ಆನಂದಿ ಗೋಪಾಲ್ ಜೋಶಿ

ಆನಂದಿಬಾಯಿ ಜೋಶಿ, ಮಹಿಳೆಯರು ಮನೆಯಿಂದ ಹೊರ ಹೋಗಬಾರದೆಂಬ ಸ್ಥಿತಿಯಲ್ಲಿದ್ದ ಕಾಲದಲ್ಲಿ ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ ಭಾರತದ ಮೊಟ್ಟ ಮೊದಲ ಆಲೋಪಥಿ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಲ್ಲಿ 1865ರ ಮಾರ್ಚ್ 31ರಂದು ಆನಂದಿ ಜನಿಸಿದರು. ಇವರ ಹುಟ್ಟು ಹೆಸರು ಯಮುನಾ. ಈಕೆಯ ಪೋಷಕರು ಕಲ್ಯಾಣ್ನಲ್ಲಿ ಭೂಮಾಲೀಕರಾಗಿದ್ದರು. ಆದರೆ ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗಿದ್ದರು. ಯಮುನಾ(ಆನಂದಿ) 9ನೇ ವಯಸ್ಸಿಗೆ ಗೋಪಾಲ್ ರಾವ್ ಜೋಶಿ ಜತೆ ಹಸೆಮಣೆ ಏರಿದರು. ರಾವ್ ವಯಸ್ಸಿನಲ್ಲಿ ಆನಂದಿಗಿಂತ 20 ವರ್ಷ ಹಿರಿಯವರಾಗಿದ್ದರು. ಮದುವೆ ಬಳಿಕ ಪತಿ, ಯಮುನಾ ಹೆಸರನ್ನು ಆನಂದಿ ಎಂಬುದಾಗಿ ಬದಲಾಯಿಸಿದ್ದರು.
ಗೋಪಾಲ್ ರಾವ್ ಕಲ್ಯಾಣ್ ಅಂಚೆ ಕಚೇರಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂದೆ ಅವರು ಆಲಿಬಾಗ್ ಎಂಬಲ್ಲಿ ನಂತರ ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸಿದರು.
ಆನಂದಿಬಾಯಿ 14ನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಸಮರ್ಪಕ ಚಿಕಿತ್ಸೆಯ ಕೊರತೆಯಿಂದಾಗಿ ಮಗು 10 ದಿನಗಳ ಕಾಲ ಮಾತ್ರ ಬದುಕಿತ್ತು.ಈ ಘಟನೆಯೇ ಆನಂದಿಬಾಯಿ ಜೀವನದ ಪ್ರಮುಖ ತಿರುವಿಗೆ ಕಾರಣವಾಗುತ್ತದೆ. ತಮ್ಮ ಪತ್ನಿ ಓದಬೆಕೆಂದು ಪತಿ ಗೋಪಲಾರಾವ್ ಜೋಷಿ ತಾವಿದ್ದ ಊರುಗಳಲ್ಲಿನ ಮಿಷಿನರಿ ಶಾಲೆಗಳಲ್ಲಿ ಆನಂದಿಬಾಯಿಗೆ ಓದಲು ಅವಕಾಶ ಅರಸಿ ಸಫಲರಾಗದೆ ಕಡೆಗೆ ಕೊಲ್ಕತ್ತಾಗೆ ಬಂದರು. ಅಲ್ಲಿ ಆನಂದಿಬಾಯಿ ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಕಲಿತರು.
1880ರಲ್ಲಿ ವೈದ್ಯ ಶಿಕ್ಷಣಕ್ಕಾಗಿ ಪತ್ನಿಗೆ ಗೋಪಾಲ್ ರಾವ್ ಪ್ರೋತ್ಸಾಹ ನೀಡಿ ಅಮೆರಿಕದಲ್ಲಿ ಹಲವರೊಂದಿಗೆ ಸಂಪರ್ಕವನ್ನೂ ಮಾಡಿದರು.
ತನ್ನ ಮುಂದಿನ ಗುರಿಯನ್ನು ಕಂಡುಕೊಂಡ ಆನಂದಿ ವೈದ್ಯ ಶಿಕ್ಷಣ ಪಡೆಯಲು 1883ರಲ್ಲಿ ಅಮೆರಿಕಕ್ಕೆ ತೆರಳಿದರು. ಅಮೆರಿಕದ ನೆಲದಲ್ಲಿ 2 ವರ್ಷಗಳ ವಿದ್ಯಾಭ್ಯಾಸ (ಡಿಪ್ಲೊಮಾ ಮೆಡಿಸಿನ್ ತರಬೇತಿ) ಪಡೆದ ಭಾರತದ ಪ್ರಥಮ ಮಹಿಳೆಯಾಗಿದರು.
ಪದವಿ ಪಡೆದು 1886ರಲ್ಲಿ ಭಾರತಕ್ಕೆ ಮರಳಿದ ಆನಂದಿ ಕೊಲ್ಲಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳ ವಿಭಾಗದ ಮುಖ್ಯಸ್ಥೆಯಾಗಿ ವೃತ್ತಿ ಪ್ರಾರಂಭಿಸಿದ್ದರು. ವೃತ್ತಿ ಆರಂಭಿಸಿದ ಒಂದೇ ವರ್ಷದಲ್ಲಿ ಕ್ಷಯರೋಗಕ್ಕೆ ತುತ್ತಾಗಿ 22ನೇ ವಯಸ್ಸಿನಲ್ಲಿ ಆನಂದಿಬಾಯಿ 1887ರಲ್ಲಿ ಸಾವನ್ನಪ್ಪಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್ ಪರಿಸ್ಥಿತಿಗೆ 'ಮೂಕ' ಯುಎಸ್ ಆಡಳಿತವನ್ನು ಟ್ರಂಪ್ ದೂಷಿಸಿದ್ದಾರೆ

Sun Feb 27 , 2022
  ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್ ಪರಿಸ್ಥಿತಿಗೆ ‘ಮೂಕ’ ಯುಎಸ್ ಆಡಳಿತವನ್ನು ಟ್ರಂಪ್ ದೂಷಿಸಿದ್ದಾರೆ ಪ್ರಸ್ತುತ ಯುಎಸ್ ಆಡಳಿತವನ್ನು “ಮೂಕ” ಎಂದು ಕರೆದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಪರಿಸ್ಥಿತಿಯನ್ನು ಈ ರೀತಿ ಬಿಚ್ಚಿಡಲು ಎಂದಿಗೂ ಬಿಡುವುದಿಲ್ಲ ಎಂದು ಶನಿವಾರ ಹೇಳಿದ್ದಾರೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (ಸಿಪಿಎಸಿ) ನಲ್ಲಿ ಅಧ್ಯಕ್ಷರಾಗಿದ್ದ ಅವಧಿಯನ್ನು ನೆನಪಿಸಿಕೊಂಡ ಟ್ರಂಪ್, ಅಮೆರಿಕವು […]

Advertisement

Wordpress Social Share Plugin powered by Ultimatelysocial