವು ದಿನಕ್ಕೆ 1 ರಿಂದ 1.25 ಕೋಟಿ ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅಗತ್ಯವನ್ನು ಪೂರೈಸಲು ಇಲಾಖೆಯು ಯೋಜನೆಯನ್ನು ರೂಪಿಸುತ್ತಿದೆ ಎಂದು ಪಶುಸಂಗೋಪನೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ಧನಂಜಯ್ ಪರ್ಕಳೆ […]

Advertisement

Wordpress Social Share Plugin powered by Ultimatelysocial