21 ವರ್ಷದ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ

21 ವರ್ಷದ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ

ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ (ಮಿಸ್ ಯೂನಿವರ್ಸ್) ಕಿರೀಟ ಧಕ್ಕಿದೆ. 21 ವರ್ಷ ವಯಸ್ಸಿನ ಮಾಡೆಲ್ ಹರ್ನಾಜ್ ಸಂಧು ಮಿಸ್ ಯೂನಿವರ್ಸ್‌ ಕಿರೀಟ ಧಾರಣೆ ಮಾಡಿದ್ದಾರೆ.

ಇಸ್ರೆಲ್‌ನಲ್ಲಿ 2021ರ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆಗಿದ್ದಾರೆ.

21 ವರ್ಷದ ಹಿಂದೆ ಭಾರತದ ಲಾರಾ ದತ್ತ ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆಗಿದ್ದರು. ಅದಾದ ಬಳಿಕ ಭಾರತದ ಇನ್ನಾವ ಚೆಲುವೆಗೂ ಮಿಸ್ ಯೂನಿವರ್ಸ್ ಕಿರೀಟ ಧಕ್ಕಿರಲಿಲ್ಲ.

ನಿನ್ನೆ (ಡಿಸೆಂಬರ್ 12) ರಾತ್ರಿ ಇಸ್ರೇಲ್‌ನ ಇಲಾಟ್‌ನಲ್ಲಿ ನಡೆದ ವರ್ಣರಂಜಿತ ಫೈನಲ್ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್‌ ಆಗಿ ಆಯ್ಕೆ ಆಗಿದ್ದಾರೆ. 2020 ರ ಮಿಸ್ ಯೂನಿವರ್ಸ್ ಆಂಡ್ರಿಯಾ ಮೇಜಾ ಮಿಸ್ ಯೂನಿವರ್ಸ್ ಕಿರೀಟವನ್ನು ಹರ್ನಾಜ್‌ಗೆ ತೊಡಿಸಿದರು. ಈ ಸಮಯದಲ್ಲಿ ಹರ್ನಾಜ್‌ ಭಾವೋದ್ವೇಗಕ್ಕೆ ಒಳಗಾದರು.

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಈ ಬಾರಿ 79 ಸುಂದರಿಯರು ಪಾಲ್ಗೊಂಡಿದ್ದರು. ಅವರಲ್ಲಿ ಮೊದಲಿಗರಾಗಿ ಹರ್ನಾಜ್ ಆಯ್ಕೆಯಾದರು. ಹರ್ನಾಜ್ ವಿಶ್ವದ 70ನೇ ಮಿಸ್ ಯೂನಿವರ್ಸ್. ಹರ್ನಾಜ್‌ ನಂತರದ ಸ್ಥಾನವನ್ನು ಪೆರುಗ್ವೆಯ ನಾಡಿಯಾ ಫೆರೆರಿಯಾ ಪಡೆದರೆ ಮೂರನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಲಲೇಲಾ ಸ್ವಾನೆ ಪಡೆದುಕೊಂಡರು.

ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ಹರ್ನಾಜ್, ”ನಾನು ಆ ದೇವರಿಗೆ, ನನ್ನ ಪೋಷಕರಿಗೆ ಹಾಗೂ ಮಿಸ್ ಇಂಡಿಯಾ ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ. ಇವರುಗಳು ನನಗೆ ಸರಿಯಾದ ಮಾರ್ಗದರ್ಶನ ಮಾಡಿದರು. ಮತ್ತು ನನಗಾಗಿ ಪ್ರಾರ್ಥಿಸಿದ ನನಗೆ ಬೆಂಬಲ ಸೂಚಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ. 21 ವರ್ಷಗಳ ನಂತರ ಈ ಕಿರೀಟವನ್ನು ಭಾರತಕ್ಕೆ ತರುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ” ಎಂದಿದ್ದಾರೆ.

ಹರ್ನಾಜ್‌, ಭಾರತದ ಚಂಢಿಘಡದವರು. ಶಾಲೆ, ಕಾಲೇಜು ಅಲ್ಲಿಯೇ ಮುಗಿಸಿದ ಹರ್ನಾಜ್ ಮಾಡೆಲಿಂಗ್ ಮಾಡುತ್ತಿದ್ದಾರೆ ಜೊತೆಗೆ ಕೆಲವು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆಯೂ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ ಹರ್ನಾಜ್. ‘ಭಾಯ್ ಜಿ ಕುಟ್ಟಾಂಜಿ’, ‘ಯಾರಾ ದಿಯಾ ಪೂ ಬಾರಾ’ ಹರ್ನಾಜ್ ನಟಿಸಿರುವ ಪಂಜಾಬಿ ಸಿನಿಮಾಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಟ್ವಿಟರ್‌ 2021ರ ಪಟ್ಟಿಯಲ್ಲಿ ದಕ್ಷಿಣ ಭಾರತ ದಳಪತಿ ವಿಜಯ್‌ ನಂ. 1

Thu Dec 23 , 2021
ನವದೆಹಲಿ: ಈ ವರ್ಷ ಟ್ವಿಟರ್‌ನಲ್ಲಿ ಅತಿ ಹೆಚ್ಚು ಉಲ್ಲೇಖಗೊಂಡಿರುವ ದಕ್ಷಿಣದ ಸಿನಿಮಾ ಹೀರೋಗಳ ಪೈಕಿ ತಮಿಳು ಸಿನಿಮಾ ಸೂಪರ್‌ ಸ್ಟಾರ್‌ ವಿಜಯ್‌ ನಂ. 1 ಎನಿಸಿದ್ದಾರೆ. ಅವರ ನಟನೆಯ ಮಾಸ್ಟರ್‌, ವಲಿಮೈ ಅತಿ ಹೆಚ್ಚಾಗಿ ಟ್ವೀಟರ್‌ನಲ್ಲಿ ಉಲ್ಲೇಖಗೊಂಡ ದಕ್ಷಿಣ ಭಾರತೀಯ ಸಿನಿಮಾಗಳೆನಿಸಿವೆ. ವಿಜಯ್‌ ನಂತರದ ಸ್ಥಾನಗಳಲ್ಲಿ ಪವನ್‌ ಕಲ್ಯಾಣ್‌, ಮಹೇಶ್‌, ಸೂರ್ಯ ಇದ್ದಾರೆ. ಕನ್ನಡದ ಕೆಜಿಎಫ್-ಚಾಪ್ಟರ್‌ 2, 10ನೇ ಸ್ಥಾನದಲ್ಲಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   […]

Advertisement

Wordpress Social Share Plugin powered by Ultimatelysocial