ಸಂಘಟನೆಳಿಗೆ ದೊಡ್ಡ ಬಜೆಟ್ ಸಿನಿಮಾಗಳ ಮೇಲೆಯೇ ಕಣ್ಣು!

ಕೆಲವು ಜನ, ಸಂಘಟನೆಳಿಗೆ ದೊಡ್ಡ ಬಜೆಟ್ ಸಿನಿಮಾಗಳ ಮೇಲೆಯೇ ಕಣ್ಣು. ಯಾವುದೇ ದೊಡ್ಡ ಬಜೆಟ್‌ನ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಕ್ಯಾತೆ ತೆಗೆದು ಬ್ಯಾನ್ ಆಗಬೇಕು, ಸೆನ್ಸಾರ್ ಆಗಬೇಕು ಎಂದೇನೇನೋ ಸುಖಾ ಸುಮ್ಮನೆ ವಿವಾದ ಮಾಡುತ್ತಾರೆ.’ಕೆಜಿಎಫ್’, ‘ಬಾಹುಬಲಿ’ ಸೇರಿದಂತೆ ಹಲವು ಸಿನಿಮಾಗಳು ಈ ಸಮಸ್ಯೆ ಎದುರಿಸಿವೆ.ಬಾಲಿವುಡ್‌ನಲ್ಲಿಯಂತೂ ಈ ಸಮಸ್ಯೆ ಹೆಚ್ಚು. ಕಳೆದ ಬಾರಿ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ನಟಿಸಿದ್ದ ‘ಪದ್ಮಾವತ್’ ಸಿನಿಮಾ ಬಿಡುಗಡೆ ಸಮಯದಲ್ಲಿ ಕಿರಿಕ್ ತೆಗೆದಿದ್ದ ಕರ್ಣಿ ಸೇನ ಈಗ ಮತ್ತೊಂದು ಬಿಗ್ ಬಜೆಟ್ ಬಾಲಿವುಡ್ ಸಿನಿಮಾದ ಮೇಲೆ ಕಣ್ಣು ಹಾಕಿದೆ.ನಟ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್’ ಮೇಲೆ ಕರ್ಣಿ ಸೇನ ಕಣ್ಣು ಹಾಕಿದ್ದು, ‘ಪೃಥ್ವಿರಾಜ್’ ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿಯಬೇಕು ಎಂದು ನ್ಯಾಯಾಲಯಕ್ಕೆ ಸಾರ್ವಜನಿಕ ಅರ್ಜಿ ಸಲ್ಲಿಸಿದೆ. ಅರ್ಜಿಗೆ ಸಂಬಂಧಿಸಿದಂತೆ ಫೆಬ್ರವರಿ 21 ಕ್ಕೆ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆಪೃಥ್ವಿರಾಜ್’ ಸಿನಿಮಾದ ವಿರುದ್ಧ ಕರ್ಣಿ ಸೇನಾದ ಉಪಾಧ್ಯಕ್ಷ ಸಂಗೀತ್ ಸಿಂಗ್ ಅರ್ಜಿ ಹೂಡಿದ್ದು, ಸಿನಿಮಾದಲ್ಲಿ ರಾಜಾ ಪೃಥ್ವಿರಾಜ್ ಚೌಹಾಣ್ ಅನ್ನು ಕೆಟ್ಟದಾಗಿ ಹಾಗೂ ತಪ್ಪಾಗಿ ಚಿತ್ರಿಸಲಾಗಿದೆ. ಪೃಥ್ವಿರಾಜ್ ಚೌಹಾಣ್ ಪ್ರಖ್ಯಾತ ಹಿಂದು ರಾಜಾ ಆಗಿದ್ದು, ಅವರನ್ನು ಕೆಟ್ಟದಾಗಿ ಚಿತ್ರಿಸಿರುವುದರಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಸಿನಿಮಾದ ಬಿಡುಗಡೆ ತಡೆಯುವಂತೆ ಮನವಿ ಮಾಡಲಾಗಿದೆ.ಸಿನಿಮಾದ ಟ್ರೇಲರ್‌ ಗಮನಿಸಿದರೆ ಸಿನಿಮಾದಲ್ಲಿ ರಾಜ ಪೃಥ್ವಿರಾಜ್ ಚೌಹಾಣ್‌ ಅನ್ನು ಕೆಟ್ಟದಾಗಿ ತೋರಿಸಿರುವುದು ಕಂಡು ಬರುವುದಿಲ್ಲ ಬದಲಿಗೆ ಪೃಥ್ವಿರಾಜಾ ಚೌಹಾಣ್ ಅವರ ವೀರತೆ, ಶೂರತೆಯನ್ನು ‘ಗ್ಲೋರಿಫೈ’ ಮಾಡಿ ತೋರಿಸಿರುವುದು ಕಂಡು ಬರುತ್ತಿದೆ. ಟೀಸರ್‌ನಲ್ಲಿಯಂತೂ ಪೃಥ್ವಿರಾಜ್ ಚೌಹಾಣ್‌ ಬಗ್ಗೆ ಎಲ್ಲಿಯೂ ಸಣ್ಣ ಆಕ್ಷೇಪ ಎತ್ತುವ ಅಂಶವಿಲ್ಲ ಆದರೂ ಕರ್ಣಿ ಸೇನಾ, ‘ಪೃಥ್ವಿರಾಜ್’ ಸಿನಿಮಾದ ಬಗ್ಗೆ ಆಕ್ಷೇಪಣೆ ಎತ್ತಿದೆ.ಈ ಹಿಂದೆ 2017 ರಲ್ಲಿ ನಟಿ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ನಟಿಸಿ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ ‘ಪದ್ಮಾವತಿ’ ಸಿನಿಮಾಕ್ಕೂ ಸಹ ಕರ್ಣಿ ಸೇನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಉತ್ತರ ಪ್ರದೇಶ, ಗುಜರಾತ್ ಮುಂತಾದೆಡೆಗಳಲ್ಲಿ ಪ್ರತಿಭಟನೆ ನಡೆಸಿತು. ‘ಪದ್ಮಾವತಿ’ ಸಿನಿಮಾದ ಸೆಟ್‌ ಮೇಲೆ ದಾಳಿ ಮಾಡಿ ದಾಂಧಲೆ ಮಾಡಿತು. ದೀಪಿಕಾ ಪಡುಕೋಣೆ ಮೂಗು ಕೊಯ್ದುಕೊಟ್ಟರೆ, ತಲೆ ಕಡಿದು ಕೊಟ್ಟರೆ ಲಕ್ಷಾಂತರ ಪ್ರಶಸ್ತಿಗಳನ್ನು ಘೋಷಿಸಿತು. ಇಷ್ಟೆಲ್ಲ ಪ್ರತಿಭಟನೆಗೆ ಬದಲಾಗಿ ‘ಪದ್ಮಾವತಿ’ ಸಿನಿಮಾದ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯ್ತು. ಸಿನಿಮಾ ನೋಡಿದ ಕರಣಿ ಸೇನಾ ಸದಸ್ಯರು ಚಿತ್ರತಂಡದ ಬಳಿ ಕ್ಷಮಾಪಣೆ ಕೇಳಿ ರಾಣಿ ಪದ್ಮಾವತಿಯನ್ನು ಸರಿಯಾಗಿಯೇ ತೋರಿಸಿದ್ದೀರೆಂದು ಹೇಳಿ ಸಿನಿಮಾದ ಪರವಾಗಿ ಪ್ರಚಾರವನ್ನು ಮಾಡಿದರು.ಈಗ ಇದೇ ಕರ್ಣಿ ಸೇನಾ ‘ಪೃಥ್ವಿರಾಜ್’ ಸಿನಿಮಾದ ಮೇಲೆ ಬಿದ್ದಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ರಾಜಾ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟ ಸೋನು ಸೂದ್, ಸಂಜಯ್ ದತ್, ಮಾನವ್ ವಿಜ್, ನಿಖಿತಾ ಚಡ್ಡಾ, ಅಮಿತ್ ಸಾದ್ ಇನ್ನೂ ಇತರೆ ನಟರು ನಟಿಸಿದ್ದಾರೆ. ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಸಿನಿಮಾವನ್ನು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿದ್ದು, ಇವರಿಗೆ ಕೆಲವು ದಿನಗಳ ಹಿಂದಷ್ಟೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದೆ. ಜನವರಿಯಲ್ಲಿಯೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡಲ್ಪಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಳ್ಳು ಹೇಳುವ ಚೀನಾದ ಮತ್ತೆ "ಗುಟ್ಟು ರಟ್ಟು"

Sat Feb 5 , 2022
      ಚೀನಾದ ೪೦ ರಿಂದ ೪೫ ಸೈನಿಕರು ಹತರಾಗಿರುವ ಬಗ್ಗೆ ಹೆಚ್ಚಿನ ಪ್ರಸಾರ ಮಾಧ್ಯಮದವರು ಈವರೆಗೂ ಹೇಳಿದ್ದಾರೆ; ಆದರೆ ಸುಳ್ಳು ಹೇಳುವ ಚೀನಾ ಇದನ್ನು ನಿರಾಕರಿಸುತ್ತಾ ಬಂದಿದೆ. ಆದರೂ ಈ ಘಟನೆಯಿಂದ ಭಾರತೀಯ ಸೈನ್ಯದ ಕ್ಷಮತೆಯ ಅರಿವು ಚೀನಾಗೆ ಆಗಿದೆ. ಇದು ಏನು ಕಡಿಮೆಯಿಲ್ಲ ! ಕ್ಯಾನಬೇರಾ (ಆಸ್ಟ್ರೇಲಿಯಾ) – ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ […]

Advertisement

Wordpress Social Share Plugin powered by Ultimatelysocial