ಆಲಿಯಾ ಭಟ್- ರಣ್ಬೀರ್ ಮದುವೆ ದಿನಾಂಕ ನಿಗದಿ!

ಬಾಲಿವುಡ್‌ ತಾರಾ ಜೋಡಿ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ವಿವಾಹವಾಗುತ್ತಾರೆ ಎಂಬುದು ಹೊಸ ಸುದ್ದಿಯೇನಲ್ಲ. ಈ ಜೋಡಿ ವಿವಾಹವಾಗಲಿದ್ದಾರೆ ಎಂದು ಕಳೆದ ವರ್ಷದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಈಗ ಈ ಜೋಡಿಯ ವಿವಾಹ ದಿನಾಂಕ ಹಾಗೂ ಸ್ಥಳ ನಿಗದಿಯಾಗಿದೆ.

ಆಲಿಯಾ ಬಟ್-ರಣ್ಬೀರ್ ಕಪೂರ್ ಅವರುಗಳು ಏಪ್ರಿಲ್‌ನಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತು, ಆದರೆ ದಿನಾಂಕ ಪ್ರಕಟಿಸಲಾಗಿರಲಿಲ್ಲ. ಆದರೆ ಈಗ ದಿನಾಂಕವೂ ನಿಗದಿಯಾಗಿದ್ದು, ಏಪ್ರಿಲ್ 17 ರಂದು ಈ ತಾರಾ ಜೋಡಿ ಹಸೆಮಣೆ ಏರಲಿದ್ದಾರೆ.

ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳು ವಿದೇಶದಲ್ಲಿ ವಿವಾಹವಾಗುವುದು ಇತ್ತೀಚಿನ ಟ್ರೆಂಡ್ ಆಗಿದೆ. ಆದರೆ ಈ ಟ್ರೆಂಡ್‌ ಅನ್ನು ಮುರಿಯುತ್ತಿರುವ ಆಲಿಯಾ-ರಣ್ಬೀರ್ ಭಾರತದಲ್ಲಿಯೇ ವಿವಾಹವಾಗಲಿದ್ದಾರೆ. ಹಾಗೆಂದು ಇರುವ ದೇಶದ ಯಾವುದೊ ಪ್ರತಿಷ್ಠಿತ ಹೋಟೆಲ್‌ನಲ್ಲೊ, ರೆಸಾರ್ಟ್‌ನಲ್ಲೊ ವಿವಾಹವಾಗುತ್ತಿಲ್ಲ. ಬದಲಿಗೆ ತಮ್ಮದೇ ಪೂರ್ವಜರ ಜಾಗದಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ.

ಕಪೂರ್ ಕುಟುಂಬದ ಒಡೆತನದ ಐತಿಹಾಸಿಕ ಸ್ಟುಡಿಯೋ ಆರ್‌ಕೆ ಸ್ಟುಡಿಯೋನಲ್ಲಿ ರಣ್ಬೀರ್ ಹಾಗೂ ಆಲಿಯಾ ಭಟ್ ವಿವಾಹವಾಗುತ್ತಿದ್ದಾರೆ. ಈ ವಿಚಾರವನ್ನು ರಣ್ಬೀರ್ ಕುಟುಂಬದ ಆಪ್ತರು ಬಾಲಿವುಡ್‌ನ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಸೀದಿಗಳಲ್ಲಿನ ಮೈಕ್ ವಿವಾದ;

Tue Apr 5 , 2022
  ಬೆಂಗಳೂರು,ಏ.5- ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮಸೀದಿಗಳಲ್ಲಿನ ಆಜಾನ್(ಮೈಕ್) ನಿಷೇಧ ಕುರಿತಂತೆ ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಮಾಡಿಲ್ಲ. ಈ ವಿಚಾರದಲ್ಲಿ ಯಾವುದೇ ಸಂಘಟನೆಯಾಗಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಸಮಾನರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಯಾವುದೇ ಹೊಸ ಕಾನೂನುಗಳನ್ನು ಈಗ ಜಾರಿಗೆ ತರುತ್ತಿಲ್ಲ. 2001, 2002 ಹಾಗೂ ಹೈಕೋರ್ಟ್‍ನ ಆದೇಶಗಳ […]

Advertisement

Wordpress Social Share Plugin powered by Ultimatelysocial