ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ ಟ್ವೀಟ್‌

ನವದೆಹಲಿ: ಕೊರೊನಾ ವೈರಸ್‌ ಸೋಂಕಿಗೆಗೆ ಒಳಗಾಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾರೈಸಿದ್ದಾರೆ.

ಭಾನುವಾರ ರಾತ್ರಿ ಟ್ವೀಟ್‌ ಮಾಡಿದ್ದ ಒರಾಕ್‌ ಒಬಾಮಾ, ‘ನನಗೆ ಕೋವಿಡ್‌ ಇರುವುದು ದೃಢಪಟ್ಟಿದೆ.

ಕಳೆದೆರಡು ದಿನಗಳಿಂದ ಗಂಟಲು ಕೆರೆತವಿದೆ. ಅದನ್ನು ಹೊರತುಪಡಿಸಿದರೆ ನಾನು ಆರಾಮವಾಗಿದ್ದೇನೆ. ನಾನು ಮತ್ತು ಮಿಶೆಲ್ ಲಸಿಕೆ ಹಾಕಿಸಿಕೊಂಡಿದ್ದೇವೆ. ಬೂಸ್ಟರ್‌ ಅನ್ನೂ ಪಡೆದುಕೊಂಡಿದ್ದೇವೆ. ಇದಕ್ಕಾಗಿ ಧನ್ಯವಾದಗಳು. ಇನ್ನು, ಮಿಶೆಲ್‌ಗೆ ಕೋವಿಡ್‌ ನೆಗೆಟಿವ್‌ ಬಂದಿದೆ’ ಎಂದು ಹೇಳಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮೋದಿ, ‘ಬರಾಕ್ ಒಬಾಮಾ ಅವರು ಕೋವಿಡ್-19 ನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ. ನಿಮ್ಮ ಕುಟುಂಬದ ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ನಾನು ಹಾರೈಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್‌ ತೊರೆಯಲು ಅಮೆರಿಕ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚನೆ

Mon Mar 14 , 2022
ಕೀವ್‌: ಉಕ್ರೇನ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕದ ರಾಯಭಾರ ಕಚೇರಿ ಸೋಮವಾರ ಸೂಚಿಸಿದೆ.   ಈ ಕುರಿತು ಟ್ವೀಟ್‌ ಮಾಡಿರುವ ರಾಯಭಾರ ಕಚೇರಿಯು, ‘ಸುರಕ್ಷಿತವಾಗಿದ್ದರೆ ರಸ್ತೆ ಸಾರಿಗೆಯ ಮೂಲಕ ಉಕ್ರೇನ್‌ನಿಂದ ಹೊರಡುವಂತೆ ನಾವು ಅಮೆರಿಕ ನಾಗರಿಕರಿಗೆ ಸೂಚಿಸುತ್ತೇವೆ’ ಎಂದು ತಿಳಿಸಿದೆ.  ‘ಉಕ್ರೇನ್‌ನ ಗಡಿಗಳು ತೆರೆದಿರುತ್ತವೆ. ರಸ್ತೆಗಳಲ್ಲಿನ ಅಪಾಯಗಳನ್ನು ಪರಿಗಣಿಸಿ ಅಮೆರಿಕ ನಾಗರಿಕರು ಉಕ್ರೇನ್‌ ತೊರೆಯಬೇಕು’ ಎಂದು ರಾಯಭಾರ ಕಚೇರಿ ಹೇಳಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹಾಗೂ ಉಕ್ರೇನ್‌ […]

Advertisement

Wordpress Social Share Plugin powered by Ultimatelysocial