ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ಸಜ್ಜು….!!!

ರಾಜ್ಯದ ಹುಬ್ಬಳ್ಳಿ ಸೇರಿದಂತೆ ದೇಶದ 13 ವಿಮಾನ ನಿಲ್ದಾಣಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆರಾಷ್ಟ್ರೀಯ ಹಣಗಳಿಕೆ ಯೋಜನೆಯಡಿ ದೇಶದ ಏಳು ಸಣ್ಣ ಹಾಗೂ ಆರು ದೊಡ್ಡ ವಿಮಾನ ನಿಲ್ದಾಣಗಳನ್ನು 50 ವರ್ಷಕ್ಕೆ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕೇಂದ್ರ ಸರ್ಕಾರದ ವಿಮಾನಯಾನ ಸಚಿವಲಾಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ನಾಲ್ಕು ವರ್ಷದಲ್ಲಿ 25 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕಖಾಸಗಿ ಪಾಲುದಾರಿಕೆಯಡಿ ನೀಡಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಅದರ ಭಾಗವಾಗಿ ಈಗಾಗಲೇ 2019ರಲ್ಲಿ ಆರು ವಿಮಾನ ನಿಲ್ದಾಣಗಳು ಅದಾನಿ ಗ್ರೂಪ್ ಪಾಲಾಗಿವೆ. ಉಳಿದಂತೆ ಕುಶಿನಗರ್, ಗಯಾ, ಅಮೃತ್ಸರ್, ಕಂಗ್ರಾ, ಭುವನೇಶ್ವರ್, ತಿರುಪತಿ, ರಾಯಪುರ್, ಔರಂಗಾಬಾದ್, ಇಂದೋರ್, ಜಬಲಾಪುರ್, ತಿರುಚಿ, ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ನೀಡಲು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಮುನಿಸ್ವಾಮಿ ಭರವಸೆ...!!!

Tue Oct 26 , 2021
ಕೋಲಾರದ ಜಿಲ್ಲೆಯ ಬಂಗಾರಪೇಟೆ ಹಾಗೂ ಕೆಜಿಎಫ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಗಿಂಡಿಗಳಿಂದ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಎದುರಾಗಿದ್ದು, ಈ ದುರಸ್ಥಿಗೆ  ಕೋಲಾರದ ಸಂಸದ ಎಸ್‌ ಮುನಿಸ್ವಾಮಿ ಅವರು ರಸ್ತೆಗಳನ್ನು ಮುಚ್ಚಲು ಸ್ವಂತ ಖರ್ಚಿನಲ್ಲಿ ಕಾಂಕ್ರಿಟ್‌ ವ್ಯವಸ್ಥೆ  ಮಾಡಿಸಿದ್ದಾರೆ… ಬಂಗಾರಪೇಟೆ ಹೊರವಲಯದಿಂದ ಕೆಜಿಎಫ್‌ ನಗರದ ವರೆಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ,ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗುಂಡಿಗಳಿಂದ ಅಫಘಾತಗಳು ಸಂಭವಿಸುತ್ತಿದೆ, ಹೀಗಾಗಿ ಎಲ್ಲಾ ಗುಂಡಿಗಳನ್ನ ತಾತ್ಕಾಲಿಕವಾಗಿ ಮುಚ್ಚಿಸಲು […]

Advertisement

Wordpress Social Share Plugin powered by Ultimatelysocial