12 ಲಕ್ಷ ಆದಾಯವಿದ್ದರೂ ಕಟ್ಟಬೇಕಾಗಿಲ್ಲ ತೆರಿಗೆ, ಇಲ್ಲಿದೆ ಸುಲಭ ಉಪಾಯ

2021-22ರ ಹಣಕಾಸು ವರ್ಷ ಇನ್ನೇನು ಮುಗೀತಾ ಬಂತು. ಈ ವರ್ಷ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗಲೇ ಇಲ್ಲ ಅಂತಾ ಎಷ್ಟೋ ಜನ ಸಂಕಟಪಡುತ್ತಿರಬಹುದು.

ಜವಾಬ್ದಾರಿಯುತ ನಾಗರಿಕರಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸುವುದು ನಿಮ್ಮ ಕರ್ತವ್ಯ. ಆದರೆ ತೆರಿಗೆ ಉಳಿತಾಯ ಮಾಡಿದ್ರೆ ನಿಮಗೆ ಅನುಕೂಲವಾಗುತ್ತದೆ.

ಇನ್ನೂ ಕಾಲ ಮಿಂಚಿಲ್ಲ, ಸರಳ ರೀತಿಯಲ್ಲಿ ಟ್ಯಾಕ್ಸ್‌ ಬಚಾವ್‌ ಮಾಡೋದು ಹೇಗೆ ಎಂಬುದನ್ನು ನಾವ್‌ ನಿಮಗೆ ಹೇಳ್ತೀವಿ.

ನಿಮ್ಮ ಸಂಬಳ ಅಥವಾ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಆಗಿದ್ದರೂ ನೀವು ತೆರಿಗೆ ಪಾವತಿಸುವ ಅಗತ್ಯವಿಲ್ಲ. ತೆರಿಗೆ ಉಳಿತಾಯಕ್ಕಾಗಿ ನೀವು ಸಂಪೂರ್ಣ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ನಿಮ್ಮ ಉದ್ಯೋಗದಾತ ಕಂಪನಿಯು ನಿಮ್ಮ ಸಂಬಳದಿಂದ ತೆರಿಗೆ ಹಣವನ್ನು ಕಡಿತಗೊಳಿಸಿದ್ದರೂ ಸಹ, ಈ ಲೆಕ್ಕಾಚಾರದ ಆಧಾರದ ಮೇಲೆ ITR ಸಲ್ಲಿಸುವ ಆ ಮೊತ್ತವನ್ನು ಮರಳಿ ಪಡೆಯಬಹುದು.

1. ಮೊದಲನೆಯದಾಗಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ ಸರ್ಕಾರ ನೀಡಿದ 50 ಸಾವಿರ ರೂಪಾಯಿಯನ್ನು ಕಳೆಯಿರಿ. ಬಳಿಕ ನಿಮ್ಮ ನಿಮ್ಮ ತೆರಿಗೆಯ ಆದಾಯ 11.50 ಲಕ್ಷ ರೂಪಾಯಿ ಆಗುತ್ತದೆ.

2. ಈಗ ನೀವು 80C ಅಡಿಯಲ್ಲಿ 1.5 ಲಕ್ಷ ರೂಪಾಯಿ ಕ್ಲೇಮ್‌ ಮಾಡಬಹುದು. ಇದರಲ್ಲಿ ಮಕ್ಕಳ ಬೋಧನಾ ಶುಲ್ಕ, PPF, LIC, EPF, ಮ್ಯೂಚುವಲ್ ಫಂಡ್ ಗೃಹ ಸಾಲದ ಅಸಲು ಇತ್ಯಾದಿಗಳನ್ನು ಕ್ಲೈಮ್ ಮಾಡಬಹುದು. ಈ ರೀತಿ ಮಾಡಿದ ಬಳಿಕ ನಿಮ್ಮ ಆದಾಯದ ಮೊತ್ತ 10 ಲಕ್ಷಕ್ಕೆ ಬಂದು ನಿಲ್ಲುತ್ತದೆ.

3. 12 ಲಕ್ಷ ರೂಪಾಯಿ ಸಂಬಳದ ಮೇಲೆ ತೆರಿಗೆ ಶೂನ್ಯ ಮಾಡಲು 80CCD (1B) ಅಡಿಯಲ್ಲಿ ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ 50 ಸಾವಿರ ಹೂಡಿಕೆ ಮಾಡಬೇಕು. ಈ ಮೂಲಕ ನಿಮ್ಮ ತೆರಿಗೆಯ ವೇತನ 9.5 ಲಕ್ಷ ರೂ.ಗೆ ಇಳಿದಂತಾಗುತ್ತದೆ.

4. ಈಗ ನೀವು ಆದಾಯ ತೆರಿಗೆಯ ಸೆಕ್ಷನ್ 24B ಅಡಿಯಲ್ಲಿ ಬಡ್ಡಿಯ ಮೇಲೆ ರೂ 1.5 ಲಕ್ಷದವರೆಗೆ ಮತ್ತು ಆದಾಯ ತೆರಿಗೆಯ ಸೆಕ್ಷನ್ 80EEA ಅಡಿಯಲ್ಲಿ ರೂ 1.5 ಲಕ್ಷದವರೆಗೆ ಹೆಚ್ಚುವರಿ ಕಡಿತವನ್ನು ಪಡೆಯಬಹುದು. ಈ ರೀತಿಯಾಗಿ, ನೀವು ಗೃಹ ಸಾಲದ ಬಡ್ಡಿಯ ಮೇಲೆ ಒಟ್ಟು 3.5 ಲಕ್ಷ ರೂಪಾಯಿ ಕಡಿತಕ್ಕೆ ಕ್ಲೇಮ್‌ ಮಾಡಬಹುದು. ಯಾಕಂದ್ರೆ 2019ರ ಬಜೆಟ್‌ನಲ್ಲಿ ಕೈಗೆಟುಕುವ ಬೆಲೆಯ ಮನೆಗಳಿಗೆ 1.5 ಲಕ್ಷ ರೂಪಾಯಿ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗಿದೆ.

5. ಸೆಕ್ಷನ್ 80EEA ಅಡಿಯಲ್ಲಿ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹರಾಗಲು ನಿಮ್ಮ ಹೋಮ್ ಲೋನ್ ಅನ್ನು ಏಪ್ರಿಲ್ 1, 2019 ಮತ್ತು ಮಾರ್ಚ್ 31, 2022 ರ ನಡುವೆ ಬ್ಯಾಂಕ್ ಅಥವಾ NBFC ಅನುಮೋದಿಸಬೇಕು. ಅಲ್ಲದೆ, ಆಸ್ತಿಯ ಮುದ್ರಾಂಕ ಶುಲ್ಕ 45 ಲಕ್ಷ ರೂಪಾಯಿ ಮೀರಬಾರದು. ಮನೆ ಖರೀದಿದಾರರು ಯಾವುದೇ ಇತರ ವಸತಿ ಆಸ್ತಿಯನ್ನು ಹೊಂದಿರಬಾರದು. ಈ ರೀತಿಯಾಗಿ, 3.5 ಲಕ್ಷ ರೂ.ಗೆ ಕ್ಲೈಮ್ ಮಾಡಿದ ನಂತರ, ನಿಮ್ಮ ತೆರಿಗೆಯ ಆದಾಯವು 6 ಲಕ್ಷ ರೂಪಾಯಿಗೆ ಇಳಿಯುತ್ತದೆ.

6. ಆದಾಯ ತೆರಿಗೆಯ ಸೆಕ್ಷನ್ 80D ಅಡಿಯಲ್ಲಿ, ನಿಮ್ಮ ಕುಟುಂಬಕ್ಕೆ (ಹೆಂಡತಿ ಮತ್ತು ಮಕ್ಕಳು) 25 ಸಾವಿರ ರೂಪಾಯಿಗಳ ವೈದ್ಯಕೀಯ ಆರೋಗ್ಯ ವಿಮೆಯನ್ನು ನೀವು ಕ್ಲೈಮ್ ಮಾಡಬಹುದು. ಇದಲ್ಲದೆ, ಹಿರಿಯ ನಾಗರಿಕರು ಪೋಷಕರಿಗೆ ಪಾವತಿಸಿದ ಆರೋಗ್ಯ ವಿಮಾ ಪ್ರೀಮಿಯಂಗೆ 50 ಸಾವಿರ ಕ್ಲೈಮ್ ಮಾಡಬಹುದು. ಇದಲ್ಲದೇ 5000 ರೂ.ವರೆಗೆ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 75 ಸಾವಿರ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕ್ಲೈಮ್ ಮಾಡಿದ ನಂತರ, ನಿಮ್ಮ ತೆರಿಗೆಯ ಆದಾಯವು 5.25 ಲಕ್ಷ ರೂಪಾಯಿಗೆ ಬಂದು ತಲುಪುತ್ತದೆ.

7. ನಿಮ್ಮ ತೆರಿಗೆಯ ಆದಾಯವನ್ನು 5 ಲಕ್ಷಕ್ಕೆ ತರಲು ಯಾವುದೇ ಸಂಸ್ಥೆ ಅಥವಾ ಟ್ರಸ್ಟ್‌ಗೆ 25 ಸಾವಿರ ರೂಪಾಯಿ ದೇಣಿಗೆ ನೀಡಬೇಕು. ಆದಾಯ ತೆರಿಗೆಯ ಸೆಕ್ಷನ್ 80G ಅಡಿಯಲ್ಲಿ ನೀವು ಅದನ್ನು ಕ್ಲೈಮ್ ಮಾಡಬಹುದು. 25 ಸಾವಿರ ದೇಣಿಗೆ ನೀಡಿದಾಗ, ನಿಮ್ಮ ತೆರಿಗೆಯ ಆದಾಯವು 5 ಲಕ್ಷಕ್ಕೆ ಇಳಿಯುತ್ತದೆ.

8. ಈಗ ನಿಮ್ಮ ಆದಾಯ 5 ಲಕ್ಷ ರೂಪಾಯಿ. 2.5 ರಿಂದ 5 ಲಕ್ಷ ರೂಪಾಯಿಗಳ ಆದಾಯದ ಮೇಲೆ, ಶೇ.5 ರಷ್ಟು ಅಂದ್ರೆ 12,500 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಆದ್ರೆ ಇದಕ್ಕೆ ಸರ್ಕಾರದಿಂದ ವಿನಾಯಿತಿ ಇರುವುದರಿಂದ ನೀವು ನಯಾಪೈಸೆಯೂ ತೆರಿಗೆ ಕಟ್ಟಬೇಕಾಗಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ಯಾಸ್ಲೈಟ್ನಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದ, ವಿಕ್ರಾಂತ್ ಮಾಸ್ಸೆ!

Fri Mar 18 , 2022
ಅದು ಅವರ ವೃತ್ತಿಪರ ಜೀವನ ಅಥವಾ ವೈಯಕ್ತಿಕ ಮುಂಭಾಗವಾಗಿರಲಿ, ವಿಕ್ರಾಂತ್ ಮಾಸ್ಸೆ ಪ್ರಸ್ತುತ ಎರಡರಲ್ಲೂ ಅತ್ಯುತ್ತಮವಾದದ್ದನ್ನು ಆನಂದಿಸುತ್ತಿದ್ದಾರೆ! ಒಂದೆಡೆ, ಅವರ ಇತ್ತೀಚಿನ OTT ಚಿತ್ರ ಲವ್ ಹಾಸ್ಟೆಲ್‌ನ ಯಶಸ್ಸು ಮತ್ತು ಇನ್ನೊಂದೆಡೆ, ವಿಕ್ರಾಂತ್ ಅವರು ತಮ್ಮ ದೀರ್ಘಕಾಲದ ಗೆಳತಿ ಶೀತಲ್ ಠಾಕೂರ್ ಅವರನ್ನು ಫೆಬ್ರವರಿ 18, 2022 ರಂದು ವಿವಾಹವಾದರು. ವಿಕ್ರಾಂತ್ ಅವರ ಮದುವೆಯ ಬಗ್ಗೆ ಹೇಳಿದ್ದನ್ನೆಲ್ಲಾ ನಾವು ಈಗಾಗಲೇ ಹಂಚಿಕೊಂಡಿದ್ದೇವೆ. ವಿಕ್ರಾಂತ್ ತನ್ನ ಮುಂಬರುವ ಪ್ರಾಜೆಕ್ಟ್, ಸಾರಾ ಅಲಿ […]

Advertisement

Wordpress Social Share Plugin powered by Ultimatelysocial