ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

ವದೆಹಲಿ: ಸಿನಿಮಾ ಲೋಕದ ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್​ ನಟಿ ರಾಖಿ ಸಾವಂತ್, ಇತ್ತೀಚೆಗಷ್ಟೇ ಮೈಸೂರು ಮೂಲದ ಆದಿಲ್​ ದುರ್ರಾನಿ ಎಂಬುವರನ್ನು ಮದುವೆಯಾಗಿದ್ದು, ಇದೀಗ ತನ್ನ ಪತಿಗೆ ವಿವಾಹೇತರ ಸಂಬಂಧ ಇದೆ ಎಂದು ಆರೋಪ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಫೆ. 2ರಂದು ಜಿಮ್​ಗೆ ತೆರಳುವಾಗ ಎದುರಾದ ಸುದ್ದಿಗಾರರೊಂದಿಗೆ ಮಾತನಾಡಿದ ರಾಖಿ ಸಾವಂತ್​, ಗಂಡ ಆದಿಲ್​ ದುರ್ರಾನಿ ಬಗ್ಗೆ ಮಾತನಾಡುತ್ತಾ ಕಣ್ಣೀರಾಕಿದರು. ಮರಾಠಿಯ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ ಆದಿಲ್​ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಅಂದಹಾಗೆ ರಾಖಿ ಅವರು ಮಹೇಶ್ ಮಂಜ್ರೇಕರ್ ಹೋಸ್ಟ್ ಮಾಡಿದ ರಿಯಾಲಿಟಿ ಶೋಗೆ ಚಾಲೆಂಜರ್ ಆಗಿ ಪ್ರವೇಶಿಸಿದರು ಮತ್ತು ನಾಲ್ಕನೇ ರನ್ನರ್ ಅಪ್ ಆಗಿ ಹೊರಬಂದರು.

ದುರ್ರಾನಿಯ ಯಾವುದೇ ಸಂದರ್ಶನ ಮಾಡದಂತೆ ಮಾಧ್ಯಮದವರ ಬಳಿ ಮನವಿ ಮಾಡಿದ ರಾಖಿ ಸಾವಂತ್​, ನೀವು ಆದಿಲ್‌ನ ಯಾವುದೇ ಸಂದರ್ಶನಗಳನ್ನು ತೆಗೆದುಕೊಳ್ಳಬಾರದು. ಅವನನ್ನು ದೊಡ್ಡ ಸ್ಟಾರ್ ಮಾಡಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್​ ಪ್ರವೇಶಿಸಲು ಬಯಸುತ್ತಿದ್ದಾನೆ. ನನ್ನ ಜೊತೆ ಬಂದರೆ ಆತ ಜಿಮ್‌ಗೆ ಬರುವುದಿಲ್ಲ. ಬದಲಾಗಿ ಮಾಧ್ಯಮಗಳ ಜೊತೆ ಸಂದರ್ಶನಗಳನ್ನು ನೀಡಲು ಇಲ್ಲಿಯೇ ಇರುತ್ತಾನೆ. ನಾನು ಅದನ್ನು ಬಯಸುವುದಿಲ್ಲ ಎಂದಿದ್ದಾರೆ.

ಆದಿಲ್​ ಓರ್ವ ಸುಳ್ಳುಗಾರ. ಆ ಹುಡುಗಿಯನ್ನು ಬ್ಲಾಕ್​ ಮಾಡುತ್ತೇನೆ ಅಂತಾ ಕುರಾನ್​ ಮೇಲೆ ಆಣೆ ಮಾಡಿದ್ದಾನೆ. ಆದರೆ, ಅದರಂತ ನಡೆದುಕೊಳ್ಳಲಿಲ್ಲ. ಇದೀಗ ಆ ಹುಡುಗಿ ಆತನನ್ನು ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ. ಅವಳ ಬಳಿ ಆದಿಲ್​ ಕುರಿತ ಕೆಲವು ಕೊಳಕು ಸಾಕ್ಷಿಗಳು ಇವೆ ಎಂದು ಹೇಳಿದ್ದಾರೆ.

ರಾಖಿ ಸಾವಂತ್​ ಆರೋಪಕ್ಕೆ ನೆಟ್ಟಿಗರು ಗರಂ ಆಗಿದ್ದು, ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಸದಾ ಪ್ರಚಾರದಲ್ಲಿರುವ ಹುಟ್ಟು ಆಕೆಗೆ ಹಿಡಿದಿದೆ. ಇತ್ತೀಚೆಗಷ್ಟೇ ಅವರ ತಾಯಿ ತೀರಿ ಹೋದರು. ಅದರ ಮಾರನೇ ದಿನವೇ ಆಕೆ ಜಿಮ್​ಗೆ ಬಂದಿದ್ದಾಳೆ. ಇಂಡಸ್ಟ್ರಿಯಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡಿದರೂ ಆಕೆ ಒಂದು ಗೌರವವನ್ನು ಉಳಿಸಿಕೊಂಡಿಲ್ಲ ಎಂದು ಕಾಮೆಂಟ್​ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಪಿ ವಿಧಾನಪರಿಷತ್ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು.

Fri Feb 3 , 2023
ಲಕ್ನೋ: ಉತ್ತರಪ್ರದೇಶದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಐದರ ಪೈಕಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮತ್ತು ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಸಮಾಜವಾದಿ ಪಕ್ಷ ಎಲ್ಲ ಐದು ಸ್ಥಾನಗಳಲ್ಲಿ ಸೋಲು ಕಂಡಿದೆ. ಬರೇಲಿ ಮೊರಾದಾಬಾದ್ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಜೈಪಾಲ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಗೋರಖ್‌ಪುರ ಫೈಜಾಬಾದ್ ಬ್ಲಾಕ್, ಕಾನ್ಪುರ ಪದವೀಧರ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಕಾನ್ಪುರದಲ್ಲಿ ಶಿಕ್ಷಕ ಕ್ಷೇತ್ರದ […]

Advertisement

Wordpress Social Share Plugin powered by Ultimatelysocial