ಆದಿತ್ಯ ಹೃದಯ

ರಥಸಪ್ತಮಿ. ರಥಾರೂಢನಾದ ಸೂರ್ಯದೇವ ತನ್ನ ಪಥವನ್ನು ಬದಲಾಯಿಸುವ ಪುಣ್ಯ ಪರ್ವವೆಂದು ರೂಢಿಯಾಗಿರುವ ‘ರಥಸಪ್ತಮಿ’ ಸೂರ್ಯನನ್ನು ಆರಾಧಿಸುವವರಿಗೆ ವಿಶೇಷ ದಿನ.
ಸಗುಣರೂಪೀ ದೇವತೆಗಳಲ್ಲಿ ಸ್ವಯಂತೇಜೋಮಯನಾಗಿರುವ ಸೂರ್ಯನು ಪ್ರಾಣಿಗಳಿಂದ ಯಾವ ಪ್ರತಿಫಲವನ್ನೂ ಬಯಸದೆ, ಜಗತ್ತಿಗೆಲ್ಲ ಬೆಳಕನ್ನು ನೀಡುತ್ತಾ ವೇದಕಾಲದಿಂದಲೂ ಎಲ್ಲರ ಆರಾಧ್ಯದೈವವೆನಿಸಿದ್ದಾನೆ. ಆದಿತ್ಯ, ರವಿ, ಸವಿತೃ ಮುಂತಾದ ಅಭಿಧಾನವುಳ್ಳ ಸೂರ್ಯನ ಉಪಾಸನಾ ಸಾಹಿತ್ಯಗಳಲ್ಲಿ ಶ್ರೀ ವಾಲ್ಮೀಕಿ ರಾಮಾಯಣದ `ಆದಿತ್ಯಹೃದಯ’ವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದೆ.
ರಾಮಾಯಣ ಕಥೆಯಲ್ಲಿ ಹೇಳಿರುವಂತೆ ಶ್ರೀರಾಮನು ರಾವಣಸಂಹಾರವನ್ನು ಕುರಿತು ಚಿಂತಾಕ್ರಾಂತನಾಗಿರುವಾಗ ಅಗಸ್ತ್ಯ ಮಹರ್ಷಿಗಳು ಆತನಿಗೆ ಗುಹ್ಯವೂ, ಸನಾತನವೂ, ಸರ್ವಶತ್ರುವಿನಾಶಕವೂ ಆದ `ಆದಿತ್ಯಹೃದಯ’ ವೆಂಬ ಸ್ತೋತ್ರಮಂತ್ರವನ್ನು ಉಪದೇಶಿಸುತ್ತಾರೆ.
ಸೂರ್ಯನ ಮಂಡಲದಿಂದ ಉಂಟಾಗುವ ಈ ತೇಜಸ್ಸು ‘ಯಸ್ಯ ಭಾಸಾ ಸರ್ವಮಿದಂ ವಿಭಾತಿ’ ಎಂಬ ಶ್ರುತಿವಾಕ್ಯದಂತೆ ಅಗ್ನಿ, ನಕ್ಷತ್ರಾದಿಗಳ ತೇಜಸ್ಸಿನಂತೆ ನಮ್ಮಗಳ ಹೃದಯದಲ್ಲಿ ಆತ್ಮಸ್ವರೂಪದಿಂದ ನೆಲೆಸಿರುವ ಭಗವಂತನ ತೇಜಸ್ಸಿನ ಒಂದು ಅಂಶವಾಗಿದೆ ಎಂಬುದು ಭಾರತೀಯ ಆಧ್ಯಾತ್ಮ ಚಿಂತನೆಯ ಒಂದು ನೋಟವಾಗಿದೆ. ಇದನ್ನು ಸ್ವಾಮಿ ವಿವೇಕಾನಂದರ ಮಾತುಗಳು ಮತ್ತಷ್ಟು ಸುಂದರವಾಗಿ ಆಪ್ತವಾಗಿಸುತ್ತವೆ. “ಹೇ ಸೂರ್ಯನೇ! ಸತ್ಯವನ್ನು ಸ್ವರ್ಣ ಮಂಡಲದಿಂದ ಮುಚ್ಚಿರುವೆ. ಆ ಆವರಣವನ್ನು ಆಚೆ ಸರಿಸು. ನಿನ್ನಲ್ಲಿರುವ ಸತ್ಯವನ್ನು ನನಗೆ ನೋಡಲು ಸಾಧ್ಯವಾಗಲಿ. ನಿನ್ನಲ್ಲಿರುವ ಸತ್ಯವನ್ನು ನಾನರಿತೆ. ನಿನ್ನ ಕಿರಣದ ಮತ್ತು ಕಾಂತಿಯ ನಿಜವಾದ ಅರ್ಥ ನನಗೆ ತಿಳಿಯಿತು. ನಿನ್ನಲ್ಲಿ ಹೊಳೆಯುವುದನ್ನು ನೋಡಿದೆ. ನಿನ್ನಲ್ಲಿರುವ ಸತ್ಯವನ್ನು ಅರಿತೆ. ನಿನ್ನಲ್ಲಿ ಯಾವುದಿರುವುದೋ ಅದೇ ನನ್ನಲ್ಲಿಯೂ ಇರುವುದು. ಅದೇ ನಾನು”
ಹೀಗೆ ಅಂತರ್ಯಾಮಿ ಭಗವಂತನ ಉಪಾಸನೆಯೇ ಈ ಆದಿತ್ಯಹೃದಯದ ಅಂತರಾರ್ಥವಾಗಿದೆ.
ಆದಿತ್ಯ ಹೃದಯಮ್
ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಂ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಾಬ್ರವೀದ್ರಾಮಮಗಸ್ತ್ಯೋ ಭಗವಾನೃಷಿಃ ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ವತ್ಸ ಸಮರೇ ವಿಜಯಿಷ್ಯಸಿ ||
ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಮಕ್ಷಯ್ಯಂ ಪರಮಂ ಶಿವಮ್ ||
ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿಂತಾಶೋಕಪ್ರಶಮನಮಾಯುರ್ವರ್ಧನಮುತ್ತಮಮ್ ||
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ ||
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ ||
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ ||
ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ ||
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ ||
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಂಡ ಅಂಶುಮಾನ್ ||
ಹಿರಣ್ಯಗರ್ಭಃ ಶಿಶಿರಸ್ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ||
ವ್ಯೋಮನಾಥಸ್ತಮೋಭೇದೀ ಋಗ್ಯಜುಸ್ಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀಪ್ಲವಂಗಮಃ ||
ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ ||
ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ನಮೋಽಸ್ತು ತೇ ||
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ||
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಂಡಾಯ ನಮೋ ನಮಃ ||
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ||
ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಽಭಿನಿಘ್ನಾಯ ರವಯೇ ಲೋಕಸಾಕ್ಷಿಣೇ ||
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ||
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ ||
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ||
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ ||
ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ ||
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತಥಾಗಸ್ತ್ಯೋ
ಜಗಾಮ ಚ ಯಥಾಗತಮ್ ||
ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ||
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ ||
ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶರಣ್ | On the birthday of our enthusiastic actor Sharan |

Fri Mar 4 , 2022
ಶರಣ್ On the birthday of our enthusiastic actor Sharan ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು. ಹಾಸ್ಯನಟರಾಗಿ ಬಂದ ಶರಣ್ ತಾವೇ ಚಿತ್ರ ನಿರ್ಮಿಸುವುದರ ಮೂಲಕ ತಮಗಿಷ್ಟವಾದ ಪಾತ್ರಗಳ ಚಿತ್ರ ನಿರ್ಮಿಸಿ ಗೆದ್ದವರು. ಹಿನ್ನೆಲೆ ಗಾಯಕರಾಗಿಯೂ ಹೆಸರಾದವರು. ಶರಣ್ 1972ರ ಫೆಬ್ರವರಿ 6ರಂದು ಗುಲ್ಬರ್ಗಾದಲ್ಲಿ ಜನಿಸಿದರು. ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಪ್ರಖ್ಯಾತ ನಟಿ ಶ್ರುತಿ ಶರಣ್ ಅವರ ಸಹೋದರಿ. […]

Advertisement

Wordpress Social Share Plugin powered by Ultimatelysocial