ಏರ್‌ಟೆಲ್‌:ಭಾರತದಲ್ಲಿ 1.17 ಲಕ್ಷ ಕೋಟಿ ರೂಪಾಯಿ ಹೂಡಿಕೆ;

ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಅದರಲ್ಲೂ ಭಾರತದಲ್ಲಿ 5G ನೆಟ್‌ವರ್ಕ್‌ ವಿಚಾರವಾಗಿ ಎಲ್ಲಾ ಟೆಲಿಕಾಂಗಳು ಸಾಕಷ್ಟು ಪರೀಕ್ಷೆಯನ್ನು ನಡೆಸುತ್ತಿವೆ. ಸದ್ಯ ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಸಹ 5G ನೆಟ್‌ವರ್ಕ್‌ ಇದೇ ವರ್ಷ ಲಭ್ಯವಾಗಲಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಈ ಘೊಷಣೆ ಮಾಡಿದ ನಂತರ ಟೆಲಿಕಾಂ ಕಂಪನಿಗಳು ಇನ್ನಷ್ಟು ಆಕ್ಟಿವ್‌ ಆಗಿವೆ. ಇದೀಗ ಭಾರ್ತಿ ಏರ್‌ಟೆಲ್ ಭಾರತದಲ್ಲಿ ತನ್ನ ಮೂಲಸೌಕರ್ಯವನ್ನು ಬಲಪಡಿಸಲು 1.17 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ಲಾನ್‌ ಮಾಡಿದೆ.

ಏರ್‌ಟೆಲ್‌
ಹೌದು, ಏರ್‌ಟೆಲ್‌ ಭಾರತದಲ್ಲಿ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿನ ತನ್ನ ವಿವಿಧ ಅಂಗಸಂಸ್ಥೆಗಳಲ್ಲಿ 1.17 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸುತ್ತಿದೆ. ಏರ್‌ಟೆಲ್‌ ಕಂಪನಿಯು ತನ್ನ ಅಂಗಸಂಸ್ಥೆಗಳಾದ ಇಂಡಸ್ ಟವರ್ಸ್, Nxtra ಮತ್ತು ಭಾರ್ತಿ ಹೆಕ್ಸಾಕಾಮ್‌ನೊಂದಿಗೆ ವ್ಯಾಪಾರ ವಹಿವಾಟಿನ ಮೂಲಕ ಮೊತ್ತವನ್ನು ಹೂಡಿಕೆ ಮಾಡಲು ಯೋಜಿಸುತ್ತಿದೆ. ಇದರೊಂದಿಗೆ ತನ್ನ ಸೇವೆಗಳನ್ನು ಇನ್ನಷ್ಟು ಬಲಪಡಿಸಲು ಹೊಸ ಪ್ಲಾನ್‌ ರೂಪಿಸುತ್ತಿದೆ ಎನ್ನಲಾಗಿದೆ. ಹಾಗಾದ್ರೆ ಏರ್‌ಟೆಲ್‌ ಭಾರತದಲ್ಲಿ ಯಾವೆಲ್ಲಾ ಕ್ಷೇತ್ರದಲ್ಲಿ ಹೊಸ ಹೂಡಿಕೆ ಮಾಡುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಕಾಂ

ದೇಶದ ಪ್ರಮುಖ ಟೆಲಿಕಾಂ ಕಂಪೆನಿ ಎನಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌ ಇಂಡಸ್ ಟವರ್ಸ್‌ನೊಂದಿಗೆ 88,000 ಕೋಟಿ ವಹಿವಾಟು ನಡೆಸಲಿದೆ. ಡೇಟಾ ಸೆಂಟರ್ ಸಂಸ್ಥೆ ಎನ್‌ಎಕ್ಸ್‌ಟ್ರಾದ ಸೇವೆಗಳನ್ನು ಪಡೆಯಲು 15,000ರೂ. ಕೋಟಿ ಮತ್ತು ಸೆಲ್ಯುಲಾರ್ ಸೇವೆ, ಬ್ರಾಡ್‌ಬ್ಯಾಂಡ್ ಸೇವೆ ಮತ್ತು ಟೆಲಿಕಾಂ ಸೇವೆಯನ್ನು ಒದಗಿಸುವ ಭಾರ್ತಿ ಹೆಕ್ಸಾಕಾಮ್‌ನೊಂದಿಗೆ 14,000ರೂ. ಕೋಟಿಗಳಷ್ಟು ವಹಿವಾಟು ನಡೆಸಲಿದೆ. ಇದಲ್ಲದೆ, ಏರ್‌ಟೆಲ್ ಮುಂದಿನ ನಾಲ್ಕು ಹಣಕಾಸು ವರ್ಷಗಳ ಅವಧಿಯಲ್ಲಿ ಇಂಡಸ್ ಟವರ್ಸ್‌ನಲ್ಲಿ 17,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲಿದೆ. ಹಾಗೆಯೇ 2025-26 ರಲ್ಲಿ 20,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

ಹೂಡಿಕೆಗಳು

ಇನ್ನು ಈ ಹೂಡಿಕೆಗಳು ಏರ್‌ಟೆಲ್‌ ಕಂಪೆನಿಯ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡಲಿದೆ. ಜೊತೆಗೆ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ 5G ಸೇವೆಗಳ ರೋಲ್‌ಔಟ್‌ಗೆ ಈ ಹೂಡಿಕೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಜಾಗತಿಕವಾಗಿ 5G ಬೆಳವಣಿಗೆಗಳನ್ನು ಗಮನಿಸಿದರೆ ಭಾರತದಲ್ಲಿಯೂ ಕೂಡ 5G ನೆಟ್‌ವರ್ಕ್‌ ನಿಧಾನವಾಗಿ ಪ್ರಮುಖ ನಗರಗಳಲ್ಲಿ ಲಭ್ಯವಾಗಲಿದೆ. ನಂತರ ನಮ್ಮ ಪ್ರಸ್ತುತ ನೆಟ್‌ವರ್ಕ್‌ನ ಉದ್ದ ಮತ್ತು ಅಗಲದಲ್ಲಿ ಭಾರತದ ಉಳಿದ ಭಾಗಗಳಿಗೆ ರಿಯಾಲಿಟಿ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರಿಂದ ಬೃಹತ್ 5G ರೋಲ್‌ಔಟ್‌ಗಳ ಸಮಯದಲ್ಲಿ ನಿಷ್ಕ್ರಿಯ ಮೂಲಸೌಕರ್ಯದ ಹೆಚ್ಚಿದ ಅಗತ್ಯತೆಗಳನ್ನು ಪರಿಗಣಿಸಿ, ಕಂಪನಿಯು 2025-26 ರ FY ಗಾಗಿ ಇಂಡಸ್ ಟವರ್ಸ್‌ನೊಂದಿಗೆ ವಾರ್ಷಿಕ 20,000 ಕೋಟಿ ರೂಪಾಯಿಗಳವರೆಗಿನ ಹೆಚ್ಚಿನ ಮೊತ್ತದ ವಹಿವಾಟುಗಳನ್ನು ನಡೆಸಲು ಏರ್‌ಟೆಲ್‌ ಪ್ಲಾನ್‌ ಮಾಡಿದೆ.

ನೆಟ್‌ವರ್ಕ್‌

ಸದ್ಯ ದೇಶದಲ್ಲಿ 5G ನೆಟ್‌ವರ್ಕ್‌ ಸಂಬಂಧಿತ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದರ ನಡುವೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ವೇಳೆ 5G ಸ್ಪೆಕ್ಟ್ರಮ್ ಹರಾಜು ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ 5G ಸೇವೆಗಳ ನಿಯೋಜನೆಯು 2022-23 ಹಣಕಾಸು ವರ್ಷದಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಏರ್‌ಟೆಲ್‌ ಭಾರತದಲ್ಲಿ 5Gಗಾಗಿ ಸಾಖಷ್ಟು ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ, ಏರ್‌ಟೆಲ್ ಇದೇ ಫೆಬ್ರವರಿ 26 ರಂದು ಸಾಮಾನ್ಯ ಸಭೆಯನ್ನು ನಡೆಸಲಿದ್ದು, ಈ ಸಮಯದಲ್ಲಿ ಸುಮಾರು 7,500 ಕೋಟಿ ರೂಪಾಯಿಗಳ ಹೂಡಿಕೆಗೆ ಕಂಪನಿಯ 1.28% ಪಾಲನ್ನು ಗೂಗಲ್‌ಗೆ ನೀಡಲು ಅನುಮೋದನೆ ಪಡೆಯಲಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

U-19 ವಿಶ್ವಕಪ್: ಬ್ಯಾಟಿಂಗ್‌ನತ್ತ ಗಮನಹರಿಸಲು ರಾಜ್‌ರ ಬೌಲಿಂಗ್‌ಗೆ ಕಡಿವಾಣ ಹಾಕಿದರು, ತಂದೆ ಬಹಿರಂಗಪಡಿಸಿದರು

Mon Feb 7 , 2022
    ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ U-19 ವಿಶ್ವಕಪ್ ಫೈನಲ್‌ನಲ್ಲಿ ಆಲ್‌ರೌಂಡರ್ ರಾಜ್ ಅಂಗದ್ ಬಾವಾ ತನ್ನ ವೇಗದ ಬೌಲಿಂಗ್‌ನೊಂದಿಗೆ 5-31 ಮತ್ತು ಪ್ರಮುಖ 35 ರನ್ ಗಳಿಸಿದರು. ಆದಾಗ್ಯೂ ಕುತೂಹಲಕಾರಿಯಾಗಿ, ಶೃಂಗಸಭೆಯ ಘರ್ಷಣೆಯಲ್ಲಿ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಗಳಿಸಿದ ಬಾವಾ, ವಾಸ್ತವವಾಗಿ 16 ವರ್ಷ ವಯಸ್ಸಿನವರೆಗೆ ಬೌಲಿಂಗ್ ಮಾಡುವುದನ್ನು ನಿಲ್ಲಿಸಲಾಯಿತು ಎಂದು ಅವರ ತಂದೆ ಮತ್ತು ತರಬೇತುದಾರ, ಹರಿಯಾಣದ U-19 ಮಾಜಿ ವೇಗದ […]

Advertisement

Wordpress Social Share Plugin powered by Ultimatelysocial