ಅಕ್ಷರ್ ಪಟೇಲ್ ಸ್ಫೋಟಕ ಆಟ

ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭಾರತದ ವಿರುದ್ಧದ 16 ರನ್‌ಗಳ ಜಯ ಸಾಧಿಸುವ ಸರಣಿಯನ್ನು ಸಮಬಲ ಮಾಡಿಕೊಂಡಿದೆ. ಸೂರ್ಯಕುಮಾರ್ ಮತ್ತು ಅಕ್ಷರ್ ಪಟೇಲ್ ಉತ್ತಮವಾಗಿ ಹೋರಾಡಿದರೂ ಜಯ ತಂದುಕೊಡುವಲ್ಲಿ ಸಾಧ್ಯವಾಗಲಿಲ್ಲ.ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕುಶಾಲ್ ಮೆಂಡಿಸ್ ಮತ್ತು ದಸುನ್ ಶನಕ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಇಶಾನ್ ಕಿಶನ್ 2 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ 5 ರನ್ ಗಳಿಸಿ ಮತ್ತೆ ವೈಫಲ್ಯ ಅನುಭವಿಸಿದರು. ಚೊಚ್ಚಲ ಪಂದ್ಯವನ್ನಾಡಿದ ರಾಹುಲ್ ತ್ರಿಪಾಠಿ ಕೂಡ 5 ರನ್ ಗಳಿಸಿ ಔಟಾದರು.ನಾಯಕ ಹಾರ್ದಿಕ್ ಪಾಂಡ್ಯ 12 ರನ್, ದೀಪಕ್ ಹೂಡಾ 9 ರನ್‌ ಗಳಿಸಿ ಔಟಾಗುವ ಮೂಲಕ ಭಾರತ ತಂಡ ಒತ್ತಡಕ್ಕೆ ಸಿಲುಕಿತು. ಆದರೆ, ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಮೊದಲ ಪಂದ್ಯದಲ್ಲಿ ರನ್ ಗಳಿಸಲು ವಿಫಲವಾಗಿದ್ದ ಸೂರ್ಯಕುಮಾರ್ ಯಾದವ್ ಎರಡನೇ ಪಂದ್ಯದಲ್ಲಿ 36 ಎಸೆತಗಳಲ್ಲಿ 51 ರನ್‌ ಗಳಿಸಿ ಮಿಂಚಿದರು.ಅಕ್ಷರ್ ಪಟೇಲ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು, ಸ್ಫೋಟಕ ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಸಿಡಿಸಿದರು. ಭಾರತಕ್ಕೆ ಒಂದು ಹಂತದಲ್ಲಿ ಗೆಲ್ಲುವ ಆಸೆ ಮೂಡಿತ್ತಾದರೂ, ಇವರಿಬ್ಬರೂ ಔಟಾದ ನಂತರ ಸೋಲು ಖಚಿತವಾಯಿತು. ಪಂದ್ಯ ಸೋತರೂ, ಅಕ್ಷರ್ ಪಟೇಲ್ ತಮ್ಮ ಇನ್ನಿಂಗ್ಸ್ ಮೂಲಕ ಮೂರು ದಾಖಲೆ ಮುರಿದಿದ್ದಾರೆ.ಭಾರತೀಯ ಆಟಗಾರನ 5ನೇ ವೇಗದ ಅರ್ಧಶತಕಮೊದಲ 8 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದ ಅಕ್ಷರ್ ಪಟೇಲ್ ನಂತರ ಆರ್ಭಟಿಸಿದರು. ಮುಂದಿನ 12 ಎಸೆತಗಳಲ್ಲಿ 42 ರನ್‌ ಕಲೆಹಾಕುವ ಮೂಲಕ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ ಚೊಚ್ಚಲ ಅರ್ಧಶತಕವಾಗಿದೆ.ಇದು ಭಾರತೀಯ ಆಟಗಾರ ದಾಖಲಿಸಿದ 5ನೇ ವೇಗದ ಅರ್ಧಶತಕವಾಗಿದೆ. ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ 50 ರನ್ ಗಳಿಸಿರುವದ ಯುವರಾಜ್ ಸಿಂಗ್‌ ಅಗ್ರಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ ಅರ್ಧಶತಕ, 6 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ದಾಖಲಾದ ವೇಗದ ಅರ್ಧಶತಕವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ.

Fri Jan 6 , 2023
ಕಾರುಗಳಿಗೆ ಯದ್ವಾ ತದ್ವಾ ಡಿಕ್ಕಿ ಹೊಡೆದಿರುವ ಟಿಪ್ಪರ್. ದೇವನಹಳ್ಳಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಘಟನೆ. ಟಿಪ್ಪರ್ ಡಿಕ್ಕಿ ಹಿನ್ನಲೆ 7 ಕಾರುಗಳ ಮುಂಭಾಗ ಹಿಂಭಾಗ ಸಂಪೂರ್ಣ ಜಖಂ ಬಿಎಂಡಬ್ಲ್ಯೂ, ಥಾರ್, ಇಟಿಯೋಸ್ ಲಿವಾ, ಸ್ಯಾಂಟ್ರೋ, ಇಂಡಿಕಾ, ಸ್ವಿಫ್ಟ್ ಕಾರುಗಳಿಗೆ‌ ಡಿಕ್ಕಿ. ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್. ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ. ಟಿಪ್ಪರ್ ಬಿಟ್ಟು ಚಾಲಕ ಎಸ್ಕೇಪ್ ಟಿಪ್ಪರ್ ವಶಕ್ಕೆ […]

Advertisement

Wordpress Social Share Plugin powered by Ultimatelysocial