ಹುಡುಗಿಗೆ ಹೊಡೆದ ಲವರ್‌ಗೆ ನಡುರಸ್ತೆಯಲ್ಲೇ ಜಾಡಿಸಿದ ನಟ ನಾಗಶೌರ್ಯ,

ತೆರೆಯ ಮೇಲಷ್ಟೇ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂಬುದನ್ನ ತೆಲುಗು ನಟ ನಾಗಶೌರ್ಯ ಪ್ರೂವ್ ಮಾಡಿದ್ದಾರೆ. ನಡುರಸ್ತೆಯಲ್ಲಿ ಯುವತಿಗೆ ಹೊಡೆದ ಲವರ್‌ಗೆ ನಾಗಶೌರ್ಯ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಿನಿಮಾ ತಮ್ಮ ಖಾಸಗಿ ಜೀವನ ಅಂತಾ ನಟ-ನಟಿಯರು ಬ್ಯುಸಿಯಿರುತ್ತಾರೆ. ಇತರೆ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ನಾಗಶೌರ್ಯ ಇದೀಗ ಮಾಡಿರುವ ಕೆಲಸ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾದಲ್ಲಿಷ್ಟೇ ಹೀರೋ ಅಲ್ಲ, ತೆರೆ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ನಟ ಪ್ರೂವ್ ಮಾಡಿದ್ದಾರೆ.

ಪ್ರೇಮಿಗಳಿಬ್ಬರು ರಸ್ತೆ ಮಧ್ಯೆ ಜಗಳವಾಡುತ್ತಿದ್ದು, ಈ ವೇಳೆ ಯುವಕ, ಯುವತಿ ಮೇಲೆ ಕೈ ಮಾಡಿದ್ದಾನೆ. ಇದನ್ನು ಕಂಡು ಸಿಟ್ಟಿಗೆದ್ದ ನಾಗ ಶೌರ್ಯ, ಕಾರಿನಿಂದ ಇಳಿದು, ಯುವತಿ ಹಲ್ಲೆ ಮಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆ ಹುಡುಗ, ನಾನು ಆಕೆಯ ಲವರ್ ಎಂದು ಸಬೂಬು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ನಾಗ ಶೌರ್ಯ, ಲವರ್ ಆಗಿಬಿಟ್ಟರೆ, ಆಕೆಯ ಮೇಲೆ ಕೈ ಮಾಡಬಹುದಾ ಕ್ಷಮೆ ಕೇಳು ಎಂದು ಯುವಕನ ವಿರುದ್ಧ ಗರಂ ಆಗಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಚೆ ಕಚೇರಿಯಲ್ಲಿಯೇ ಸಿಗಲಿದೆ ರೈತರಿಗೆ ಸಾಲ, ಅಲ್ಲೇ ಮರು ಪಾವತಿಸಿ!

Thu Mar 2 , 2023
ಸಂಪರ್ಕ ಜಾಲ ಹೊಂದಿರುವ ಭಾರತೀಯ ಅಂಚೆ ಇಲಾಖೆ ರೈತರಿಗೆ ಸಹಾಯಕವಾಗುವ ಕಾರ್ಯಕ್ರಮವನ್ನು ರೂಪಿಸುತ್ತಿದೆ. ರೈತರು ವಿವಿಧ ಸಾಲವನ್ನು ಇನ್ನು ಅಂಚೆ ಕಚೇರಿಯಲ್ಲಿಯೇ ಪಡೆಯಬಹುದು, ಅಲ್ಲದೇ ಇಎಂಐ ಸಹ ಇಲ್ಲೇ ಪಾವತಿ ಮಾಡಬಹುದಾಗಿದೆ. ಕರ್ನಾಟಕದ ಅಂಚೆ ವೃತ್ತ ಇಂತಹ ಕಾರ್ಯಕ್ರಮವೊಂದನ್ನು ರೂಪಿಸಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಕೈ ಜೋಡಿಸಿ ರೈತರಿಗೆ ನೆರವು ನೀಡಲು ಮುಂದಾಗಿದೆ. ಶೀಘ್ರವೇ ಗ್ರಾಮದಲ್ಲಿರುವ ಅಂಚೆ ಕಚೇರಿಯಲ್ಲಿ ರೈತರು ಹೆಚ್‌ಡಿಎಫ್‌ಸಿ ಬ್ಯಾಂಕ್ ಸಾಲವನ್ನು ಪಡೆಯಬಹುದಾಗಿದೆ. ಬ್ಯಾಂಕ್ ಸಾಲ ಪಡೆದವರು […]

Advertisement

Wordpress Social Share Plugin powered by Ultimatelysocial