ಮುದ್ದು ಮೊಗದ ಸುಂದರಿ! ನಟಿ ಆಲಿಯಾ ಭಟ್ .

 

ಆಲಿಯಾ ಭಟ್ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.ಸಿನಿಮಾ ಹಿನ್ನೆಲೆಯಿಂದ ಬಂದರೂ, ತಂದೆ ಹೆಸರನ್ನು ಎಲ್ಲಿಯೂ ಬಳಕೆ ಮಾಡದೇ ತನ್ನದೇ ಚಾಪು ಮೂಡಿಸಿದ್ದಾರೆ ಮುದ್ದು ಮೊಗದ ಸುಂದರಿ.ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೂ ಡಿಫ್ರೆಂಟ್ ಪಾತ್ರಗಳನ್ನೇ ಆಲಿಯಾ ಆಯ್ಕೆ ಮಾಡಿಕೊಳ್ಳುತ್ತಾರೆ. ಹುಡುಗಿ ಪಾತ್ರದಿಂದ ಹಿಡಿದು, ಪಾಕಿಸ್ತಾನದಲ್ಲಿ ಸ್ಪೈ ಮಾಡೋ ದಿಟ್ಟ ಮಹಿಳೆಯ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.ಇದೀಗ ಆಲಿಯಾ ಭಟ್​ ನಟನೆಯ ಬಹು ನೀರಿಕ್ಷಿತ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಟ್ರೈಲರ್​​ನಲ್ಲಿ ರಿಲೀಸ್​ ಆಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಆಲಿಯಾ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಬಿಳಿ ಸೀರೆ ಉಟ್ಟು ಕ್ಯಾಮರಾಗೆ ಪೋಸ್​​ ಕೊಟ್ಟಿದ್ದಾರೆ.ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಆಲಿಯಾ ಭಟ್ಅ ವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಕಾಮಾಟಿಪುರದಲ್ಲಿ ಆಲಿಯಾ ಭಟ್ ಅಬ್ಬರಿಸಿ ಬೊಬ್ಬಿರಿದಿದ್ದಾ ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಸಖತ್​ ಇಂಪ್ರೆಸ್​ ಮಾಡಿದ್ದಾರೆ.ಕೇವಲ ಟ್ರೈಲರ್​ನಲ್ಲೇ ಇವರ ಅಭಿನಯಕ್ಕೆ ನೂರಕ್ಕೆ ನೂರು ಅಂಕ ಸಿಕ್ಕಿದೆ.ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ.’ಗಂಗೂಬಾಯಿ ಕಾಠಿಯಾವಾಡಿ’ ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ.ಕೆಲ ದಿನಗಳ ಮೊದಲು ಫೆಬ್ರವರಿ 18ರಂದು ತೆರೆಗೆ ಬರಲು ಚಿತ್ರತಂಡ ನಿರ್ಧರಿಸಿ, ಘೋಷಣೆಯನ್ನೂ ಮಾಡಿತ್ತು. ಇದೀಗ ಒಂದು ವಾರದ ನಂತರ ಅಂದರೆ ಫೆಬ್ರವರಿ 25ರಂದು ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಬಿಟೌನ್‌ ನಲ್ಲಿ ಮತ್ತೆ ಜೊತೆಯಾಗಲಿದ್ದಾರಾ ರಶ್ಮಿಕಾ -ವಿಜಯ್‌ ದೇವರಕೊಂಡ | Rashmika Mandanna | Vijay Deverakonda

Fri Feb 4 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial