ಅಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಸಿಬಿ ಮೂಲಕ ಅಕ್ರಮ ನರೇಗಾ ಕಾಮಗಾರಿ..

ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
ನರೇಗಾ ಕಾಮಗಾರಿಗಳಲ್ಲಿ ಜೆಸಿಬಿ ಅಬ್ಬರ ಸುರುವಾಗಿದೆ.

ಕೆಲಸವಿಲ್ಲದೇ ಕಂಗಾಲಾದ ರೈತರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಹೆಚ್ಚಿನ ಹಣ ಒದಗಿಸಿ ರೂಪಿಸಿರುವ ನರೇಗಾ ಯೋಜನೆಯ ಮಹತ್ವವನ್ನು ಹಳ್ಳಿಗರು ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ……

ಕೆಲವು ಗ್ರಾಮ ಪಂಚಾಯತಿ ಗಳಲ್ಲಿ ಯಂತ್ರಗಳ ಬಳಕೆ ಮಾಡಿಯೇ ಅನೇಕ ಕಾಮಗಾರಿಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ…..

ತಾಲೂಕಿನಲ್ಲಿಯೇ ಅತೀ ಹೆಚ್ಚು ಯಂತ್ರೋಪಕರಣಗಳ ಬಳಕೆ ಇದ್ದು, ಪ್ರತಿಯೊಂದು ಕೆಲಸಕ್ಕೂ ಜೆಸಿಬಿಗಳನ್ನು ಬಳಸುತ್ತಿದ್ದಾರೆ……

ಕಾಮಗಾರಿಗಳನ್ನು ಮಾಡುವಾಗ ತಮ್ಮ ಮನೆಯವರು ಮತ್ತು ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಕೆಲಸ ಆರಂಭಿಸಲು ಛಾಯಾಚಿತ್ರ ತೆಗೆಸಿಕೊಳ್ಳುತ್ತಾರೆ.ಈ ಛಾಯಾಚಿತ್ರಗಳು ತಾವೇ ಖುದ್ದಾಗಿ ಕಾಮಗಾರಿ ಮಾಡಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಆದರೆ ಆರಂಭದಲ್ಲಿ ನಡೆದ ಈ ಫೋಟೋ ಸೆಶನ್‌ನ ನಂತರ ಕಾಮಗಾರಿಗೆ ಜೆಸಿಬಿ ನುಗ್ಗಿಸಲಾಗುತ್ತದೆ…..

ಅಂಬಳೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸದಸ್ಯರ ಆಪ್ತರು ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು….

ಕೇಲವು ಕಾಮಗರಿಗಳ ಮೆಟಿರಿಯಲ್ ಬಿಲ್ ನ್ನು ಕೆಲಸ ಮಾಡಿಲ್ಲದ ಕಾಮಗಾರಿಗೆ ಸಂದಾಯ ಮಾಡಿರುತ್ತಾರೆ.ಪ್ರಶ್ನೆ ಮಾಡಿದಾಗ ನಂತರ ಕೆಲಸ ಮಾಡಿಸಿದ್ದಾರೆ.ಆಗಾಗಿ ಮೇಲಾಧಿಕಾರಿಗಳ ಮಟ್ಟದಲ್ಲಿ ತನಿಖೆಯಾಗಿ ಕ್ರಮ ಜರುಗಿಸಿ ಎಂದು ಗ್ರಾಮಸ್ಥರ ಮನವಿಯಾಗಿದೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಂದ್ರಕಾಂತ ಕರದಳ್ಳಿ

Mon Dec 19 , 2022
  ಚಂದ್ರಕಾಂತ ಕರದಳ್ಳಿ ಮಕ್ಕಳ ಸಾಹಿತ್ಯದಲ್ಲಿ ಮತ್ತು ಕನ್ನಡಪರ ಸಂಘಟನೆಯಲ್ಲಿ ಗಣನೀಯ ಸಾಧನೆ ಮಾಡಿದವರು.ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ ಅವರು 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಚಂದ್ರಕಾಂತ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ‌ ಪಡೆದು, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ […]

Advertisement

Wordpress Social Share Plugin powered by Ultimatelysocial