ಮಾನ್ಯ ಪತ್ರಿಕಾ ಮಿತ್ರರಿಗೆ ನಮಸ್ಕಾರಗಳು!

ಅಣ್ಣ ಜಿ.ಮನೋಹರ ನಾಯ್ಡು ಅವರು ಕೇವಲ 500 ರುಪಾಯಿಗಳಿಂದ 48 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ ನಿಮ್ಮ ಲಹರಿ ಸಂಸ್ಥೆ ಸಂಗೀತ ಕ್ಷೇತ್ರ ಹಾಗು ಸಿನಿಮಾ ಕ್ಷೇತ್ರಕ್ಕೆ ಮೀಸಲಾಗಿದೆ. ಈ ಸಂಸ್ಥೆ ಯಲ್ಲಿ ನೂರಾರು ಗಾಯಕ, ಗಾಯಕಿಯರು, ಸಂಗೀತ ನಿರ್ದೇಶಕರು ಬೆಳಕಿಗೆ ಬಂದಿದ್ದಾರೆ. ಸಂಗೀತ ಕ್ಷೇತ್ರದ ಜೊತೆಯಲ್ಲಿ ಹಲವು ಸದಭಿರುಚಿಯ ಸಿನಿಮಾಗಳು ಲಹರಿ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದು ಕನ್ನಡಿಗರ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ.

ಇತ್ತೀಚೆಗೆ ಲಹರಿ ಸಂಸ್ಥೆ ನಿರ್ಮಾಣ ಮಾಡಿದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಸಂಯೋಜಿಸಿದ ‘ಡಿವೈನ್ ಟೈಟ್ಸ್’ ಎಂಬ ಆಲ್ಬಂ ಸಾಂಗ್ ಗೆ ಲಾಸ್ ಏಂಜಲೀಸ್ ನಲ್ಲಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಲಭಿಸಿದೆ.

ಲಹರಿ ಸಂಸ್ಥೆಯ ಸಂಸ್ಥಾಪಕ ಮನೋಹರ್ ನಾಯ್ಡು ಅವರ ಪುತ್ರ ಚಂದ್ರು ಹಾಗು ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು ಈ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಸ್ವೀಕರಿದ್ದಾರೆ. ಇದು ಕರ್ನಾಟಕಕ್ಕೆ ಕನ್ನಡ ತಾಯಿಗೆ ಹಾಗು ಭಾರತಾಂಬೆಗೆ ಸಂದ ಗೌರವ. ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ, ಸಾಹಿತಿಗಳಿಗು, ಚಲನಚಿತ್ರ ನಿರ್ಮಾಪಕರಿಗೂ ನಮ್ಮನ್ನು ಪೋಷಿಸಿದ ಎಲ್ಲ ಸಂಗೀತ ಪ್ರಿಯರಿಗೂ, ನಮ್ಮ ಸಿಬ್ಬಂದಿಗಳಿಗು ಹಾಗು ಬಹು ಮುಖ್ಯವಾಗಿ 48 ವರ್ಷಗಳಿಂದಲೂ ನಮ್ಮನ್ನು ಎತ್ತಿ ಹಿಡಿದ ಪತ್ರಿಕಾ ಮಿತ್ರರಿಗೆ ನಾವು ಚಿರ ಋಣಿಯಾಗಿದ್ದೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Getting a Significant other

Mon Apr 11 , 2022
If you’ve been thinking of getting a girlfriend but don’t know how to start, really probably best to start out with yourself. You should decide what you want within a girlfriend, therefore you can’t accomplish that by making a checklist. To narrow down your alternatives, start by separating your want-list […]

Advertisement

Wordpress Social Share Plugin powered by Ultimatelysocial