ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ.

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

ಇದಕ್ಕೆ ಕಾಮೆಂಟ್ ಮಾಡಿದ್ದ ಕೆಲವರು ಹಣದಾಸೆಗಾಗಿ ಮಹಾಲಕ್ಷ್ಮಿ, ರವೀಂದರ್ ಚಂದ್ರಶೇಖರನ್ ಅವರನ್ನು ಮದುವೆಯಾಗಿದ್ದಾರೆ ಎಂದು ಟೀಕಿಸಿದ್ದರು.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಆದ ಲೋಕದಲ್ಲಿ ಮುಳುಗಿದ್ದರು.

ಇದೀಗ ಮಹಾಲಕ್ಷ್ಮಿ ಪತಿ ಜೊತೆಗಿರುವ ಕೆಲ ಫೋಟೋಗಳನ್ನು ಹಾಕಿದ್ದು, ನಮ್ಮಿಬ್ಬರದು ‘ಮೇಡ್ ಫಾರ್ ಈಚ್ ಅದರ್ ಜೋಡಿಯಲ್ಲ ಮ್ಯಾಡ್ ಫಾರ್ ಈಚ್ ಅದರ್’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದಕ್ಕೂ ಟೀಕಿಸುತ್ತಿರುವ ಕೆಲವರು ದುಡ್ಡಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ. ಆದರೆ ಮತ್ತಷ್ಟು ಮಂದಿ, ಇದು ಅವರವರ ಇಷ್ಟ. ಸ್ವತಃ ಅವರುಗಳೇ ನಾವು ಸಂತಸದಿಂದಿದ್ದೇವೆ ಎನ್ನುವಾಗ ಬೇರೆಯವರು ಏಕೆ ಟೀಕಿಸಬೇಕು ಎಂದು ಪ್ರಶ್ನಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂಲವ್ಯಾಧಿ ಮನೆ ಮದ್ದು

Sat Jan 14 , 2023
೧. ತುಳಸಿ ಎಲೆ, ಕರಿಮೆಣಸು, ಹಸಿಈರುಳ್ಳಿ ೩, ಸಮಪ್ರಮಾಣದಲ್ಲಿ ನುಣ್ಣಗೆ ಅರೆದು ಗೋಲಿಗಾತ್ರದ ಉಂಡೆಮಾಡಿ ಬೆಳಿಗ್ಗೆ – ಸಂಜೆ ೨-೨ ಉಂಡೆ ತಿನ್ನುತ್ತಾ ಬಂದರೆ, ೫ – ೬ ದಿನಗಳಲ್ಲಿ ಮೂಲವ್ಯಾಧಿ ಕಡಿಮೆಯಾಗುವುದು. ೨. ಆಸನದಲ್ಲಿ ಆಗುವ ಉರಿ, ನೋವು ಇಂತಹ ಸಮಸ್ಯೆಗೆ ನೇರಳೆ ಮರದ ಎಲೆ ಹಾಗೂ ಮಾವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಬೇರೆ ಬಿಸಿನೀರಿಗೆ ಹಾಕಿ ೧ ಟಬ್‌ನಲ್ಲಿ ಹಾಕಿ ೫ ನಿಮಿಷ […]

Advertisement

Wordpress Social Share Plugin powered by Ultimatelysocial