4 ವರ್ಷದ ಬಳಿಕ ಮತ್ತೆ ದರ್ಶನ್ ಜೊತೆ ರಚಿತಾ

ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾದ ಶೂಟಿಂಗ್ ಮತ್ತೆ ಆರಂಭ ಆಗಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ಅಭಿನಯಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ದರ್ಶನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್.

ಬಹಳ ದಿನಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿ ನಟಿಸುತ್ತಿದೆ. ಹೀಗಾಗಿ ಇಬ್ಬರ ಅಭಿಮಾನಿಗಳೂ ‘ಕ್ರಾಂತಿ’ಗಾಗಿ ಎದುರು ನೋಡುತ್ತಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬಿಡುವಿಲ್ಲದಷ್ಟು ಸಿನಿಮಾದಲ್ಲಿ ನಟಿಸುತ್ತಿದ್ದರೂ, ದರ್ಶನ್ ಜೊತೆ ನಟಿಸುವ ಸಲುವಾಗಿ ‘ಕ್ರಾಂತಿ’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಶೂಟಿಂಗ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಚಿತಾ ಕ್ರಾಂತಿ ಸಿನಿಮಾದ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಜೊತೆ ನಟಿಸುತ್ತಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

4 ವರ್ಷಗಳ ಬಳಿಕ ದರ್ಶನ್ ಜೊತೆ ರಚಿತಾ ನಟನೆ:
ಡಿಂಪಲ್ ಕ್ವೀನ್ ಹಾಗೂ ಚಾಲೆಂಜಿಂಗ್ ಸ್ಟಾರ್ ಜೋಡಿಯನ್ನು ತೆರೆಮೇಲೆ ನೋಡುವುದೇ ಒಂದು ಹಬ್ಬ. ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ ಅಂದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವುದು ಗ್ಯಾರಂಟಿ. ಹೀಗಾಗಿ ರಚಿತಾ ರಾಮ್ ಕೂಡ ಅಭಿಮಾನಿಗಳಷ್ಟೇ ಕಾತರರಾಗಿದ್ದಾರೆ. ” ನಾಲ್ಕೈದು ವರ್ಷದ ಬಳಿಕ ನಾನು ದರ್ಶನ್ ಸರ್ ಅವರೊಂದಿಗೆ ನಟಿಸುತ್ತಿದ್ದೇನೆ. ಆ ಖುಷಿಯನ್ನು ಹೇಳಲು ಅಸಾಧ್ಯ. ತುಂಬಾ ಉತ್ಸಾಹದಿಂದ ಸಿನಿಮಾ ಮಾಡುತ್ತಿದ್ದೇನೆ.” ಎಂದು ರಚಿತಾ ರಾಮ್ ಮಾಧ್ಯಮಗಳಿಗೆ ಹೇಳಿದ್ದಾರೆ.

‘ಕ್ರಾಂತಿ’ ಅದ್ಭುತ ಕಥೆಯುಳ್ಳ ಸಿನಿಮಾ:

‘ಕ್ರಾಂತಿ’ ಸಿನಿಮಾದಲ್ಲಿ ಈಗಾಗಲೇ ನಟಿಸುತ್ತಿರುವ ಡಿಂಪಲ್ ಕ್ವೀನ್ ಖುಷಿಯಾಗಿದ್ದಾರೆ. ಒತ್ತಡದ ನಡುವೆಯೂ ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಫುಲ್ ಖುಷಿಯಾಗಿದ್ದಾರೆ. ” ಕ್ರಾಂತಿ ಅದ್ಭುತ ಕಥೆ ಇರುವಂತಹ ಸಿನಿಮಾ. ನಾನು ಈ ಸಿನಿಮಾ ಬಗ್ಗೆ ಈಗಲೇ ಏನೂ ಹೇಳಲು ಇಷ್ಟ ಪಡುವುದಿಲ್ಲ. ಈಗ ತಾನೇ ಶೂಟಿಂಗ್ ಆರಂಭ ಆಗಿದೆ. ಶೈಲಾಜಾ ನಾಗ್ ಅವರ ಪ್ರೋಡಕ್ಷನ್ ಹೌಸ್‌ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಹರಿಕೃಷ್ಣ ಸರ್ ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದೇನೆ.” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KGF2 ಶೂಟಿಂಗ್‌ ಮುಗಿಸಿದ ಶ್ರೀನಿಧಿ ಶೆಟ್ಟಿ;

Fri Dec 24 , 2021
‘ಕೆಜಿಎಫ್’ ಅಂದ ತಕ್ಷಣ ಸಿನಿಪ್ರಿಯರಿಗೆ ರೋಮಾಂಚನ ಆಗುತ್ತೆ. ಕೆಜಿಎಫ್ ಮೊದಲ ಭಾಗವನ್ನು ನೋಡಿದ ಮಂದಿ ಎರಡನೇ ಭಾಗದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಆದರೆ ಸದ್ಯ ಸಿನಿಮಾ ಯಾವ ಹಂತದಲ್ಲಿ ಇದೆ. ಕೆಜಿಎಫ್ ಬಳಗದಲ್ಲಿ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್2 ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸದ್ಯ ಚಿತ್ರ ತಂಡ ಇನ್ನೂ ಶೂಟಿಂಗ್‌ ಹಂತದಲ್ಲಿ ಇದೆ. ಈ ವಿಚಾರವನ್ನು ನಟಿ ಶ್ರೀನಿಧಿ ತಮ್ಮ […]

Advertisement

Wordpress Social Share Plugin powered by Ultimatelysocial