ಲೈಂಗಿಕ ದೌರ್ಜನ್ಯ ಆರೋಪ.

ವದೆಹಲಿ,ಜ.19-ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರು ಮತ್ತು ತರಬೇತುದಾರರ ವಿರುದ್ಧ ಭಾರತದ ಕುಸ್ತಿಪಟುಗಳು ದೆಹಲಿಯ ಜಂತರ್ ಮಂಥರ್‍ನಲ್ಲಿ ಇಂದೂ ಕೂಡ ಪ್ರತಿಭಟನೆ ನಡೆಸಿದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ಭಾರತೀಯ ಕುಸ್ತಿ ಫೆಡರೇಶನ್ WFI ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕುಸ್ತಿಪಟುಗಳಾದ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ, ವಿಶ್ವ ಚಾಂಪಿಯನ್‍ಶಿಪ್ ಪದಕ ವಿಜೇತ ವಿನೇಶ್ ಫೋಗಟ್, ರಿಯೊ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್‍ಶಿಪ್ ಪದಕ ವಿಜೇತೆ ಸರಿತಾ ಮೋರ್, ಸಂಗೀತಾ ಫೋಗಟ್, ಸತ್ಯವರ್ತ್ ಮಲಿಕ್, ಜಿತೇಂದರ್ ಕಿನ್ಹಾ ಮತ್ತು ಸಿಡಬ್ಲ್ಯೂಜಿ ಪದಕ ವಿಜೇತ ಸುಮಿತ್ ಮಲಿಕ್ ಮನ್ತಾರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಪ್ರತಿಭಟನೆ ಕುರಿತು ಮಾತನಾಡಿದ್ದ ಬಜರಂಗ್ ಪುನಿಯಾ, ಫೆಡರೇಷನ್‍ನಿಂದ ಭಾರತೀಯ ಕುಸ್ತಿಪಟುಗಳಿಗೆ ಕಿರುಕುಳ ನೀಡಲಾಗುತ್ತಿದೆ. ಈ ಹೋರಾಟ ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಕಾರ (ಎಸ್‍ಎಐ) ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.

ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ 28 ವರ್ಷದ ವಿನೇಶ್ ಫೋಗಟ್ ಅವರು ಫೆಡರೇಷನ್ ಅಧ್ಯಕ್ಷರು ಮತ್ತು ತರಬೇತುದಾರರ ವಿರುದ್ಧ ಆರೋಪಗಳಿವೆ. ಹಲವಾರು ಕುಸ್ತಿಪಟುಗಳು ಈ ಬಗ್ಗೆ ಹೇಳಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತುದಾರರು ಮತ್ತು ಡಬ್ಲ್ಯುಎಫ್‍ಐ ಅಧ್ಯಕ್ಷರು ಲೈಂಗಿಕ ಕಿರುಕುಳ ನೀಡಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ಕನಿಷ್ಠ 10-20 ಹುಡುಗಿಯರು ನನ್ನ ಬಳಿ ಬಂದು ತಮ್ಮ ಕಥೆಗಳನ್ನು ಹೇಳಿದ್ದಾರೆ ಎಂದು ಅವರು ಕಣ್ಣೀರು ಹಾಕಿದರು.

ಅನೇಕ ಕುಸ್ತಿಪಟುಗಳು ಕುಟುಂಬದ ಹಿನ್ನೆಲೆಯಿಂದ ಭಯಭೀತರಾಗಿದ್ದು, ಮುಂದೆ ಬರಲು ಹೆದರುತ್ತಿದ್ದರು. ಆರೋಪಿಗಳು ಶಕ್ತಿಶಾಲಿಗಳಾಗಿರುವುದರಿಂದ ಅವರೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂಬ ಭಾವನೆಯಿದೆ. ಕುಸ್ತಿಯು ನಮ್ಮ ಏಕೈಕ ಜೀವನೋಪಾಯವಾಗಿದೆ. ಅದರಲ್ಲಿ ತೊಡಗಿಸಿಕೊಳ್ಳಲು ಫೆಡರೇಷನ್ ಬಿಡುತ್ತಿಲ್ಲ. ಸಾಯುವುದು ನಮ್ಮ ಏಕೈಕ ಆಯ್ಕೆಯಾಗಿದೆ ಎಂದು ಅಳಲು ತೋಡಿಕೊಂಡರು.

ಬ್ರಿಜ್ ಭೂಷಣ್ ಸಹರನ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ನಾನು ಅವರ ವಿರುದ್ಧ ಮಾತನಾಡಿದ್ದೆ. ಕ್ರೀಡಾಪಟುಗಳಿಗೆ ಆಗುವ ಗಾಯಗಳಿಗೆ ಯಾರೂ ಜವಾಬ್ದಾರರಾಗಿರುವುದಿಲ್ಲ. ಆದರೆ ಕುಸ್ತಿಪಟುಗಳನ್ನು ನಿಷೇಸುವ ಬಗ್ಗೆ ಮಾತನಾಡುತ್ತಾರೆ. ಫೆಡರೆಷನ್ ಅಧ್ಯಕ್ಷರು ನನ್ನನ್ನು ಖೋಟಾ ಸಿಕ್ಕಾ (ನಿಷ್ಪ್ರಯೋಜಕ) ಎಂದು ಜರಿದಿದ್ದಾರೆ. ಆ ವೇಳೆ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸಿತ್ತು ಫೋಗಟ್ ಹೇಳಿದ್ದಾರೆ.

ಇದಕ್ಕೂ ಮುನ್ನ, ಬ್ರಿಜ್ ಭೂಷಣ್ ಕುಸ್ತಿಪಟುಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು, ಇದು ತಮ್ಮ ವಿರುದ್ಧದ ಪಿತೂರಿ ಎಂದು ದೂರಿದ್ದರು. ಪಿತೂರಿಯ ಹಿಂದೆ ದೊಡ್ಡ ಕೈಗಾರಿಕೋದ್ಯಮಿಯ ಕೈವಾಡವಿದೆ. ವಿನೇಶ್ ಫೋಗಟ್ ಸೋತಾಗ ಆಕೆಗೆ ಪ್ರೇರಣೆ ನೀಡಿದ್ದೆ ನಾನು. ಲೈಂಗಿಕ ಕಿರುಕುಳ ಎಂದಿಗೂ ಸಂಭವಿಸಿಲ್ಲ. ಇದನ್ನು ಸಾಬೀತುಪಡಿಸಿದರೆ, ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಬ್ರಿಜ್ ಭೂಷಣ್ ತೀರುಗೇಟು ನೀಡಿದ್ದರು.

ದೆಹಲಿಯ ಜಂತರ್ ಮಂತರ್‍ನಲ್ಲಿ ನಿನ್ನೆಯಿಂದ ಆರಂಭವಾದ ಪ್ರತಿಭಟನೆ ಇಂದೂ ಮುಂದುವರೆದಿತ್ತು. ಚಾಂಪಿಯನ್ ಕುಸ್ತಿಪಟು ಮತ್ತು ಬಿಜೆಪಿ ನಾಯಕಿ ಬಬಿತಾ ಫೆÇೀಗಟ್ ಸರ್ಕಾರದ ಸಂದೇಶದೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಬಬಿತಾ ಫೆÇೀಗಟ್ ಸರ್ಕಾರದ ಕಡೆಯಿಂದ ಮಧ್ಯಸ್ಥಿಕೆಗಾಗಿ ಬಂದಿದ್ದರು.

ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಬಬಿತಾ, ನಾನು ಮೊದಲು ಕುಸ್ತಿಪಟು, ಸರಕಾರದಲ್ಲಿಯೂ ಇದ್ದೇನೆ ಹಾಗಾಗಿ ಮಧ್ಯಸ್ಥಿಕೆ ವಹಿಸುವ ಜವಾಬ್ದಾರಿ ನನ್ನದು. ಬಿಜೆಪಿ ಸರಕಾರ ಕುಸ್ತಿಪಟುಗಳ ಜೊತೆಗಿದೆ. ಆರೋಪಗಳ ಕುರಿತು ಇಂದೇ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇನೆ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಬಾರಿಯ ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ವೀಕ್ಷಕರ ಸಂಖ್ಯೆ ಶೇ.64ರಷ್ಟು ಕಡಿತ.

Thu Jan 19 , 2023
ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್ಗೆ ಪಾಸ್ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. 2020ಕ್ಕಿಂತ ಮೊದಲು ಕೋವಿಡ್ ಪೂರ್ವದಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ಪರೇಡ್ ವೀಕ್ಷಿಸಲು ಸುಮಾರು 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು. ನವದೆಹಲಿ: ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್ಗೆ ಪಾಸ್ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ […]

Advertisement

Wordpress Social Share Plugin powered by Ultimatelysocial