ಬಾಲಿವುಡ್‌ನ ನಟಿ ಆಲಿಯಾ ಭಟ್‌ ವಿರುದ್ಧ ಎಫ್‌ ಐ ಆರ್‌ ದಾಖಲು

ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರ ಪೈಕಿ ಆಲಿಯಾ ಭಟ್ ಕೂಡಾ ಒಬ್ಬರು. ತಮ್ಮ ಸೌಂದರ್ಯದ ಜೊತೆಗೆ ಅಭಿನಯದಿಂದಲೂ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಈ ಬೆಡಗಿಯ ವಿರುದ್ದ ಮುಂಬೈ ನಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ.ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿಯಮಗಳ ಪ್ರಕಾರ, ಕೋವಿಡ್‌ ಸೋಂಕು ಬಂದರೂ ಬರದಿದ್ದರೂ, ಪಾಸಿಟಿವ್‌ ಬಂದ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ 14-ದಿನಗಳು ಕ್ವಾರಂಟೈನ್‌ ನಲ್ಲಿರಬೇಕು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ, ದೆಹಲಿಯಲ್ಲಿ ತಮ್ಮ ಹೊಸ ಚಿತ್ರ ಬ್ರಹ್ಮಾಸ್ತ್ರ ಮೋಷನ್ ಪೋಸ್ಟರ್ ಬಿಡುಗಡೆಗಾಗಿ ಅಲಿಯಾ ಭಟ್ ರಣಬೀರ್ ಕಪೂರ್ ಜೊತೆ ಹೋಗಿದ್ದರು. ಅಲ್ಲದೆ ಅಲ್ಲಿ ಸಾಕಷ್ಟು ಜನರನ್ನು ಭೇಟಿಯಾಗಿದ್ದರು ಇದರೊಂದಿಗೆ ಅಲಿಯಾ ಭಟ್‌ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲು ಬಿಎಂಸಿ ಸಿದ್ಧತೆ ನಡೆಸಿದೆ.ಈ ಕುರಿತು ಬಿ ಎಂ ಸಿ ಸಾರ್ವಜನಿಕ ಆರೋಗ್ಯ ಸಮಿತಿ ಅಧ್ಯಕ್ಷ ರಾಜು ಪಟೇಲ್, ‘ಮನೆಯಲ್ಲಿ ಐಸೋಲೇಶನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಲಿಯಾ ಭಟ್ ವಿರುದ್ಧ ಪ್ರಕರಣ ದಾಖಲಿಸಲು ಡಿ ಎಂಸಿ ಆರೋಗ್ಯ ಇಲಾಖೆಗೆ ಆದೇಶ ನೀಡಿದ್ದೇನೆ. ಅಲಿಯಾ ಭಟ್‌ ಅನೇಕರಿಗೆ ರೋಲ್‌ ಮಾಡೆಲ್‌ ಅಂತಹ ವ್ಯಕ್ತಿಗಳು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ನಿಯಮಗಳು ಎಲ್ಲರಿಗೂ ಸಮಾನ ಎಂದು ಹೇಳಿದ್ದಾರೆ…

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪ ಸಿನಿಮಾದ ವಿರುದ್ಧ ಕನ್ನಡಿಗರ ಆಕ್ರೋಶ:ಮೊದಲ ದಿನವೇ 'ಪುಷ್ಪ' ಚಿತ್ರಕ್ಕೆ ಬಹಿಷ್ಕಾರ..?

Fri Dec 17 , 2021
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪುಷ್ಪ’ ಚಿತ್ರ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಅದ್ದೂರಿಯಾಗಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅದಕ್ಕೆ ಬಲವಾದ ಕಾರಣ ಕೂಡ ಇದೆ. ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯ ಹೇರಲಾಗುತ್ತಿದೆ. ಹಾಗಾಗಿ ಟ್ವಿಟರ್​ನಲ್ಲಿ #BoycottPushpaInKarnataka ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗುತ್ತಿದೆ. ಇದು ಚಿತ್ರತಂಡಕ್ಕೆ ಮುಳುವಾಗುವ ಸಾಧ್ಯತೆ ಇದೆ.ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡಿದ್ದು, ಕನ್ನಡದ ಖ್ಯಾತ ನಟ ಡಾಲಿ ಧನಂಜಯ […]

Advertisement

Wordpress Social Share Plugin powered by Ultimatelysocial