ವಿಶ್ವದ ಅತ್ಯಂತ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಮುಖೇಶ್​ ಅಂಬಾನಿ ̤

ವಿಶ್ವದ ಅತ್ಯಂತ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಮುಖೇಶ್​ ಅಂಬಾನಿ ಅವರು ಅತ್ಯಂತ ದುಬಾರಿ ರೋಲ್ಸ್​ ರಾಯ್ಸ್​ ಹ್ಯಾಚ್​ಬ್ಯಾಕ್ ಕಾರು 13.14 ಕೋಟಿ ರೂಪಾಯಿಯದು ಖರೀದಿಸಿದ್ದಾರೆ. ಆರ್​ಟಿಒ ಅಧಿಕಾರಿಗಳ ಮಾತನ್ನು ನಂಬುವುದಾದರೆ, ಈ ವರೆಗೆ ದೇಶದಲ್ಲಿ ಖರೀದಿ ಆಗಿರುವ ಅತ್ಯಂತ ದುಬಾರಿ ಕಾರು.ಈ ಕಾರು ರೋಲ್ಸ್ ರಾಯ್ಸ್ ಕಲಿನನ್ ಪೆಟ್ರೋಲ್ ಮಾಡೆಲ್. ಇದನ್ನು ರಿಲಯನ್ಸ್​ನಿಂದ ದಕ್ಷಿಣ ಮುಂಬೈನ ಟಾರ್ಡಿಯೊ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನವರಿ 31, 2022ರಂದು ನೋಂದಣಿ ಆಗಿದೆ, ಎಂದು ಈ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ಹೇಳಿದ್ದಾರೆ.2018ರಲ್ಲಿ ಈ ಕಾರು ಮೊದಲ ಬಾರಿಗೆ ಬಿಡುಗಡೆ ಆದಾಗ 6.95 ಕೋಟಿ ರೂಪಾಯಿ ಇತ್ತು. ವಾಹನ ಕೈಗಾರಿಕೆ ತಜ್ಞರು ಹೇಳುವಂತೆ, ಗ್ರಾಹಕರಿಗೆ ಬೇಕಾದಂತೆ ಮಾರ್ಪಾಡು ಮಾಡಿಸಿರುವುದರಿಂದ ಬೆಲೆ ಹೆಚ್ಚಾಗಿದೆ. ಕಂಪೆನಿಯು “ಟಸ್ಕನ್ ಸನ್” ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 12 ಸಿಲಿಂಡರ್​ನ ಈ ಕಾರು 2,500 ಕೇಜಿ ತೂಕದ್ದಾಗಿದೆ. 564 ಬಿಎಚ್​ಪಿ ಪವರ್ ಉತ್ಪಾದಿಸುತ್ತದೆ. ಇದರ ಜತೆಗೆ ವಿಶೇಷ ನಂಬರ್​ ಪ್ಲೇಟ್​ ಹೊಂದಿದೆ, ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

8-ತಿಂಗಳ-ಮಗು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಕೇರ್‌ಟೇಕರ್ ಅವನನ್ನು ಹಾಸಿಗೆಯ ಮೇಲೆ ಹೊಡೆದ ನಂತರ;

Sat Feb 5 , 2022
ಸೂರತ್: ಸೂರತ್‌ನ ರಾಂಡರ್ ಪ್ರದೇಶದಲ್ಲಿ ಮಗುವಿನ ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ 8 ತಿಂಗಳ ಗಂಡು ಮಗುವನ್ನು ಮಹಿಳಾ ಆರೈಕೆ ಮಾಡುವವರು ಹಾಸಿಗೆಯ ಮೇಲೆ ಹೊಡೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬಾಲಕನ ಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಂದೆ ಶಾಲೆಯೊಂದರ ಕ್ರೀಡಾ ಶಿಕ್ಷಕ ಮಿತೇಶ್ ಪಟೇಲ್ ನೀಡಿದ ದೂರಿನ ಮೇರೆಗೆ ಕೇರ್ ಟೇಕರ್ ಕೋಮಲ್ ತಾಂಡೇಲ್ಕರ್ (27) ಕೊಲೆಯತ್ನಕ್ಕಾಗಿ ರಾಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟೈಮ್ಸ್ […]

Advertisement

Wordpress Social Share Plugin powered by Ultimatelysocial