ಬೂದುಗುಂಬಳಕಾಯಿ ಹಲ್ವಾ ಮಾಡುವ ವಿಧಾನ???

ಬೇಕಾಗುವ ಸಾಮಾಗ್ರಿಗಳು:

  •    1/2 ಕಿ.ಗ್ರಾಂ ಬೂದಿ ಕುಂಬಳ
  • 1/4 ಕಪ್‌ ತುಪ್ಪ
  • 1 ಕಪ್‌ ಸಕ್ಕರೆ
  • ಅಗತ್ಯಕ್ಕೆ ತಕ್ಕಷ್ಟು ಒಣ ದ್ರಾಕ್ಷಿ
  • 1 ಮುಷ್ಟಿಯಷ್ಟು ಗೋಡಂಬಿ
  • ಅಗತ್ಯಕ್ಕೆ ತಕ್ಕಷ್ಟು ಏಲಕ್ಕಿ ಎಸೆನ್ಸ್
  • 3 ಚಮಚ ಹಾಲು
  • 1 Pinch ಕೇಸರಿ

ಕೆಸರಿಯಾ ದಳಗಳನ್ನು ಹಾಲಿನಲ್ಲಿ ಸೇರಿಸಿ ಮತ್ತು ಸ್ವಲ್ಪ ಹೊತ್ತು ಅದನ್ನು ಹಾಲಿನಲ್ಲಿ ನೆನೆಯಲು ಬಿಡಿ. ಇದು ನೀವು ತಯಾರಿಸುವ ಸಿಹಿಯ ರುಚಿ ಮತ್ತು ನೋಟವನ್ನು ಹೆಚ್ಚಿಸುತ್ತದೆ. ಅಲ್ಲದೆ ನೀವು ಸಿಹಿಗೆ ಕೇಸರಿಗಳನ್ನು ಬಳಸುವುದರಿಂದ ನೈಸರ್ಗಿಕವಾಗಿ ಇದು ಬಣ್ಣವನ್ನು ಪಡೆದುಕೊಳ್ಳುತ್ತದೆ.ಬೂದಗುಂಬಳ ಕಾಯಿಯನ್ನು ಕತ್ತರಿಸಿ, ಸಣ್ಣ ತುಂಡುಗಳಾಗಿ ಮಾಡಿ ಸಿಪ್ಪೆ ತೆಗೆಯಿರಿ. ಈಗ ಇದನ್ನು ಚೆನ್ನಾಗಿ ತುರಿದುಕೊಳ್ಳಿ.ಅಂದರೆ ನಿಮ್ಮ ಅಳತೆಗೆ ತಕ್ಕಂತೆ ನೀವು ಇದನ್ನು ತುರಿದುಕೊಳ್ಳಬಹುದು.ಒಂದು ಬಾಣಲೆಗೆ ತುರಿದ ಬೂದುಗುಂಬಳ ಕಾಯಿಯನ್ನು ಸೇರಿಸಿ, ಬೂದಗುಂಬಳಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶ ಇರುತ್ತದೆ. ಆ ನೀರು ಒಣಗುವವರೆಗೂ ಅದನ್ನು ಚೆನ್ನಾಗಿ ಹುರಿಯಿರಿ. ಇದು ಸುಮಾರು ನಾಲ್ಕರಿಂದ ಐದು ನಿಮಿಷ ತೆಗೆದುಕೊಳ್ಳುತ್ತದೆ. ತದನಂತರದಲ್ಲಿ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಚೆನ್ನಾಗಿ ಹದವಾಗುವವರೆಗೂ ಹುರಿಯಿರಿ. ಬಾಣಲೆಗೆ 4 ರಿಂದ 5 ಚಮಚ ತುಪ್ಪ ಸೇರಿಸಿ. ಅದು ಬಿಸಿಯಾಗಲೂ ಬಿಡಿ, ನಂತರದಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಿ. ಇವುಗಳನ್ನು ಕಂದುಬಣ್ಣ ಆಗುವವರೆಗೂ ಹುರಿಯಿರಿ. ನಂತರದಲ್ಲಿ ಅದನ್ನು ಹಲ್ವಾಕ್ಕೆ ಹಾಕಿ ಮಿಶ್ರಣ ಮಾಡಿ. ಈಗ ಇನ್ನೂ ಸ್ವಲ್ಪ ತುಪ್ಪ ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ.ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಹಲ್ವಾ ಬಿಸಿಯಾಗಿರುವಾಗಲೇ ಬಡಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪ’ ಅವತಾರದಲ್ಲಿ ಮಿಂಚಿದ ರವೀಂದ್ರ ಜಡೇಜಾ

Thu Jan 13 , 2022
ಭಾರತ ಚಿತ್ರರಂಗದ ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡುಗಳಿಗೆ ಮತ್ತು ಸಂಭಾಷಣೆಗಳಿಗೆ ಖ್ಯಾತ ಕ್ರಿಕೆಟಿಗರು ವಿಡಿಯೋ ಮಾಡಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಳ್ಳುವುದು ಇತ್ತೀಚೆಗಿನ ಟ್ರೆಂಡ್  ಆಗಿಬಿಟ್ಟಿದೆ.ಅಲ್ಲು ಅರ್ಜುನ್   ಸದ್ಯ ‘ಪುಷ್ಪ: ದಿ ರೈಸ್’ ಯಶಸ್ಸಿನಲ್ಲಿದ್ದಾರೆ. ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿರುವ ಚಿತ್ರ ಹಿಂದಿಯಲ್ಲೇ ಸುಮಾರು ₹ 80 ಕೋಟಿಗೂ ಅಧಿಕ ಹಣವನ್ನ ಬಾಚಿಕೊಂಡಿದೆ. ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ರವೀಂದ್ರ ಜಡೇಜಾ   ‘ಪುಷ್ಪ’ ಲುಕ್​ನಲ್ಲಿ […]

Advertisement

Wordpress Social Share Plugin powered by Ultimatelysocial