ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ.

ಹೊಸದಿಲ್ಲಿ: ವಿಶಾಖಪಟ್ಟಣ(ವೈಝಾಗ್) ನಮ್ಮ ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಘೋಷಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಅಂತರ್ ರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ನಾನು ಕೂಡ ವೈಝಾಗ್‌ಗೆ ಶಿಫ್ಟ್ ಆಗುತ್ತೇನೆ” ಎಂದು ಆಂಧ್ರಪ್ರದೇಶ ಸಿಎಂ ಹೇಳಿದ್ದಾರೆ.

“ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಲು ನಾನು ನಿಮ್ಮನ್ನು ಹಾಗೂ ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ” ಎಂದು ಸಿಎಂ ರೆಡ್ಡಿ ಹೇಳಿದರು.

2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ರಾಜ್ಯ ರಚನೆಯಾದಾಗ ಹೊಸ ರಾಜ್ಯವು ಹೈದರಾಬಾದ್ ಅನ್ನು ತನ್ನ ರಾಜಧಾನಿಯಾಗಿ ಪಡೆಯಿತು.

2015 ರಲ್ಲಿ ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರಕಾರ ಕೃಷ್ಣಾ ನದಿಯ ದಡದಲ್ಲಿರುವ ವಿಜಯವಾಡ-ಗುಂಟು ಪ್ರದೇಶದಲ್ಲಿನ ಅಮರಾವತಿಯನ್ನು ಹೊಸ ರಾಜಧಾನಿಯಾಗಿ ರೂಪಿಸುವುದಾಗಿ ಘೋಷಿಸಿತ್ತು. ನಂತರ 2020 ರಲ್ಲಿ ರಾಜ್ಯವು ಅಮರಾವತಿ, ವಿಶಾಖಪಟ್ಟಣಂ ಹಾಗೂ ಕರ್ನೂಲ್ ಮೂರು ರಾಜಧಾನಿಗಳನ್ನು ಹೊಂದಲು ಯೋಜಿಸಿತ್ತು. ಅಮರಾವತಿ ಔಪಚಾರಿಕವಾಗಿ ರಾಜಧಾನಿಯಾಗಿ ಉಳಿಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಗೆ ಬಂದಾಗ ಡಿಕೆ ಶಿವಕುಮಾರ್ ಎಲ್ಲಿ ಲುಂಗಿ ಬಿಚ್ಚುತ್ತಾರೆ,

Tue Jan 31 , 2023
ಬೆಳಗಾವಿ : ಬೆಳಗಾವಿಗೆ ಬಂದಾಗ ಡಿಕೆ ಶಿವಕುಮಾರ್ ಎಲ್ಲಿ ಲುಂಗಿ ಬಿಚ್ಚುತ್ತಾರೆ, ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಗೊತ್ತಿದೆ. ನನ್ನ ಬಳಿ ಡಿ.ಕೆ ಶಿವಕುಮಾರ್ ಸಿ.ಡಿ ಇದೆ ಎಂದು ಎಂಎಲ್ಸಿ ಲಖನ್ ಜಾರಕಿಹೊಳಿ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಮೇಲೆ ಸಿಬಿಐ ತನಿಖೆ ಮಾಡುವಂತೆ ಆಗ್ರಹಿಸಿದ್ದ ರಮೇಶ್ ಜಾರಕಿಹೊಳಿಗೆ ಡಿಕೆಶಿ ತಿರುಗೇಟು ನೀಡಿದ್ದರು. ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ..? ಎಂದು ಏಕವಚನದಲ್ಲಿಯೇ ಡಿಕೆಶಿ ಪ್ರಶ್ನೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ […]

Advertisement

Wordpress Social Share Plugin powered by Ultimatelysocial