ಅಕ್ರೋಟ್‌ನ ಉಪಯೋಗಗಳು.

ಅಕ್ರೋಟ್‌ನ ಮೂಲಸ್ಥಾನ ಮಲಯೊ. ದಕ್ಷಿಣ ಭಾರತದ ಕಾಡುಗಳಲ್ಲಿಯೂ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ. ಅಕ್ರೋಟ್‌ನ ಕವಚದಿಂದ ಒಳಗಿರುವ ಬೀಜವನ್ನು ತೆಗೆದುನೋಡಿದರೆ ಅದರ ಆಕಾರ ಮನುಷ್ಯನ ತಲೆಬುರುಡೆಯ ಒಳಗಿರುವ ಮೆದುಳನ್ನು ಹೋಲುತ್ತದೆ. ಭಗವಂತನ ಸೃಷ್ಟಿಯು ಅದ್ಭುತ. ಈ ಬೀಜ ಕೂಡ ಮೆದುಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಅತಿ ಉತ್ತಮವಾದ್ದದು. ಇದರ ಎಲೆ, ತೊಗಟೆ, ತಿರುಳು, ಕಾಂಡ, ಬೀಜ, ಬೀಜದಿಂದ ತೆಗೆದ ಎಣ್ಣೆ ಬಹಳ ಉಪಯುಕ್ತವಾದುದು. ಇದು ಜೀವಸತ್ವಗಳು ಹಾಗೂ ಅಧಿಕವಾದ ಖನಿಜ ಪದಾರ್ಥಗಳನ್ನು ಒಳಗೊಂಡಿದೆ. ಪ್ರೋಟೀನ್, ನಾರಿನಂಶ, ತಾಮ್ರ, ಪೋಲಿಕ್ ಆಸಿಡ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಸತು, ಪಾಸ್ಫರಸ್, ಮ್ಯಾಂಗನೀಸ್, ಬಿ ೬ ಮತ್ತು ಇ ಜೀವಸತ್ವಗಳು ಇದರಲ್ಲಿ ವಿಶೇಷವಾಗಿವೆ.
ಅಕ್ರೋಟ್ ಎಲೆಯನ್ನು (೨) ತಿನ್ನುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. ಎಲೆ ಸಿಕ್ಕದಿದ್ದಾಗ ಅಕ್ರೋಟ್ ಅನ್ನು ಸೇವಿಸಬಹುದು. ಅಕ್ರೋಟ್ ಬೀಜದ ಎಣ್ಣೆಯನ್ನು ಸೇವಿಸಿದರೆ ಭೇದಿಯ ರೂಪದಲ್ಲಿ ಮಲವಿಸರ್ಜನೆಯಾಗುತ್ತದೆ.
ಅಕ್ರೋಟ್ ಬೀಜದ ಎಣ್ಣೆಯ ಸೇವನೆಯಿಂದ ಜಂತುಹುಳುಗಳ ಉಪಟಳವನ್ನು ನಿವಾರಿಸಿಕೊಳ್ಳಬಹುದು.
ಹಾಲುಣಿಸುವ ತಾಯಂದಿರಿಗೆ ಹಾಲು ನಿಲ್ಲಿಸಲು ಇದರ ತೊಗಟೆಯ ಕಷಾಯ ಸೇವನೆಯಿಂದ ಹಾಲಿನ ಉತ್ಪತ್ತಿ ನಿಂತುಹೋಗುತ್ತದೆ.
ಈ ಸಮಸ್ಯೆಯಿಂದ ಬಳಲುತ್ತಿರುವವರು, ಇದರ ಹಣ್ಣಿನ ರಸ ಇಲ್ಲವೆ ಬೀಜದ ಭಾಗವನ್ನು ಸೇವಿಸಿ.
ಶರೀರಕ್ಕೆ ಬೇಕಾಗುವ ಪೌಷ್ಠಿಕಾಂಶಗಳನ್ನು ಒದಗಿಸಿ ಶರೀರಕ್ಕೆ ಬಲವನ್ನು ಕೊಡುತ್ತದೆ, ಬೆಳವಣಿಗೆಗೆ ಸಹಾಯಕವಾಗುತ್ತದೆ.
 ಶರೀರಕ್ಕೆ ಬೇಡದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಶರೀರಕ್ಕೆ ಬೇಕಾಗುವ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿ ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಇದರ ಸೇವನೆಯಿಂದ ಅನುಕೂಲವಾಗುತ್ತದೆ.
 ಒಮೆಗಾ ೩ ಫ್ಯಾಟಿ ಆಸಿಡ್ ಮತ್ತು ಇ ಜೀವಸತ್ವ ಇರುವುದರಿಂದ ಕ್ಯಾನ್ಸರ್ ಸಮಸ್ಯೆ ಬರದಿರುವಂತೆ ಕಾಪಾಡುತ್ತದೆ.
 ಒಮೇಗಾ ೩ ಆಸಿಡ್ ಇರುವುದರಿಂದ ಜ್ಞಾಪಕಶಕ್ತಿ ಹಾಗೂ ಬುದ್ಧಿಶಕ್ತಿ ಜಾಸ್ತಿಯಾಗುತ್ತದೆ. ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಮೆದುಳಿಗೆ ಉತ್ತಮ ತ್ರಾಣಿಕ.ಮೆದುಳು ಚೆನ್ನಾಗಿ ಕೆಲಸ ಮಾಡುವುದರಿಂದ ಹಾಗೂ ರಕ್ತನಾಳಗಳಿಗೆ ಆಮ್ಲಜನಕ ಒದಗಿಸಿ ರಕ್ತದ ಸರಬರಾಜು ಆಗುವುದರಿಂದ ಮನಸ್ಸು ಸಮಾಧಾನವಾಗಿರಲು ಸಹಕಾರಿ ಹಾಗೂ ಖಿನ್ನತೆಗೆ ಒಳಗಾಗಿರುವವರಿಗೆ ಪ್ರತಿನಿತ್ಯ ಅಕ್ರೋಟ್ ಸೇವಿಸಲು ಕೊಡುವುದರಿಂದ ಬಹಳ ಬೇಗ ಚೇತರಿಸಿಕೊಳ್ಳುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರಿಹೈದ ಕರಿ ಅಜ್ಜ ಚಿತ್ರೀಕರಣ ಪೂರ್ಣ.

Mon Jan 30 , 2023
ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ `ಕರಿ ಹೈದ ಕರಿ ಅಜ್ಜ’ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಸುಧೀರ್ ಅತ್ತಾವರ್ ,ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡ ನಡೆದಿವೆ. ಕೊರಗಜ್ಜ ಎಂದು ಕರೆಯುವ ಕರಾವಳಿಭಾಗದ  ಆದಿವಾಸಿಗಳು ಎನ್ನಬಹುದಾದ ಕೊರಗ  ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ  ಕಥೆ ಉಳ್ಳ ಚಿತ್ರ.ಮಂಗಳೂರಿನ ನೇತ್ರಾವತಿ ನದಿ ತಟದಲ್ಲಿರುವ “ಕಲ್ಲಾಪು ಬೂರ್ದಗೋಳಿ” ಬಳಿ ಕೊರಗಜ್ಜನ ಜೊತೆ ಗುಳಿಗ ದೈವ ಇದೆ. ಗುಳಿಗ ನರ್ತನದ […]

Advertisement

Wordpress Social Share Plugin powered by Ultimatelysocial